
ನಟ ಕಿಚ್ಚ ಸುದೀಪ್ (Kichcha Sudeep) ಅವರು ಮೊದಲ ದಿನ ಅಭಿಮಾನಿಗಳ ಜೊತೆ ಸಿನಿಮಾ ನೋಡೋದನ್ನು ನಿಲ್ಲಿಸಿ ಬಹಳ ಸಮಯ ಕಳೆದಿದೆ. ನೂಕು ನುಗ್ಗಲು ಉಂಟಾಗುತ್ತದೆ ಎಂಬ ಕಾರಣಕ್ಕೆ ಇದನ್ನು ಅವರು ಅವಾಯ್ಡ್ ಮಾಡುತ್ತಾ ಬರುತ್ತಿದ್ದಾರೆ. ಈಗ ‘ಮಾರ್ಕ್’ ಸಿನಿಮಾ ಹಿಟ್ ಆಗಿದ್ದು, ಅವರು ಅಭಿಮಾನಿಗಳ ಜೊತೆ ಚಿತ್ರ ನೋಡಲು ನಿರ್ಧರಿಸಿದ್ದಾರೆ. ಡಿಸೆಂಬರ್ 31ರಂದು ಬೆಂಗಳೂರು ಹಾಗೂ ಮೈಸೂರಿನಲ್ಲಿ ಸುದೀಪ್ ‘ಮಾರ್ಕ್’ ವೀಕ್ಷಣೆ ಮಾಡಲಿದ್ದಾರೆ.
ಕಳೆದ ವರ್ಷ ಡಿಸೆಂಬರ್ 25ರಂದು ‘ಮ್ಯಾಕ್ಸ್’ ಸಿನಿಮಾ ರಿಲೀಸ್ ಆಗಿತ್ತು. ಡಿಸೆಂಬರ್ 31ರಂದು ಅವರು ಪತ್ನಿ ಪ್ರಿಯಾ, ನಿರ್ದೇಶಕ ವಿಜಯ್ ಕಾರ್ತಿಕೇಯ, ಗಾಯಕ ವಿಜಯ್ ಪ್ರಕಾಶ್ ಹಾಗೂ ಅಭಿಮಾನಿಗಳ ಜೊತೆ ನರ್ತಕಿ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿದ್ದರು. ಈ ಬಾರಿ ಡಿಸೆಂಬರ್ 31ರಂದು ಫ್ಯಾನ್ಸ್ ಜೊತೆ ‘ಮಾರ್ಕ್’ ಸಿನಿಮಾ ನೋಡಲಿದ್ದಾರೆ.
ಡಿಸೆಂಬರ್ 31ರಂದು ಬೆಂಗಳೂರಿನ ಗಾಂಧಿ ನಗರದಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ಬೆಳಿಗ್ಗೆ 10.30ರ ಶೋನ ಸುದೀಪ್ ವೀಕ್ಷಿಸಲಿದ್ದಾರೆ. ಈ ಶೋ ಪೂರ್ಣಗೊಂಡ ಬಳಿಕ ಅವರು ಅಲ್ಲಿಂದ ನೇರವಾಗಿ ಮೈಸೂರಿಗೆ ತೆರಳಲಿದ್ದಾರೆ. ಮೈಸೂರಿನ ಸಂಗಮ ಚಿತ್ರಮಂದಿರದಲ್ಲಿ ಸಂಜೆ 4.30ಕ್ಕೆ ಅಭಿಮಾನಿಗಳ ಜೊತೆ ಸಿನಿಮಾ ನೋಡಲಿದ್ದಾರೆ.
This is a moment every fan waits for 🔥
Have a reMARKable experience by watching #MARK with Baadshah 🦁 himself along with the MARK team tomorrow!
📍Santosh Theatre, 10:30 AM
📍Sangam Theatre at 4:30 PMSee you there 🥳
Running Successfully in theatres near you!
Grab your… pic.twitter.com/irv0Eg43Md— Harish Arasu PRO (@PROHarisarasu) December 30, 2025
ಈ ಮೊದಲು ಮಾಧ್ಯಮದವರ ಜೊತೆ ಮಾತನಾಡಿದ್ದ ಸುದೀಪ್, ‘ಫಸ್ಟ್ ಡೇ ಸಿನಿಮಾ ನೋಡ್ತೀರಾ’ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದರು. ‘ಸದ್ಯಕ್ಕೆ ಆ ಬಗ್ಗೆ ಆಲೋಚನೆ ಇಲ್ಲ. ಸಿನಿಮಾ ಚೆನ್ನಾಗಿ ಹೋದರೆ ಅಭಿಮಾನಿಗಳ ಜೊತೆ ಡಿಸೆಂಬರ್ 31ರಂದು ಸಿನಿಮಾ ನೋಡುತ್ತೇನೆ’ ಎಂದಿದ್ದರು. ಈಗ ಚಿತ್ರಕ್ಕೆ ಮೆಚ್ಚುಗೆ ಸಿಕ್ಕ ಹಿನ್ನೆಲೆಯಲ್ಲಿ ಅವರು ಫ್ಯಾನ್ಸ್ ಜೊತೆ ‘ಮಾರ್ಕ್’ ಸಿನಿಮಾ ವೀಕ್ಷಿಸುತ್ತಿದ್ದಾರೆ.
ಇದನ್ನೂ ಓದಿ: ನಾಲ್ಕು ದಿನಕ್ಕೆ 35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಮಾರ್ಕ್’; ದಾಖಲೆ ನಿರ್ಮಾಣ
ಡಿಸೆಂಬರ್ 25ರಂದು ರಿಲೀಸ್ ಆದ ‘ಮಾರ್ಕ್’ ಸಿನಿಮಾ ನಾಲ್ಕು ದಿನಗಳಲ್ಲಿ 35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರ ಸೂಪರ್ ಹಿಟ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:20 pm, Tue, 30 December 25