Lakshana Serial: ಮಾಡಿದ ತಪ್ಪಿಗೆಲ್ಲಾ ನಕ್ಷತ್ರಳ ಬಳಿ ಮಂಡಿಯೂರಿ ಕ್ಷಮೆ ಕೇಳಿದ ಮೌರ್ಯ

ನಕ್ಷತ್ರಳ ಈ ಒಳ್ಳೆಯತನಕ್ಕೆ ತಲೆ ಬಾಗಿ ಹಾಗೂ ಮಾಡಿದ ತಪ್ಪಿನ ಪಾಪ ಒಂದಿಷ್ಟಾದರೂ ಕಮ್ಮಿಯಾಗಲೂ ನನ್ನನ್ನು ಕ್ಷಮಿಸಿ ಬಿಡಿ ಅತ್ತಿಗೆ ಎಂದು ಮಂಡಿಯೂರಿ ನಕ್ಷತ್ರಳ ಬಳಿ ಕ್ಷಮೆಯಾಚಿಸುತ್ತಾನೆ.

Lakshana Serial: ಮಾಡಿದ ತಪ್ಪಿಗೆಲ್ಲಾ ನಕ್ಷತ್ರಳ ಬಳಿ ಮಂಡಿಯೂರಿ ಕ್ಷಮೆ ಕೇಳಿದ ಮೌರ್ಯ
Lakshana Serial
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 16, 2022 | 10:21 AM

ಧಾರಾವಾಹಿ : ಲಕ್ಷಣ (Lakshana)

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 8.30

ನಿರ್ದೇಶನ: ಶಿವರಾಮ್ ಮಾಗಡಿ

ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀÃ, ಸುಕೃತ ನಾಗ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು? ತಾನು ಮಾಡಿದ್ದೆಲ್ಲಾ ಮಹಾಪರಾಧ ಎಂದು ಅರಿವಾದ ನಂತರ ತನ್ನ ಮೇಲೆಯೇ ಮೌರ್ಯನಿಗೆ ಪಶ್ಚಾತಾಪ ಭಾವ ಮೂಡುತ್ತದೆ. ಡೆವಿಲ್ ನಕ್ಷತ್ರಳ ಪ್ರಾಣಕ್ಕೆ ಕುತ್ತು ತಂದಾಗ ರೌಡಿಗಳಿಗೆ ಹಿಗ್ಗಾಮುಗ್ಗ ಹೊಡೆದು ನಕ್ಷತ್ರಳನ್ನು ಕಾಪಾಡುತ್ತಾನೆ. ಇದನ್ನು ಕಣ್ಣಾರೆ ಕಂಡ ನಕ್ಷತ್ರಳಿಗೆ ಒಂದು ಕ್ಷಣ ಶಾಕ್ ಆಗುತ್ತೆ.

ನಕ್ಷತ್ರಳ ಬಳಿ ಕ್ಷಮೆ ಕೇಳಿದ ಮೌರ್ಯ

ನಕ್ಷತ್ರಳನ್ನು ಮೌರ್ಯ ಏಕೆ ಕಾಪಾಡಿದ್ದು, ಇವತ್ತು ಅವನೇನಾದರೂ ಬರದೇ ಹೋಗಿದ್ದರೆ ನಕ್ಷತ್ರಳ ಕಥೆ ಮುಗಿಯುತ್ತಿತ್ತು. ಆದರೂ ನನಗೆ ಒಂದು ಅರ್ಥವಾಗುತ್ತಿಲ್ಲ, ಆ ಮೌರ್ಯ ತನ್ನ ಆಜನ್ಮ ಶತ್ರು ಸಿ.ಎಸ್ ಮಗಳನ್ನು ಇವನು ಏನಾಕ್ಕಾಗಿ ಕಾಪಡಿರಬಹುದು ಎಂದು ಭಾರ್ಗವಿಗೆ ತಲೆಯಲ್ಲಿ ಹುಳ ಬಿಟ್ಟಂತಾಗುತ್ತದೆ.

ಈ ಕಡೆ ರೌಡಿಗಳಿಂದ ತನ್ನನ್ನು ಕಾಪಾಡಿದ ಮೌರ್ಯನನ್ನು ಹಾಗೇನೆ ನೋಡುತ್ತಾ ನೀವು ನನ್ನನ್ನು ಕೊಲ್ಲಬೇಕೆಂದು ಅಷ್ಟೆಲ್ಲಾ ಪ್ರಯತ್ನ ಪಡುತ್ತಿದ್ದಿರಲ್ಲ, ಮತ್ತೆ ಯಾಕೆ ಇವತ್ತು ನನ್ನನ್ನು ನೀವು ಕಾಪಾಡಿದ್ದು ಎಂದು ಮೌರ್ಯನಿಗೆ ಪ್ರಶ್ನೆ ಮಾಡುತ್ತಾಳೆ. ನಕ್ಷತ್ರಳ ಪ್ರಶ್ನೆಗೆ ಉತ್ತರಿಸಲಾಗದೆ ಮೌರ್ಯ ಕಣ್ಣೀರು ಹಾಕುತ್ತಾನೆ. ಮೌರ್ಯ ನೀವು ಯಾಕೆ ಕಣ್ಣೀರು ಹಾಕುತ್ತಿದ್ದೀರಾ, ನಿಮಗೆ ಏನಾಯಿತು ಎಂದು ಗಾಬರಿಯಿಂದ ನಕ್ಷತ್ರ ಕೇಳುತ್ತಾಳೆ.

ಇದನ್ನು ಓದಿ:Lakshana Serial: ನಕ್ಷತ್ರಳ ಪ್ರಾಣಕ್ಕೆ ಕುತ್ತು ತರಲು ಡೆವಿಲ್ ಹೊಸ ಪ್ಲಾನ್, ಕಾಪಾಡಲು ಬಂದೇ ಬಿಟ್ಟ ಮೌರ್ಯ

ಆಗ ಮೌರ್ಯ ಮಾಡಿದ ತಪ್ಪಿಗೆಲ್ಲ ಪಶ್ಚಾತಪದ ಮಾತುಗಳನ್ನಾಡುತ್ತಾ ಇಷ್ಟು ದಿನ ನಾನು ನಿಮ್ಮನ್ನು ತಪ್ಪಾಗಿ ಭಾವಿಸಿದ್ದೆ. ನಿಮ್ಮ ಮೇಲೆ ಸೇಡು ತೀರಿಸಬೇಕೆಂಬ ಹುಚ್ಚಿನಿಂದ ಮಾಡಬಾರದ ತಪ್ಪುಗಳನ್ನೆಲ್ಲಾ ಮಾಡುತ್ತಾ ಬಂದೆ. ತಪ್ಪು ಮಾಡುವ ಬದಲು ಒಂದು ಭಾರಿ ಸತ್ಯಾಂಶ ಏನೆಂಬುವುದನ್ನು ತಿಳಿದುಕೊಳ್ಳದೆ ನಿಮ್ಮ ಪ್ರಾಣಕ್ಕೆ ತೊಂದರೆ ಮಾಡಿದೆ. ನನ್ನಷ್ಟು ದೊಡ್ಡ ಪಾಪಿ ಯಾರು ಇಲ್ಲ ಎಂದು ಹೇಳಿ ಅಳುತ್ತಾನೆ.

ಮೌರ್ಯನ ಮಾತು ಹಾಗೂ ಅಳುವನ್ನು ನೋಡಿ ಮೌರ್ಯ ನೀವೇನು ಹೇಳುತ್ತಿದ್ದೀರಾ, ಏಕೆ ಅಳುತ್ತಿದ್ದೀರಾ ಎಂದು ನಕ್ಷತ್ರ ಕೇಳುತ್ತಾಳೆ. ಆಗ ಮೌರ್ಯ ತಪ್ಪೇ ಮಾಡದ ನಿಮ್ಮಂತಹ ಒಳ್ಳೆಯ ಮನಸ್ಸಿರುವವರಿಗೆ ನೋವು ಕೊಟ್ಟೆ. ಅಷ್ಟು ಮಾತ್ರವಲ್ಲದೆ ಬೀದಿ ಬೀದಿಗಳಲ್ಲಿ ನಿಮ್ಮನ್ನು ಬಿಟ್ಟು ಬರುತ್ತಿದೆ.

ಕೊನೆಗೆ ನಿಮ್ಮನ್ನು ಕೊಲೆ ಮಾಡಲೇಬೇಕು ಎಂದು ನಿರ್ಧಾರ ಕೂಡಾ ಮಾಡಿದ್ದೆ. ದುಡುಕಿ ಕೊಲೆ ಏನಾದರೂ ಮಾಡಿದ್ದರೆ ಜೀವನ ಪರ್ಯಂತ ಆ ನೋವಲ್ಲೇ ನಾನು ಸಾಯಬೇಕಿತ್ತು. ನಾನು ಪಾಪಿ, ನನ್ನ ತಪ್ಪಿಗೆ ಶಿಕ್ಷೆಯಿಲ್ಲ. ಅಮ್ಮನಿಗೆ ಒಳ್ಳೆ ಮಗನಾಗಲಿಲ್ಲ, ಅಣ್ಣಂದಿರಿಗೆ ಒಳ್ಳೆಯ ತಮ್ಮನಾಗಲಿಲ್ಲ. ಕೊನೆ ಪಕ್ಷ ಒಬ್ಬ ಒಳ್ಳೆಯ ಮನಷ್ಯ ಕೂಡಾ ಆಗದೆ ಮೃಗ ಆಗಿಬಿಟ್ಟೆ ಎಂದು ಹೇಳುತ್ತಾ ಕಣ್ಣೀರು ಹಾಕುತ್ತಾನೆ.

ಮೌರ್ಯನ ಕಣ್ಣೀರು ನೋಡಲಾರದೆ, ನೊಡಿ ಮೌರ್ಯ ನೀವು ಯಾಕೆ ಕಣ್ಣೀರು ಹಾಕುತ್ತಿದ್ದೀರಾ. ಪಶ್ಚಾತಾಪಕ್ಕಿಂತ ದೊಡ್ಡ ಕ್ಷಮೆ ಮತ್ತೊಂದಿಲ್ಲ. ಒಬ್ಬ ವ್ಯಕ್ತಿ ಬದಲಾಗುತ್ತೇನೆ ಎಂದರೆ ಅವನಿಗೆ ಖಂಡಿತವಾಗಿಯೂ ಒಂದು ತಿದ್ದಿ ನಡೆಯಲು ಅವಕಾಶವಿರುತ್ತದೆ. ಈಗ ನಿಮಗೂ ನಿಮ್ಮ ತಪ್ಪಿನ ಅರಿವಾಗಿ ಬದಲಾಗಿದ್ದೀರಿ. ಇದಕ್ಕಿಂತ ಇನ್ನೇನು ಬೇಕು ಮೌರ್ಯ ಎಂದು ನಕ್ಷತ್ರ ಸಮಧಾನ ಮಾಡುತ್ತಾಳೆ.

ನಕ್ಷತ್ರಳ ಈ ಒಳ್ಳೆಯತನಕ್ಕೆ ತಲೆ ಬಾಗಿ ಹಾಗೂ ಮಾಡಿದ ತಪ್ಪಿನ ಪಾಪ ಒಂದಿಷ್ಟಾದರೂ ಕಮ್ಮಿಯಾಗಲೂ ನನ್ನನ್ನು ಕ್ಷಮಿಸಿ ಬಿಡಿ ಅತ್ತಿಗೆ ಎಂದು ಮಂಡಿಯೂರಿ ನಕ್ಷತ್ರಳ ಬಳಿ ಕ್ಷಮೆಯಾಚಿಸುತ್ತಾನೆ. ಮೌರ್ಯ ಅತ್ತಿಗೆಯೆಂದು ಕರೆದ ಆ ಒಂದು ಮಾತು ನಕ್ಷತ್ರಳನ್ನು ಭಾವುಕಳನ್ನಾಗಿ ಮಾಡುತ್ತದೆ. ಕಾಲಿಗೆ ಬೀಳಲು ಬಂದ ಮೌರ್ಯನನ್ನು ಎಬ್ಬಿಸಿ ನೀವು ಅತ್ತಿಗೆಯೆಂದು ಕರೆದ್ರಲ್ಲ ಆ ಒಂದು ಮಾತಿನಿಂದ ನಿಮ್ಮ ಮೇಲಿದ್ದ ಬೇಜಾರೆಲ್ಲ ಹೊಗಿ ಬಿಟ್ಟಿತು ಮೌರ್ಯ. ನೀವು ಇಷ್ಟೊಂದು ಬದಲಾಗಿದ್ದೀರಾ ಎಂದರೆ ಮನೆಯವರು ಖಂಡಿತವಾಗಿಯೂ ಖುಷಿ ಪಡುತ್ತಾರೆ. ಎಂದು ನಕ್ಷತ್ರ ಹೇಳುತ್ತಾಳೆ. ಆಕೆಯ ಮಾತಿಗೆ ನಾನು ಮಾಡಿದ ತಪ್ಪಿಗೆ ಜೈಲೇ ಗತಿ ಅತ್ತಿಗೆ. ಪೋಲಿಸ್‌ನವರು ನನ್ನನ್ನು ಹಿಡಿಯಲು ಕಾಯುತ್ತಿದ್ದಾರೆ. ನಾನೇ ಹೋಗಿ ಸರೆಂಡರ್ ಆಗುತ್ತೇನೆ ಅಂತ ಮೌರ್ಯ ಹೇಳುತ್ತಾನೆ. ಮೌರ್ಯನಲ್ಲಿ ಇಷ್ಟೆಲ್ಲ ಬದಲಾವಣೆ ಕಂಡು ನಕ್ಷತ್ರಳಿಗೆ ಆನಂದವುಂಟಾಗುತ್ತದೆ. ಅತ್ತಿಗೆ ಮೈದುನ ಈಗ ಒಂದಾಗಿದ್ದಾರೆ. ಇನ್ನು ನಕ್ಷತ್ರಳ ಹಾಗೆ ಭೂಪತಿಯ ಮನೆಯವರು ಮೌರ್ಯನನ್ನು ಕ್ಷಮಿಸುತ್ತಾರಾ ಎಂಬುವುದನ್ನು ಮುಂದಿನ ಸಂಚಿಕೆಯಲ್ಲಿ ನೋಡಬೇಕಾಗಿದೆ.

ಮಧುಶ್ರೀ ಅಂಚನ್

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:20 am, Fri, 16 December 22