ಕಿರಣ್ ರಾಜ್ ಆ್ಯಟಿಟ್ಯೂಡ್ ಸಾಕಷ್ಟು ಜನರಿಗೆ ಇಷ್ಟವಾಗುತ್ತದೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ನಟನೆ ಮಾತ್ರವಲ್ಲದೆ, ಸಾಮಾಜಿಕ ಕೆಲಸಗಳ ಮೂಲಕವೂ ಅವರು ಹೆಚ್ಚು ಗುರುತಿಸಿಕೊಂಡಿದ್ದಾರೆ. ಹಾಗಂತ ಅವರ ಜೀವನ ಸುಲಭವಾಗಿರಲಿಲ್ಲ. ಆರಂಭದಲ್ಲಿ ತುಂಬಾನೇ ಕಷ್ಟಪಟ್ಟು ನಟನೆ ಕ್ಷೇತ್ರಕ್ಕೆ ಬಂದ ಅವರು, ಈಗ ಕಿರುತೆರೆ ಹಾಗೂ ಹಿರಿತೆರೆ ಎರಡಲ್ಲೂ ಬ್ಯುಸಿಯಾಗಿದ್ದಾರೆ. ಆರಂಭದ ದಿನಗಳಲ್ಲಿ ಕಿರಣ್ ರಾಜ್ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದರು. ಇದಕ್ಕೆ ಅವರು ಈಗ ಉತ್ತರಿಸಿದ್ದಾರೆ.
ಕಿರಣ್ ರಾಜ್ ಬಿಗ್ ಬಾಸ್ ಮಿನಿ ಸೀಸನ್ಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಆರಂಭದಲ್ಲಿ ಅವರಿಗೆ ಹೊಂದಿಕೊಳ್ಳೋದು ಕೊಂಚ ಕಷ್ಟವಾಯಿತಾದರೂ ನಂತರ ಎಲ್ಲರ ಜತೆ ಬೆರೆತರು. ಕೊನೆಯ ದಿನ ಅವರು ಕೆಲ ಪ್ರಶಸ್ತಿಗಳನ್ನು ಕೂಡ ಬಾಚಿಕೊಂಡರು. ಈ ವಿಚಾರದ ಬಗ್ಗೆ ಅವರು ಮಾತನಾಡಿದ್ದಾರೆ. ಅಲ್ಲದೆ ಹಳೆಯ ಘಟನೆ ನೆನೆದು ಅವರು ಭಾವುಕರಾದರು.
ಬಿಗ್ ಬಾಸ್ ಮಿನಿ ಸೀಸನ್ ಪೂರ್ಣಗೊಂಡಿದೆ. ಕೊನೆಯ ದಿನ ಸುದೀಪ್ ಅವರು ಬಿಗ್ ಬಾಸ್ ನಿರೂಪಣೆ ಮಾಡಿದ್ದಾರೆ. ಈ ವೇಳೆ ವಿವಿಧ ಪ್ರಶಸ್ತಿಗಳನ್ನು ಸ್ಪರ್ಧಿಗಳಿಗೆ ನೀಡಲಾಗಿದೆ. ‘ಸ್ಟೈಲಿಶ್ ಹುಡುಗ’ ಪ್ರಶಸ್ತಿಯನ್ನು ಸುದೀಪ್ ಘೋಷಣೆ ಮಾಡಿದರು. ಈ ಪ್ರಶಸ್ತಿ ಕಿರಣ್ ರಾಜ್ಗೆ ಒಲಿದಿದೆ. ಅವರು ವೇದಿಕೆ ಮೇಲೆ ಬಂದು ಈ ಪ್ರಶಸ್ತಿ ಸ್ವೀಕರಿಸಿದರು.
‘ಈ ಬಗ್ಗೆ ಏನಾದರೂ ಹೇಳೋದು ಇದೆಯೇ’ ಎಂದು ಸುದೀಪ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಕಿರಣ್ ರಾಜ್, ‘ಕಾಲೇಜಿನಲ್ಲಿ ಒಂದು ಸಲ ಆದ ಘಟನೆ ನೆನಪಿಗೆ ಬರುತ್ತದೆ. ನನಗೆ ಡ್ರೆಸ್ ಸರಿಯಾಗಿ ಹಾಕೋಕೆ ಬರಲ್ಲ ಎಂದು ನನ್ನ ಗೆಳೆಯರು ನನ್ನನ್ನು ಅವಾಯ್ಡ್ ಮಾಡ್ತಾ ಇದ್ರು. ಡ್ರೆಸ್ ಬಗ್ಗೆ ನಂಗೆ ಗೊತ್ತಿರಲಿಲ್ಲ. ಆಗ ತುಂಬಾ ಅವಮಾನಗಳನ್ನು ನೋಡಿದ್ದೇನೆ. ಪ್ರತಿಯೊಂದಕ್ಕೂ ಉತ್ತರ ಇರುತ್ತದೆ. ಬಹುಶಃ ಅಂದಿನ ಘಟನೆಗೆ ಇದು ಉತ್ತರ’ ಎಂದರು.
ಇದನ್ನೂ ಓದಿ: ‘ನಾನು ಎಷ್ಟು ಟೇಕ್ ತೆಗೆದುಕೊಳ್ತೀನಿ ಅಂತ ಬೆಟ್ ಕಟ್ಟುತ್ತಿದ್ದರು’; ಅವಮಾನದ ಹಾದಿ ನೆನೆದ ಕಿರಣ್ ರಾಜ್
Kiran Raj: ಕೊರೊನಾ ಸಂಕಷ್ಟದಲ್ಲಿ ಪ್ರತಿದಿನ ಸಾವಿರ ಜನರಿಗೆ ಊಟ ಹಾಕುತ್ತಿರುವ ‘ಕನ್ನಡತಿ’ ಕಿರಣ್ ರಾಜ್