
ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಮೊದಲ ಕಳಪೆ ಸಿಕ್ಕಿದೆ. ಕಿರಣ್ ಶಾಸ್ತ್ರಿ ಅವರು ಈ ಸೀಸನ್ನ ಮೊದಲ ಕಳಪೆ ಆಗಿ ಜೈಲು ಸೇರಿದ್ದಾರೆ. ಬಹುತೇಕರು ಕಿರಣ್ ಹೆಸರು ತೆಗೆದುಕೊಂಡರು. ಆದರೆ, ಕಿರಣ್ ಶಾಸ್ತ್ರಿಗೆ ಈ ವಾರದ ಕಿಚ್ಚನ ಚಪ್ಪಾಳೆ ಸಿಗುವ ಎಲ್ಲಾ ಲಕ್ಷಣ ಗೋಚರವಾಗಿದೆ. ಅವರು ಈ ಚಪ್ಪಾಳೆಗೆ ಅರ್ಹರು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕಿರಣ್ ಶಾಸ್ತ್ರಿ ಅವರ ಮೊದಲ ಎರಡು ವಾರದ ನಡವಳಿಕೆಗೂ, ಮೂರನೇ ವಾರದ ನವಳಿಕೆಗೂ ಅಜಗಜಾಂತರ ವ್ಯತ್ಯಾಸ ಇದೆ. ಅವರು ಮೊದಲ ಎರಡು ವಾರ ಎಲ್ಲರನ್ನೂ ಟೀಕಿಸುತ್ತಾ, ಬಾಯಿಗೆ ಬಂದಂತೆ ಮಾತನಾಡುತ್ತಾ ಸಮಯ ಕಳೆಯುತ್ತಿದ್ದರು. ಅವರು ಎಲ್ಲರಿಗೂ ಕಿರಿಕಿರಿ ಉಂಟು ಮಾಡಿದ್ದರು. ಸುದೀಪ್ ಅವರು ಕಿರಣ್ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು.
ಸುದೀಪ್ ಅವರು ಬೈದ ಬಳಿಕ ಮಾತನಾಡಿದ್ದ ಕಿರಣ್, ‘ನನ್ನ ತಪ್ಪು ಏನು ಎಂಬುದು ನನಗೆ ಅರಿವಾಗಿದೆ. ನಾನು ಇದರಿಂದ ಪಾಠ ಕಲಿತುಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ನನ್ನನ್ನು ನಾನು ಬದಲಾಯಿಸಿಕೊಳ್ಳುತ್ತೇನೆ’ ಎಂದು ಹೇಳಿದ್ದರು. ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಮಂದಿ ಈ ಮಾತನ್ನು ಹೇಳುತ್ತಾರೆ. ಆದರೆ, ಯಾರೊಬ್ಬರೂ ಇದನ್ನು ಪಾಲಿಸುವುದಿಲ್ಲ. ಆದರೆ, ಕಿರಣ್ ಶಾಸ್ತ್ರಿ ಹಾಗಲ್ಲ. ಅವರು ತಪ್ಪನ್ನು ತಿದ್ದುಕೊಂಡಿದ್ದಾರೆ.
ಈ ವಾರದ ಆರಂಭದಲ್ಲಿ ಚಟುವಟಿಕೆ ಒಂದನ್ನು ನೀಡಲಾಗಿತ್ತು. ಬಿಗ್ ಬಾಸ್ ಮನೆಯ ವಾರದ ಟಾಸ್ಕ್ನಿಂದ ಹೊರಗಿಡುವ ಅವಕಾಶವನ್ನು ಸ್ಪರ್ಧಿಗಳಿಗೆ ನೀಡಲಾಗಿತ್ತು. ಈ ವೇಳೆ ಅನೇಕರು ಕಿರಣ್ ಹೆಸರು ತೆಗೆದುಕೊಂಡು, ‘ನೀವು ಮೊದಲ ಎರಡು ವಾರ ನಡೆದುಕೊಂಡ ರೀತಿ ಸರಿ ಇಲ್ಲ’ ಎಂದು ಹೇಳಿದ್ದರು. ಇದನ್ನು ಕಿರಣ್ ಒಪ್ಪಿಕೊಂಡಿದ್ದಾರೆ. ತಪ್ಪನ್ನು ತಿದ್ದಿಕೊಳ್ಳೋದಾಗಿ ತುಂಬಾನೇ ಪ್ರೀತಿಯಿಂದಲೇ ಹೇಳಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 13: ಕಳಪೆ ಪಟ್ಟ ಪಡೆದು ಜೈಲು ಸೇರಿದ ಕಿರಣ್ ಶಾಸ್ತ್ರಿ
ಈ ವಾರ ಕಳಪೆಗೆ ಬಹುತೇಕರು ಕಿರಣ್ ಹೆಸರು ತೆಗೆದುಕೊಂಡಿದ್ದಾರೆ. ‘ಅವರು ದೇವಿಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ’ ಎಂಬುದು ಉಳಿದ ಸ್ಪರ್ಧಿಗಳ ಕಾರಣ ಆಗಿತ್ತು! ಸ್ಪರ್ಧಿಗಳು ಹೀಗೆ ಹೇಳಿದಾಗ, ‘ನಾನು ಮುಂದಿನ ದಿನಗಳಲ್ಲಿ ಇದನ್ನು ತಿದ್ದಿಕೊಳ್ಳುತ್ತೇನೆ, ಉತ್ತಮಬಾಗುತ್ತೇನೆ’ ಎಂದು ಹೇಳಿದರು. ಅವರ ಈ ದೊಡ್ಡ ಬದಲಾವಣೆಗೆ ಕಿಚ್ಚನ ಚಪ್ಪಾಳೆ ಸಿಗಬಹುದು ಎಂದು ಊಹಿಸಲಾಗಿದೆ. ಇಂದು (ಸೆಪ್ಟೆಂಬರ್ 26) ರಾತ್ರಿ 8 ಗಂಟೆಗೆ ಬಿಗ್ ಬಾಸ್ ಪ್ರಸಾರವಾಗಲಿದೆ. ಸತತ ಮೂರು ಗಂಟೆ ಶೋ ಇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.