ಅಶ್ವಿನಿ, ಸುಧಿಗೆ ಮಾರಿಹಬ್ಬ; ರಕ್ಷಿತಾಗೆ ಕಿಚ್ಚನ ಚಪ್ಪಾಳೆ? ಒಂದೇ ಪ್ರೋಮೋದಲ್ಲಿ ಹಲವು ವಿಚಾರ

ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ನಾಲ್ಕನೇ ವಾರದ ಪಂಚಾಯ್ತಿ ಮಾಡಲು ಬಂದಿದ್ದಾರೆ. ಈ ವೇಳೆ ಅವರು ಹಲವು ವಿಚಾರಗಳನ್ನು ಹಂಚಿಕೊಳ್ಳುವ ಸೂಚನೆ ನೀಡಿದ್ದಾರೆ. ರಕ್ಷಿತಾಗೆ ಕಿಚ್ಚನ ಚಪ್ಪಾಳೆ ನೀಡಿ, ಅಶ್ವಿನಿ ಹಾಗೂ ಸುಧಿಗೆ ಪಾಠ ಕಲಿಸೋ ಸೂಚನೆ ನೀಡಿದ್ದಾರೆ.

ಅಶ್ವಿನಿ, ಸುಧಿಗೆ ಮಾರಿಹಬ್ಬ; ರಕ್ಷಿತಾಗೆ ಕಿಚ್ಚನ ಚಪ್ಪಾಳೆ? ಒಂದೇ ಪ್ರೋಮೋದಲ್ಲಿ ಹಲವು ವಿಚಾರ
ಬಿಗ್ ಬಾಸ್

Updated on: Oct 25, 2025 | 1:09 PM

ಅಶ್ವಿನಿ ಗೌಡ ಅವರು ಪದೇ ಪದೇ ಎಡವುತ್ತಿದ್ದಾರೆ. ಅವರು ಹೊರಗೆ ಹೀರೋಯಿನ್ ಆಗಿ, ಕನ್ನಡ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ, ಬಿಗ್ ಬಾಸ್ ಮನೆಯಲ್ಲಿ ಮಾತ್ರ ಲಯ ತಪ್ಪುತ್ತಿದ್ದಾರೆ. ಕಳೆದ ವಾರ ಸುದೀಪ್ ಬುದ್ಧಿವಾದ ಹೇಳಿದರೂ ಅವರು ತಿದ್ದಿಕೊಂಡಿಲ್ಲ. ಈ ಕಾರಣದಿಂದ ಅವರಿಗೆ ಮತ್ತೆ ಸುದೀಪ್ ಕಡೆಯಿಂದ ಪಾಠ ಇರಲಿದೆ ಎಂದು ಹೇಳಲಾಗುತ್ತಾ ಇದೆ. ಈಗ ರಿಲೀಸ್ ಆಗಿರೋ ಪ್ರೋಮೋ ಇದಕ್ಕೆ ಇಂಬು ನೀಡಿದೆ.

ರೂಲ್ಸ್ ಬ್ರೇಕ್

ಅಶ್ವಿನಿ ಗೌಡ ಅವರು ಈ ಬಾರಿ ಪದೇ ಪದೇ ರೂಲ್ಸ್ ಬ್ರೇಕ್ ಮಾಡಿದ್ದರು. ಕಳಪೆ ಆದ ಬಳಿಕ ಅವರು ತರಕಾರಿ ಕತ್ತರಿಸಿಕೊಡದೆ ಆಟ ಆಡಿಸಿದ್ದರು. ಇನ್ನು, ಮನೆಯ ವಸ್ತುಗಳ ಬಳಕೆ ಮಾಡಿದ್ದರು. ಇದೆಲ್ಲವೂ ಉದ್ದೇಶ ಪೂರ್ವಕ. ಇದರಿಂದ ಅವರ ನಿಜವಾದ ವ್ಯಕ್ತಿತ್ವದ ಅನಾವರಣ ಆಯಿತು. ಈ ಕಾರಣಕ್ಕೆ ಅವರಿಗೆ ಸುದೀಪ್ ಕಡೆಯಿಂದ ಪಾಠ ಸಿಗಬಹುದು.

ಇದನ್ನೂ ಓದಿ
‘ದೈಹಿಕ ವಿಚಾರದಲ್ಲಿ ವಂಚನೆ ಮಾಡೋದು ದೊಡ್ಡದಲ್ಲ’; ಅಕ್ಷಯ್ ಪತ್ನಿ ಟ್ವಿಂಕಲ್
ಭುವನ್ ಗೌಡ ಮದುವೆಯಲ್ಲಿ ಹ್ಯಾಂಡ್ಸಮ್ ಹಂಕ್ ರೀತಿ ಕಾಣಿಸಿಕೊಂಡ ಯಶ್
‘ನಿನ್ನ ಪಂಚೆ ಎಳೆಯೋಕೆ ಬರುತ್ತೆ, ಥೂ’; ಕೀಳು ಮಟ್ಟಕ್ಕೆ ಇಳಿದ ಅಶ್ವಿನಿ
‘ಸೀತಾ ರಾಮ’ ಮುಗಿದ ಬಳಿಕ ಏನು ಮಾಡ್ತಿದ್ದಾಳೆ ಸಿಹಿ? ಇಲ್ಲಿದೆ ವಿವರ

ಬಿಗ್ ಬಾಸ್ ಪ್ರೋಮೋ

ಕಾಕ್ರೋಚ್ ಸುಧಿ ಸಲ್ಲದ ಪದ ಬಳಕೆ

ರಕ್ಷಿತಾ ಶೆಟ್ಟಿ ಅವರಿಗೆ ಕಾಕ್ರೋಚ್ ಸುಧಿ ಅವರು ‘ಸೆಡೆ’ ಎಂಬ ಪದ ಬಳಕೆ ಮಾಡಿದ್ದರು. ಇದು ತಪ್ಪು ಎಂದು ಮನೆಯವರು ಹೇಳಿದಾಗ ಸುಧಿ, ‘ನಮ್ಮೂರಲ್ಲಿ ಸಣ್ಣ ಮಕ್ಕಳಿಗೆ ಸೆಡೆ’ ಎಂದು ಹೇಳುತ್ತೇವೆ ಎಂದು ಸಮರ್ಥನೆ ನೀಡಿದ್ದರು. ಸುಧಿ ಸಮರ್ಥನೆಗೆ ಅಶ್ವಿನಿ ಅವರು ಸ್ಟ್ಯಾಂಡ್ ಕೊಟ್ಟಿದ್ದರು. ಈ ವಿಚಾರದಲ್ಲಿ ಸುಧಿಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳೋದು ಪಕ್ಕಾ ಆಗಿದೆ.

ಇದನ್ನೂ ಓದಿ: ಸುದೀಪ್ ಬರುವ ಮೊದಲೇ ಗಿಲ್ಲಿಯ ‘ಕೆಂಪೇಗೌಡ’ ಮೀಸೆ ಬೋಳಿಸಿದ ಸ್ಪರ್ಧಿಗಳು

ರಕ್ಷಿತಾಗೆ ಚಪ್ಪಾಳೆ?

ರಕ್ಷಿತಾಗೆ ಈ ವಾರದ ‘ಕಿಚ್ಚನ ಚಪ್ಪಾಳೆ’ ಸಿಕ್ಕರೂ ಅಚ್ಚರಿ ಏನಿಲ್ಲ. ಅವರು ಆಟ ಎಂದಾಗ ಸ್ಫೂರ್ತಿದಾಯಕವಾಗಿ ಆಟ ಆಡಿದ್ದಾರೆ. ಮಾತು ಎಂಬುದು ಬಂದಾಗ ಅವರು ತೂಕದ ಮಾತುಗಳನ್ನು ಆಡಿದ್ದಾರೆ. ‘ನಾವಿಲ್ಲಿ ಸ್ಟ್ರಗಲ್ ಮಾಡಿದ್ದೇವೆ, ನಿನ್ನೆ ಮೊನ್ನೆ ಬಂದವರು ಈಗ ಕ್ಯಾಪ್ಟನ್ ಆಗುತ್ತಿದ್ದಾರೆ’ ಎಂದು ಅಶ್ವಿನಿ ಗೌಡ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಬಗ್ಗೆ ಮಾತನಾಡಿದ್ದರು. ಇದಕ್ಕೆ ಉತ್ತರಿಸಿದ್ದ ರಕ್ಷಿತಾ, ‘ಹೊರಗೆ ಅವರು ಇನ್ನೂ ಸ್ಟ್ರಗಲ್ ಮಾಡಿರಬಹುದಲ್ಲ’ ಎಂದು ಪ್ರಬುದ್ಧತೆ ತೋರಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.