Lakshana Serial: ತಂದೆಯ ತಿರಸ್ಕಾರವೇ ಶ್ವೇತಾಳ ಪಾಲಿಗೆ ವರದಾನ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 27, 2022 | 10:42 AM

ಸ್ವಂತ ತಂದೆಯ ವಿರುದ್ಧನೇ ನಿಂತು ಅವರಿಗೆ ಅವಮಾನ ಮಾಡಿದ ಶ್ವೇತಾಳನ್ನು ಸ್ವತಃ ತುಕಾರಾಮ್ ಮನೆಯಿಂದ ಹೊರ ಹಾಕುತ್ತಾರೆ. ಅದೇ ಸರಿಯಾದ ಸಮಯಕ್ಕೆ ಶಕುಂತಳಾದೇವಿ ಕೂಡಾ ಅಲ್ಲಿಗೆ ಬರುತ್ತಾರೆ.

Lakshana Serial: ತಂದೆಯ ತಿರಸ್ಕಾರವೇ ಶ್ವೇತಾಳ ಪಾಲಿಗೆ ವರದಾನ
Lakshana Serial
Follow us on

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷಣ ಧಾರವಾಹಿಯು ವಿಭಿನ್ನ ಕಥೆಗಳ ಮೂಲಕ ವೀಕ್ಷಕರ ಮನ ಗೆದ್ದಿದೆ. ಎಲ್ಲವೂ ಶ್ವೇತಾಳಿಗೆ ಹೇಗೆ ಬೇಕೋ ಹಾಗೆಯೇ ನಡೆಯುತ್ತಿದೆ. ಒಂದು ಅರ್ಥದಲ್ಲಿ ಅದೃಷ್ಟ ಲಕ್ಷ್ಮೀ ಅವಳ ಪಾಲಿಗೆ ಒಲಿದಿದೆ ಎಂದು ಹೇಳಬಹುದು. ಸ್ವಂತ ತಂದೆಯ ವಿರುದ್ಧನೇ ನಿಂತು ಅವರಿಗೆ ಅವಮಾನ ಮಾಡಿದ ಶ್ವೇತಾಳನ್ನು ಸ್ವತಃ ತುಕಾರಾಮ್ ಮನೆಯಿಂದ ಹೊರ ಹಾಕುತ್ತಾರೆ. ಅದೇ ಸರಿಯಾದ ಸಮಯಕ್ಕೆ ಶಕುಂತಳಾದೇವಿ ಕೂಡಾ ಅಲ್ಲಿಗೆ ಬರುತ್ತಾರೆ. ಶ್ವೇತಾಳನ್ನು ಮನೆಯಿಂದ ಹೊರ ಹಾಕುವ ದೃಶ್ಯವನ್ನು ಕಂಡು ಕೋಪಗೊಂಡ ಶಕುಂತಳಾದೇವಿ ತುಕಾರಾಮ್‌ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಾಗ, ಇದು ನಮ್ಮ ಮನೆಯ ವಿಚಾರ ನೀವು ಇದಕ್ಕೆ ತಲೆ ಹಾಕಬೇಡಿ ಸುಮ್ಮನೆ ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಹೇಳುತ್ತಾರೆ ತುಕರಾಮ್.

ಇಲ್ಲೂ ಕೂಡಾ ಶಕುಂತಳಾದೇವಿಯ ಸಿಂಪತಿ ಗಳಿಸಲು ಅತ್ತೆಯ ಬಗ್ಗೆ ಏನೂ ಮಾತನಾಡಬೇಡಿ ಅಪ್ಪ, ಬೈಯೋದಾದ್ರೆ ನನಗೆ ಬೈರಿ ಆದರೆ ಅತ್ತೆಗೆ ಮಾತ್ರ ಏನು ಹೇಳಬೇಡಿ ಪ್ಲೀಸ್ ಅಪ್ಪ ಎನ್ನುತ್ತಾ ಹೊಸ ನಾಟಕವನ್ನೇ ಆಡುತ್ತಾಳೆ. ಶ್ವೇತಾಳ ಈ ನಾಟಕದ ಮಾತುಗಳಿಂದ ಪ್ರತಿಸಲ ಕರಗಿ ಅವಳ ಪರವಾಗಿ ನಿಲ್ಲುವ ಶಕುಂತಳಾದೇವಿ, ವಾಸ್ತವ ಏನೆಂಬುದನ್ನು ತಿಳಿಯದೆ ಈ ಸಲ ಕೂಡಾ ಶ್ವೇತಾಳ ಪರವಾಗಿ ನಿಲ್ಲುತ್ತಾಳೆ.

ನಿನ್ನ ತಂದೆ ತಾಯಿ ಜೊತೆಯಿಲ್ಲದಿದ್ದರೆ ಏನು, ನಿನ್ನ ಅತ್ತೆ ನಾನು ನಿನ್ನ ಜೊತೆ ಇದ್ದೆನೆ. ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ನನ್ನದು, ನನ್ನ ಜೊತೆ ಬಾ ಶ್ವೇತಾ ಯು ಡಿಸರ್ವ್ ಬೆಟರ್ ಲೈಫ್ ಎಂದು ಹೇಳಿ ಶ್ವೇತಾಳನ್ನು ಸಮಧಾನ ಮಾಡುತ್ತಾರೆ. ಆದರೆ ಇಷ್ಟಕ್ಕೆಲ್ಲ ಬಗ್ಗುವವಳಲ್ಲ ಕಿಲಾಡಿ ಶ್ವೇತಾ. ದೇವಸ್ಥಾನದಲ್ಲಿ ನಕ್ಷತ್ರಳಿಗೆ ಒಂದು ಮಾತು ಹೇಳಿದ್ದಳು. ಅದು ಏನಂದ್ರೆ ನಿನ್ನ ಅತ್ತೆ ಕರೆದ ತಕ್ಷಣ ನಿಮ್ಮ ಮನೆಗೆ ಬರೋದಕ್ಕೆ ನಾನೇನು ನಿನ್ನ ಅತ್ತೆ ಸಾಕಿರುವ ನಾಯಿಯಲ್ಲ. ಶಕುಂತಳಾದೇವಿ ಕಾಡಿ ಬೇಡಿ ನನ್ನನ್ನು ಮನೆಗೆ ಬಾ ಎಂದು ಕರೆಯಬೇಕು ಆಗ ಮಾತ್ರ ನಾನು ಬರುವುದು ಎಂದು ಹೇಳಿರುತ್ತಾಳೆ.

ಇದನ್ನು ಓದಿ: Lakshana Serial: ತಂದೆಗೂ ಬೇಡವಾದ ಮುದ್ದಿನ ಮಗಳು, ಶ್ವೇತಾಳ ದುರಹಂಕಾರಕ್ಕೆ ತಕ್ಕ ಶಾಸ್ತಿಯಾಗುತ್ತಿದೆ

ಅದೇ ಮಾತು ನಿಜವಾಗಲೂ ಇನ್ನು ಹೆಚ್ಚಿನ ನಾಟಕ ಮಾಡಿ ನಮ್ಮ ಅಪ್ಪ ಮನೆಯಿಂದ ಹೊರ ಹಾಕಿದರೂ ಅವರು ನಮ್ಮ ಅಪ್ಪನೇ ತಾನೆ. ಇದೇ ಅಲ್ವಾ ನಮ್ಮ ಮನೆ ಎಂದು ಮೊಸಲೆ ಕಣ್ಣೀರು ಹಾಕುತ್ತಾ ಶಕುಂತಳಾದೇವಿಯ ಸಿಂಪತಿ ಗಳಿಸುತ್ತಾಳೆ. ಶ್ವೇತಾಳ ಕಣ್ಣೀರನ್ನು ನೋಡಲಾರದೆ ದಯವಿಟ್ಟು ನನ್ನ ಮನೆಗೆ ಬಾ ಶ್ವೇತಾ, ನಿನ್ನ ಅತ್ತೆ ನಿನ್ನ ಜೊತೆ ಯಾವಾಗಲೂ ಇರುತ್ತಾಳೆ ಎಂದು ಕಣ್ಣೀರು ಹಾಕಿ ಬೇಡಿಕೊಳ್ಳುತ್ತಾರೆ ಶಕುಂತಳಾದೇವಿ.
ಇವೆಲ್ಲವನ್ನು ಕೇಳಿಸಿಕೊಂಡು ಒಳಗೆ ನಿಂತಿದ್ದ ಸೃಷ್ಟಿಗೆ ಅರಿವಾಗುತ್ತದೆ, ಇದೆಲ್ಲಾ ಭೂಪತಿಯ ಮನೆ ಸೇರಿಕೊಳ್ಳಲು ಶ್ವೇತಾ ಮಾಡುತ್ತಿರುವ ಕುತಂತ್ರ ಅಂತ. ನಕ್ಷತ್ರನ ಜೀವನ ಹಾಳು ಮಾಡುತ್ತೀಯಾ, ನಿನ್ನನ್ನು ಬಿಡಲ್ಲ ಕಣೆ ಎಂದು ಹೇಳಿ ಹೊರಗಡೆ ಹೋದಾಗ ಅಲ್ಲಿ ಶ್ವೇತಾ ಇರಲಿಲ್ಲ. ಶಕುಂತಳಾದೇವಿ ಶ್ವೇತಾಳನ್ನು ಬೇಡಿ ಆಕೆಯನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ. ಎಲ್ಲವೂ ನಾನು ಅಂದುಕೊಂಡ ರೀತಿಯಲ್ಲೇ ಆಗುತ್ತಿದೆ ಎಂದು ಶ್ವೇತಾ ತುಂಬಾ ಖುಷಿ ಪಡುತ್ತಾಳೆ. ಭೂಪತಿಯ ಮನೆಗೆ ಬಂದ ಮೇಲೆ ನಕ್ಷತ್ರಳ ಸಂಸಾರಕ್ಕೆ ತೊಂದರೆ ಕೊಡುತ್ತಾಳಾ ಎನ್ನುವುದನ್ನು ಮುಂದೆ ನೋಡಬೇಕಾಗಿದೆ.
ಮಧುಶ್ರೀ

Published On - 10:42 am, Thu, 27 October 22