Jothe Jotheyali Serial: ‘ನೀವೇ ಆರ್ಯವರ್ಧನ್’; ಸಂಜು ಎದುರು ನಿಜ ವಿಚಾರ ಹೇಳಿದ ವೈದ್ಯರು
Jothe Jotheyali Kannada Serial: ವೈದ್ಯರನ್ನು ಸಂಜು ಅಪಹರಿಸಿದ್ದಾನೆ. ಅವರಿಂದ ನಿಜ ವಿಚಾರ ಬಾಯಿಬಿಡಿಸಿದ್ದಾನೆ. ಕತ್ತಿಗೆ ಚಾಕು ಹಿಡಿದು ಸತ್ಯ ಹೇಳುವಂತೆ ಬೆದರಿಕೆ ಹಾಕಿದ್ದಾನೆ.
ಧಾರಾವಾಹಿ: ಜೊತೆ ಜೊತೆಯಲಿ
ವಾಹಿನಿ: ಜೀ ಕನ್ನಡ
ನಿರ್ದೇಶನ: ಆರೂರು ಜಗದೀಶ
ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು
ಸಮಯ: ರಾತ್ರಿ: 9.30
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಸಂಜುಗೆ ಟ್ರೀಟ್ಮೆಂಟ್ ಕೊಡಬೇಕು, ಆತನನ್ನು ಸುಧಾರಿಸಬೇಕು ಎಂಬುದು ಆರಾಧನಾ ಉದ್ದೇಶ. ಆದರೆ, ವೈದ್ಯರು ಇದಕ್ಕೆ ನಿರಾಕರಿಸಿದ್ದಾರೆ. ಸಂಜು ಪದೇಪದೇ ಟ್ರೀಟ್ಮೆಂಟ್ ತಪ್ಪಿಸಿದ್ದರಿಂದ ವೈದ್ಯರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮತ್ತೊಂದು ಕಡೆ ಸಂಜುನ ಸಹಾಯ ಪಡೆಯಲು ಅನು ಮುಂದಾಗಿದ್ದಾಳೆ. ಆಕೆಗೆ ಅಸಲಿ ವಿಚಾರ ಏನು ಎಂಬುದನ್ನು ತಿಳಿದುಕೊಳ್ಳಬೇಕಿದೆ.
ವೈದ್ಯರ ಕಿಡ್ನಾಪ್ ಮಾಡಿದ ಸಂಜು
ಸಂಜುಗೆ ತಾನು ಯಾರು ಎಂಬ ಪ್ರಶ್ನೆ ಪದೇಪದೇ ಕಾಡುತ್ತಲೇ ಇತ್ತು. ಆತನಿಗೆ ಹಳೆಯ ನೆನಪುಗಳು ಯಾವುದೂ ನೆನಪಿನಲ್ಲಿ ಇಲ್ಲ. ಬೇರೆ ಯಾರದ್ದೋ ನೆನಪು ತನಗೆ ಬರುತ್ತಿದೆ ಎಂದು ಆತನಿಗೆ ಅನಿಸುತ್ತಿತ್ತು. ಆರ್ಯವರ್ಧನ್ ಓಡಾಡಿದ ಜಾಗಗಳಿಗೆ ಭೇಟಿ ನೀಡಿದಾಗ ಆತನಿಗೆ ಹಳೆಯ ನೆನಪುಗಳು ಕಾಡುತ್ತಿದ್ದವು. ಹೀಗಾಗಿ, ತಾನು ಯಾರು ಎನ್ನುವ ಪ್ರಶ್ನೆ ಆತನಿಗೆ ಪದೇಪದೇ ಕಾಡುತ್ತಲೇ ಇತ್ತು. ಈ ವಿಚಾರವನ್ನು ಶಾರದಾ ದೇವಿ ಬಳಿ ಸಂಜು ಪ್ರಶ್ನೆ ಮಾಡಿದ್ದ. ಆದರೆ, ಇದಕ್ಕೆ ಉತ್ತರ ಸಿಕ್ಕಿರಲಿಲ್ಲ. ಅನು ಬಳಿಯೂ ಕೇಳಿದ್ದ. ಅಲ್ಲಿಯೂ ಉತ್ತರ ಸಿಕ್ಕಿರಲಿಲ್ಲ. ಈಗ ವೈದ್ಯರನ್ನೇ ಅಪಹರಿಸಿದ್ದಾನೆ ಸಂಜು. ಅವರಿಂದ ಸತ್ಯ ಬಾಯಿಬಿಡಿಸಿದ್ದಾನೆ.
ಸತ್ಯ ಹೇಳಿದ ವೈದ್ಯರು
ವೈದ್ಯರು ನಿಜ ವಿಚಾರ ಹೇಳಬಹುದು ಎಂದು ಸಂಜುಗೆ ಅನಿಸಿದೆ. ಈ ಕಾರಣಕ್ಕೆ ಸಂಜು ವೈದ್ಯರನ್ನು ಅಪಹರಿಸಿದ್ದಾನೆ. ಅಪಹರಿಸಿ ಅವರಿಂದ ನಿಜವಿಚಾರ ಬಾಯಿಬಿಡಿಸಿದ್ದಾನೆ. ಕತ್ತಿಗೆ ಚಾಕು ಹಿಡಿದು ನಿಜ ವಿಚಾರ ಹೇಳುವಂತೆ ಬೆದರಿಕೆ ಹಾಕಿದ್ದಾನೆ. ಇದಕ್ಕೆ ವೈದ್ಯರಿಂದ ಉತ್ತರ ಸಿಕ್ಕಿದೆ. ‘ನೀವೇ ಆರ್ಯವರ್ಧನ್. ನಿಮಗೆ ಹಳೆಯದು ನೆನಪಿಲ್ಲ. ನೀವೇ ಆರ್ಯವರ್ಧನ್ ಎಂದು ಹೇಳಬಾರದು ಅಂತ ಪೊಲೀಸರಿಂದ ಸೂಚನೆ ಇತ್ತು. ಇದಕ್ಕಾಗಿ ನಾನು ಅಸಲಿ ವಿಚಾರ ಹೇಳಿಲ್ಲ’ ಎಂದು ಹೇಳಿದ್ದಾರೆ ವೈದ್ಯರು. ಇದನ್ನು ಕೇಳಿ ಸಂಜುಗೆ ಶಾಕ್ ಆಗಿದೆ. ಅಲ್ಲದೆ ತನಗೆ ಹಾದು ಹೋದ ನೆನಪುಗಳ ಅರ್ಥ ಏನು ಎಂಬುದು ಗೊತ್ತಾಗಿದೆ.
ಮನೆಗೆ ಬಂದು ಅಸಲಿ ವಿಚಾರ ಹೇಳಿದ ಸಂಜು:
ಸಂಜು ಆಸ್ತಿ ಹೊಡೆಯಲು ಬಂದಿದ್ದಾನೆ ಎಂಬುದು ಹರ್ಷನ ಹೆಂಡತಿ ಮಾನ್ಸಿ ಅನುಮಾನ. ಈ ಬಗ್ಗೆ ಆಕೆ ಮೊದಲಿನಿಂದ ಅನುಮಾನ ಹೊರಹಾಕುತ್ತಲೇ ಇದ್ದಾಳೆ. ‘ಸಂಜು ಬಂದು ನಾನೇ ಆರ್ಯವರ್ಧನ್ ಎಂದು ಹೇಳುತ್ತಾನೆ’ ಎಂದು ಮಾನ್ಸಿ ಭವಿಷ್ಯ ನುಡಿದಿದ್ದಳು. ಈಗ ಅದೇ ರೀತಿ ಆಗಿದೆ. ಸಂಜು ಬಂದು ನಾನೇ ಆರ್ಯವರ್ಧನ್ ಎಂದು ಘೋಷಣೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ‘ಅವರಿದ್ದರೆ ಉಸಿರುಗಟ್ಟಿದಂತಾಗುತ್ತೆ’; ಸಂಜುನ ನೋಡಿದ ಅನುಗೆ ನೆನಪಾಗುತ್ತಿದ್ದಾನೆ ಆರ್ಯವರ್ಧನ್
ವೈದ್ಯರಿಂದ ಅಸಲಿ ವಿಚಾರ ತಿಳಿದ ಸಂಜು ರಾಜ ನಂದಿನಿ ನಿವಾಸಕ್ಕೆ ಬಂದಿದ್ದಾನೆ. ಈ ನಿವಾಸ ಆತನಿಗೆ ಬೇರೆ ರೀತಿ ಕಾಣಿಸಿದೆ. ಹಳೆಯ ನೆನಪುಗಳು ಆತನಿಗೆ ಕಾಡಿವೆ. ಈ ವೇಳೆ ಓಡಿ ಬಂದ ಆರಾಧನಾ, ‘ವಿಷ್, ಎಲ್ಲಿ ಹೋಗಿದ್ದೆ ವಿಷ್. ನೀನು ಏಕೆ ಹೇಳದೇ ಹೋದೆ? ನಿನಗಾಗಿ ಕಾದು ಕೂತಿದ್ದೆ. ಏಕೆ ಈ ರೀತಿ ಮಾಡ್ತೀಯಾ’ ಎಂದು ಪ್ರಶ್ನೆ ಮಾಡಿದ್ದಾಳೆ. ಇದರಿಂದ ಸಿಟ್ಟಾಗಿದ್ದಾನೆ ಸಂಜು. ‘ನಾನು ನಿಮ್ಮ ವಿಷ್ ಅಲ್ಲ. ನನ್ನನ್ನು ಇನ್ಮುಂದೆ ಹಾಗೆ ಕರೆಯಬೇಡಿ ಪ್ಲೀಸ್’ ಎಂದು ಕೋರಿದ್ದಾನೆ.
ಇದನ್ನೂ ಓದಿ: ಸಂಜುವಿನ ಅನುಕಂಪಕ್ಕೆ ಸಿಟ್ಟಾದ ಅನು; ಕಣ್ಣೀರಿಟ್ಟವಳಿಗೆ ಬಂತು ಆರ್ಯವರ್ಧನ್ನ ನೆನಪು
ಇದರಿಂದ ಆರಾಧನಾಗೂ ಕೋಪ ನೆತ್ತಿಗೇರಿದೆ. ‘ನೀನು ನಿನ್ನನ್ನು ಏನು ಅಂದುಕೊಂಡಿದ್ದೀಯಾ’ ಎಂದು ಪ್ರಶ್ನೆ ಮಾಡಿದ್ದಾಳೆ. ‘ನಾನು ಆರ್ಯವರ್ಧನ್’ ಎಂಬ ಉತ್ತರ ಸಂಜು ಕಡೆಯಿಂದ ಬಂದಿದೆ. ಈ ಉತ್ತರ ಕೇಳಿ ಎಲ್ಲರಿಗೂ ಶಾಕ್ ಆಗಿದೆ. ಈ ವಿಚಾರದಲ್ಲಿ ಮಾನ್ಸಿಗೆ ದೊಡ್ಡ ಮಟ್ಟದಲ್ಲಿ ಅನುಮಾನ ಮೂಡಬಹುದು. ಸಂಜು ಹೇಳಿದ ಮಾತನ್ನು ಯಾರೂ ನಂಬದೇ ಇರಬಹುದು. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಶ್ರೀಲಕ್ಷ್ಮಿ ಎಚ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.