Lakshana Serial: ಮೌರ್ಯನ ಮನ ಪರಿವರ್ತನೆ ಇನ್ನಾದರೂ ನಕ್ಷತ್ರಳನ್ನು ಅತ್ತಿಗೆಯೆಂದು ಒಪ್ಪಿಕೊಳ್ಳುತ್ತಾನಾ?
ನನ್ನನ್ನು ಬದುಕಿಸಿದವಳನ್ನು ಕೊಲ್ಲಲು ಹೊರಟಿದ್ದ ನಾನು. ಏನು ತಪ್ಪು ಮಾಡದ ನಕ್ಷತ್ರಳ ಜೀವ ತೆಗೆಯುವ ನಾನು. ಸಿ.ಎಸ್ ಮಗಳ ಖುಷಿಗೆ ತಾನೆ ಭೂಪತಿ ಜೊತೆ ಮದುವೆ ಮಾಡಿದ್ದು ಅದರಲ್ಲಿ ತಪ್ಪೇನಿದೆ. ನಾನು ಯಾಕೆ ಕ್ರಿಮಿನಲ್ ಆದೆ. ಅಮ್ಮನಿಗೆ ಒಳ್ಳೆ ಮಗನಾಗಲಿಲ್ಲ, ಅಣ್ಣಂದಿರಿಗೆ ಒಳ್ಳೆ ತಮ್ಮನಾಗಿಲ್ಲ. ಕ್ರಿಮಿನಲ್ ಆಗಿದ್ದೀನಿ. ನನ್ನ ಮೇಲೆ ನನಗೆ ಅಸಹ್ಯ ಆಗುತ್ತಿದೆ ಎಂದು ಮೌರ್ಯ ಒಬ್ಬನೇ ತನ್ನಿಂದಾದ ತಪ್ಪಿಗೆ ಪಾಶ್ಚತಾಪದಿಂದ ಮಾತನಾಡಿಕೊಳ್ಳುತ್ತಾನೆ
ಧಾರಾವಾಹಿ: ಲಕ್ಷಣ (Lakshana)
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 8.30
ನಿರ್ದೇಶನ: ಶಿವರಾಮ್ ಮಾಗಡಿ
ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ನಕ್ಷತ್ರಳನ್ನು ಇವತ್ತೇ ಸಾಯಿಸಿ ಬಿಡುತ್ತೇನೆ ಎಂದು ರೋಷದಿಂದ ಸಿ.ಎಸ್ ಮನೆಗೆ ಬಂದ ಮೌರ್ಯನಿಗೆ ಶಾಕಿಂಗ್ ವಿಷಯವೊಂದು ಗೊತ್ತಾಗುತ್ತೆ. ಅದುವೇ ನಕ್ಷತ್ರ ಅಮಾಯಕಿ, ಆಕೆ ಭೂಪತಿಯನ್ನು ಮೋಸದಿಂದ ಮದುವೆಯಾಗಿಲ್ಲ ಎಂದು.
ಮೌರ್ಯನ ಮನ ಪರಿವರ್ತನೆ
ಅದೇ ಮಾತುಕತೆಯ ಮುಂದುವೆದ ಭಾಗವಾಗಿ ಮೌರ್ಯನು ನಕ್ಷತ್ರ, ಆರತಿ, ಸಿ.ಎಸ್ ಮಾತನಾಡಿಕೊಳ್ಳುತ್ತಿದ್ದನ್ನು ಸುಮ್ಮನೆ ಕೇಳಿಸಿಕೊಳ್ಳುತ್ತಿರುತ್ತಾನೆ. ನಾನು ನನ್ನ ಮಗಳ ಸಂತೋಷಕ್ಕಾಗಿ ಇಷ್ಟೆಲ್ಲ ಮಾಡಬೇಕಾಯಿತು. ಹುಟ್ಟಿದಾಗಿನಿಂದ 23 ವರ್ಷ ತಂದೆ ತಾಯಿಯ ಪ್ರೀತಿ ಸಿಗದೆ ಆ ತುಕರಾಮ್ ಮನೆಯಲ್ಲಿ ಎಷ್ಟೆಲ್ಲಾ ನೋವು ಅನುಭವಿಸಿದ್ದಳು ನಮ್ಮ ಮಗಳು. ಏನನ್ನು ಬಯಸದ ನಮ್ಮ ಮಗಳು ಭೂಪತಿ ಯಾರು, ಅವನೆಂತಹ ದೊಡ್ಡ ಮನುಷ್ಯ ಎಂದು ತಿಳಿಯದೆ ಆತನೊಬ್ಬ ಸಾಮಾನ್ಯ ಯುವಕ ಎಂದು ತಿಳಿದು ಅವನನ್ನು ನಿಷ್ಕಲ್ಮಶವಾಗಿ ಪ್ರೀತಿ ಮಾಡುತ್ತಾಳೆ.
ಆಕೆಯ ಪ್ರೀತಿಯ ವಿಷಯವನ್ನು ನನ್ನ ಬಳಿ ಹೇಳಿದಾಗ ಅವಳ ಕಣ್ಣಲ್ಲಿ ಎಂದು ಕಾಣದ ಸಂತೋಷವನ್ನು ಕಂಡೆ. ಆದರೆ ಕೊನೆಗೆ ಭೂಪತಿಯನ್ನು ಶ್ವೇತಾಳಿಗೆ ಬಿಟ್ಟು ಕೊಟ್ಟು ಅವರಿಬ್ಬರ ಮದುವೆಯಲ್ಲಿ ಮನದಲ್ಲಿ ಎಷ್ಟೇ ನೋವಿದ್ದರೂ ಸಂತೋಷದಿಂದ ಓಡಾಡುತ್ತಿರುತ್ತಾಳೆ. ಅದೆಲ್ಲವನ್ನು ನೋಡಿ ನಾನು ಹೇಗೆ ಸುಮ್ಮನಿರಲು ಸಾಧ್ಯವಿತ್ತು. ಹುಟ್ಟಿದಾಗಿನಿಂದ ಯಾವ ಸಂತೋಷವನ್ನು ನೋಡಿರದ ನಕ್ಷತ್ರಳಿಗೆ ಹೇಗಾದರೂ ಮಾಡಿ ಆಕೆ ಪ್ರೀತಿಸಿದ ಜೀವ ಭೂಪತಿಯೊಂದಿಗೆ ಮದುವೆ ಮಾಡಬೇಕು ಎಂದು ಎಂದು ನಿರ್ಧಾರ ಮಾಡಿ ಮೌರ್ಯನನ್ನು ದಾಳವಾಗಿ ಬಳಸಿಕೊಂಡು ಭೂಪತಿ ಮತ್ತು ನಕ್ಷತ್ರಳಿಗೆ ಮದುವೆ ಮಾಡಿದ್ದು ಆರತಿ. ಮಗಳ ಸಂತೋಷಕ್ಕಾಗಿ ಈ ತಂದೆ ಸ್ವಾರ್ಥಿಯಾಗಿದ್ದು ಎಂದು ಹೇಳಿ ಅಳುತ್ತಾರೆ ಸಿ.ಎಸ್.
ಇದನ್ನು ಓದಿ:Lakshana Serial: ನಕ್ಷತ್ರಳನ್ನು ಕೊಲ್ಲುವ ಪಣ ತೊಟ್ಟಿದ್ದಾನೆ ಮೌರ್ಯ
ತಂದೆಯ ಮಾತಿಗೆ ನಮ್ಮ ತಪ್ಪಿನಿಂದಾಗಿ ಇವತ್ತು ಭೂಪತಿಯ ಮನೆಯವರೆಲ್ಲರೂ ಅವರು ಮಾಡದ ತಪ್ಪಿಗೆ ನೋವು ಅನುಭವಿಸಬೇಕಾಗಿದೆ. ಅತ್ತೆ ಇಷ್ಟವಿಲ್ಲದ ಸೊಸೆಯೊಂದಿಗೆ, ಭೂಪತಿ ಇಷ್ಟವಿಲ್ಲದ ಹೆಂಡತಿಯೊಂದಿಗೆ ಜೀವನ ನಡೆಸಬೇಕಾಗಿದೆ. ಪಾಪ ಮೌರ್ಯ ಫಾರಿನ್‌ನಲ್ಲಿ ಓದು ಮುಗಿಸಿ ಬಂದು ಅಣ್ಣನ ಹಾಗೆ ದೊಡ್ಡ ಬ್ಯುಸಿನೆಸ್ ಆಗಬೇಕೆಂದು ಕನಸು ಕಟ್ಟಿಕೊಂಡು ಬಂದವರು. ನಾವು ಮಾಡಿದ ಒಂದು ತಪ್ಪಿನಿಂದಾಗಿ ಇವತ್ತು ಅಣ್ಣನ ಹಾಗೆ ಸಾಧನೆ ಮಾಡಬೇಕಿದ್ದ ಮೌರ್ಯ ಪೋಲಿಸರ ವಾಂಟೆಡ್ ಲಿಸ್ಟ್ ಸೇರಿದ್ದಾರೆ. ಮನೆಯವರ ದೃಷ್ಟಿಯಲ್ಲೂ ಕೆಟ್ಟವರಾಗಿ ನಿಂತಿದ್ದಾರೆ. ಎಂದು ಅಳುತ್ತಾ ನಕ್ಷತ್ರ ಹೇಳುತ್ತಾಳೆ. ನಕ್ಷತ್ರಳ ಮಾತನೆಲ್ಲ ಕೇಳಿಸಿದ ಮೌರ್ಯನಿಗೆ ತನ್ನ ಮೇಲೆಯೇ ಅಸೂಯೆ ಭಾವನೆ ಮೂಡುತ್ತದೆ.
ಏನು ತಪ್ಪೇ ಮಾಡದ ಇವಳ ಮೇಲೆ ಇಷ್ಟು ದಿನ ನಾನು ಸೇಡು ತೀರಿಸಿಕೊಳ್ಳಬೇಕು ಅಂತ ಇದ್ದಿದ್ದ. ಅವಳನ್ನು ಕೊಂದು ನಾನು ಸಾಧಿಸುವುದಾದರೂ ಏನು. ಸೇಡು ತೀರಿಸಬೇಕೆಂದು ಬಂದೆ. ಆದರೆ ಇಲ್ಲಿ ಬೇರೆಯದ್ದೇ ನಡೆತಿದೆ. ಇಷ್ಟು ದಿನ ಏನು ತಪ್ಪು ಮಾಡವಳಿಗೆ ತೊಂದರೆ ಕೊಟ್ಟೆನಾ ಎಂದು ಮನದಲ್ಲೇ ಮಾತನಾಡಿಕೊಳ್ಳುತ್ತಾ, ಕೈಯಲ್ಲಿದ್ದ ಬಾಕುವನ್ನು ಕೆಳಗೆ ಬಿಸಾಗಿ ಬಂದ ದಾರಿಯಲ್ಲೇ ವಾಪಸ್ ಹೋಗುತ್ತಾನೆ ಮೌರ್ಯ. ಹೋಗುವಾಗ ಸಿ.ಎಸ್ ಮನೆಯ ಸೆಕ್ಯುರಿಟಿ ಗಾರ್ಡ್ಗೆ ಹೊಡೆದದಕ್ಕೆ ಕ್ಷಮೆ ಕೇಳಿ ಹೊರಟು ಹೋಗುತ್ತಾನೆ.
ಚಾಕು ಬಿದ್ದ ಶಬ್ದ ಕೇಳಿ ಸಿ.ಎಸ್, ನಕ್ಷತ್ರ, ಆರತಿ, ಭಾರ್ಗವಿ ಬಾಲ್ಕನಿಗೆ ಬಂದು ನೋಡಿದಾಗ ಚಾಕು ಕೆಳಗೆ ಬಿದ್ದಿರುತ್ತದೆ. ಇದು ಮೌರ್ಯನದ್ದೇ ಕೆಲಸ ಎಂದು ಅನುಮಾನ ಪಡುತ್ತಾರೆ. ಮನೆಯ ಸೆಕ್ಯುರಿಟಿ ಗಾರ್ಡ್ ಬಂದು ನಡೆದ ಘಟನೆ ಹೇಳಿದಾಗ ಬಂದಿರುವುದು ಮೌರ್ಯ ಎಂದು ಕನ್ಫರ್ಮ್ ಆಗುತ್ತೆ. ಜೊತೆಗೆ ಕ್ಷಮೆ ಕೇಳಿ ಹೋದ ವಿಷಯವನ್ನು ಹೇಳುತ್ತಾನೆ. ಇದನ್ನು ಕೇಳಿ ಮನೆಯವರಿಗೆ ಇವನು ಏನಕ್ಕೆ ಹೀಗೆ ಮಾಡಿದ್ದು ಎಂದು ಗೊಂದಲ ಉಂಟಾಗುತ್ತದೆ.
ಇತ್ತ ಕಡೆ ವಾಪಸ್ ಬಂದ ಮೌರ್ಯ ಡ್ರಿಂಕ್ಸ್ ಮಾಡುತ್ತಾ, ನನ್ನನ್ನು ಬದುಕಿಸಿದವಳನ್ನು ಕೊಲ್ಲಲು ಹೊರಟಿದ್ದ ನಾನು. ಏನು ತಪ್ಪು ಮಾಡದ ನಕ್ಷತ್ರಳ ಜೀವ ತೆಗೆಯುವ ನಾನು. ಸಿ.ಎಸ್ ಮಗಳ ಖುಷಿಗೆ ತಾನೆ ಭೂಪತಿ ಜೊತೆ ಮದುವೆ ಮಾಡಿದ್ದು ಅದರಲ್ಲಿ ತಪ್ಪೇನಿದೆ. ನಾನು ಯಾಕೆ ಕ್ರಿಮಿನಲ್ ಆದೆ. ಅಮ್ಮನಿಗೆ ಒಳ್ಳೆ ಮಗನಾಗಲಿಲ್ಲ, ಅಣ್ಣಂದಿರಿಗೆ ಒಳ್ಳೆ ತಮ್ಮನಾಗಿಲ್ಲ. ಕ್ರಿಮಿನಲ್ ಆಗಿದ್ದೀನಿ. ನನ್ನ ಮೇಲೆ ನನಗೆ ಅಸಹ್ಯ ಆಗುತ್ತಿದೆ ಎಂದು ಮೌರ್ಯ ಒಬ್ಬನೇ ತನ್ನಿಂದಾದ ತಪ್ಪಿಗೆ ಪಾಶ್ಚತಾಪದಿಂದ ಮಾತನಾಡಿಕೊಳ್ಳುತ್ತಾನೆ. ನಕ್ಷತ್ರಳ ತಪ್ಪೇನಿಲ್ಲ ಎಂದು ತಿಳಿದ ಮೌರ್ಯ ಆಕೆಯನ್ನು ಅತ್ತಿಗೆಯೆಂದು ಒಪ್ಪಿಕೊಳ್ಳುತ್ತಾಣಾ ಎಂಬುವುದನ್ನು ಮುಂದಿನ ಸಂಚಿಕೆಯಲ್ಲಿ ನೋಡಬೇಕಾಗಿದೆ. ಮಧುಶ್ರೀ ಅಂಚನ್
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:29 am, Wed, 14 December 22