Jothe Jotheyali Serial: ‘ಗಂಡ ಬದುಕಿದ್ದಾನೆ’; ಅನು ಸಿರಿಮನೆಗೆ ಸತ್ಯ ಹೇಳಿದ ಜೋಗ್ತವ್ವ
Jothe Jotheyali Serial Update: ಝೇಂಡೆ ಪ್ಲ್ಯಾನ್ ಮಾಡಿ ವರ್ಧನ್ ಕಂಪನಿಗೆ ಮರಳಿದ್ದಾನೆ. ಸಂಜುನೇ ಆರ್ಯವರ್ಧನ್ ಎನ್ನುವ ವಿಚಾರ ಆತನಿಗೆ ಗೊತ್ತಾಗಿದೆ. ಇದು ವರ್ಧನ್ ಕಂಪನಿಗೆ ಆತ ಮರಳೋಕೆ ಮುಖ್ಯ ಕಾರಣ.
ಧಾರಾವಾಹಿ: ಜೊತೆ ಜೊತೆಯಲಿ
ವಾಹಿನಿ: ಜೀ ಕನ್ನಡ
ನಿರ್ದೇಶನ: ಆರೂರು ಜಗದೀಶ
ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು
ಸಮಯ: ರಾತ್ರಿ: 9.30
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಸಂಜುನೇ ಆರ್ಯವರ್ಧನ್ ಎನ್ನುವ ವಿಚಾರ ಯಾರಿಗೂ ಗೊತ್ತಿಲ್ಲ. ಈ ಬಗ್ಗೆ ಕೆಲವರಿಗೆ ಅನುಮಾನ ಬಂದಿದೆ. ಆರ್ಯವರ್ಧನ್ ಸತ್ತಿಲ್ಲ ಅನ್ನುವ ವಿಚಾರದಲ್ಲಿ ಕೆಲವರಿಗೆ ಅನುಮಾನ ಮೂಡಿದೆ. ಈ ಬಗ್ಗೆ ಅನು ಸಿರಿಮನೆ ತನಿಖೆ ಆರಂಭಿಸಿದ್ದಾಳೆ. ಮತ್ತೊಂದು ಕಡೆ ಸಂಜುಗೆ ಬ್ಲಾಕ್ಮೇಲೆ ಮಾಡಲು ಶುರು ಮಾಡಿದ್ದಾಳೆ ಆರಾಧನಾ. ‘ನೀನು ಸರಿಯಾಗಿ ಚಿಕಿತ್ಸೆ ಪಡೆಯದೇ ಇದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಆರಾಧನಾ ಬ್ಲಾಕ್ಮೇಲ್ ಮಾಡಿದ್ದಾಳೆ.
ಝೇಂಡೆ ಕಣ್ಣೀರು
ಝೇಂಡೆ ಪ್ಲ್ಯಾನ್ ಮಾಡಿ ವರ್ಧನ್ ಕಂಪನಿಗೆ ಮರಳಿದ್ದಾನೆ. ಸಂಜುನೇ ಆರ್ಯವರ್ಧನ್ ಎನ್ನುವ ವಿಚಾರ ಆತನಿಗೆ ಗೊತ್ತಾಗಿದೆ. ಇದು ವರ್ಧನ್ ಕಂಪನಿಗೆ ಆತ ಮರಳೋಕೆ ಮುಖ್ಯ ಕಾರಣ. ಹೀಗಾಗಿ, ಕಚೇರಿಗೆ ಬರುತ್ತಿದ್ದಂತೆ ಸಂಜು ಬಗ್ಗೆ ಝೇಂಡೆ ವಿಚಾರಿಸೋಕೆ ಆರಂಭಿಸಿದ್ದಾನೆ. ಈ ಬಗ್ಗೆ ಮೀರಾ ಹೆಗಡೆಗೆ ಅನುಮಾನ ಮೂಡಿದೆ. ಯಾಕೆ ಆ ಬಗ್ಗೆ ಪ್ರಶ್ನೆ ಮಾಡುತ್ತಿದ್ದೀರಿ ಎಂದು ಕೇಳಿದ್ದಾನೆ. ಇದಕ್ಕೆ ಝೇಂಡೆ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾನೆ.
‘ಮೀರಾ ಅವರೇ ನಾನು ನಾರ್ಮಲ್ ಆಗಿ ಆ ವಿಚಾರನ ಪ್ರಶ್ನೆ ಮಾಡಿದೆ ಅಷ್ಟೇ. ಆರ್ಯನ ಜತೆ ಸದಾ ಬ್ಯುಸಿ ಆಗಿರುತ್ತಿದ್ದೆ. ಆದರೆ, ಈಗ ಆತ ಇಲ್ಲದೆ ಕಚೇರಿಯಲ್ಲಿ ಕಳೆಯೋದು ಕಷ್ಟ. ನನಗೆ ಹೊಂದಾಣಿಕೆ ಮಾಡಿಕೊಳ್ಳೋಕೆ ಇನ್ನೂ ಸಮಯ ಬೇಕಾಗಬಹುದು’ ಎಂದು ಕಣ್ಣೀರು ಹಾಕಿದ್ದಾನೆ. ಅವರನ್ನು ಸಮಾಧಾನ ಮಾಡುವ ಕೆಲಸವನ್ನು ಮೀರಾ ಹೆಗಡೆ ಮಾಡಿದ್ದಾಳೆ.
ಇದನ್ನೂ ಓದಿ: ಅನು ಸಿರಿಮನೆ-ಸಂಜುನಿಂದ ಮುರಿದು ಬಿತ್ತು ರಮ್ಯಾ ಎಂಗೇಜ್ಮೆಂಟ್
ಕಚೇರಿಯಿಂದ ದೂರವಾದ ಸಂಜು
ಸಂಜುಗೆ ನೆನಪು ಪೂರ್ತಿಯಾಗಿ ಮಾಸಿ ಹೋಗಿದೆ. ಹೀಗಾಗಿ, ಆತನಿಗೆ ಚಿಕಿತ್ಸೆ ನೀಡುವ ಕೆಲಸ ನಡೆಯುತ್ತಿದೆ. ಆದರೆ, ಆತ ಕೆಲ ದಿನಗಳಿಂದ ಚಿಕಿತ್ಸೆಯಿಂದ ದೂರವೇ ಇದ್ದ. ಈಗ ಆತನಿಗೆ ಚಿಕಿತ್ಸೆ ಕೊಡಿಸಲೇಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾಳೆ ಆರಾಧನಾ. ಈ ವಿಚಾರದಲ್ಲಿ ಆಕೆ ಬ್ಲಾಕ್ಮೇಲ್ ಮಾಡಿದ್ದಳು. ಹೀಗಾಗಿ ಅನಿವಾರ್ಯವಾಗಿ ಚಿಕಿತ್ಸೆ ಪಡೆಯಬೇಕಿದೆ. ಕಚೇರಿಗೆ ತೆರಳಲು ಮುಂದಾದರೆ ಅನು ಇದಕ್ಕೆ ಅವಕಾಶ ನೀಡಲೇ ಇಲ್ಲ. ‘ಸಂಜು ಅವರೇ ನೀವು ಆಸ್ಪತ್ರೆಗೆ ತೆರಳಿ. ನಾವು ಕಚೇರಿ ಕೆಲಸ ನೋಡಿಕೊಳ್ಳುತ್ತೇವೆ’ ಎಂದು ಹೇಳಿದ್ದಾಳೆ. ಇದನ್ನು ಕೇಳಿ ಸಂಜುಗೆ ಬೇಸರ ಆಗಿದೆ.
ಇದನ್ನೂ ಓದಿ: ಎಲ್ಲರ ಎದುರು ಸಂಜುಗೆ ಆರ್ಯ ಎಂದು ಕರೆದ ಝೇಂಡೆ; ಸಿಟ್ಟಾದ ಅನು ಸಿರಿಮನೆ
ಆತ ಕಚೇರಿಗೆ ಹೋಗುತ್ತಿದ್ದಂತೆ ಅನುಗೆ ದೊಡ್ಡ ಅನುಮಾನ ಮೂಡಿದೆ. ‘ನಮಗೆ ಗೊತ್ತಿಲ್ಲದ್ದು ಏನೋ ಇದೆ’ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾಳೆ ಅನು. ಇದಕ್ಕೆ ಶಾರದಾ ದೇವಿ ಕೂಡ ಧ್ವನಿಗೂಡಿಸಿದ್ದಾಳೆ.
ಹರ್ಷನ ತಿರುಗೇಟು
ಝೇಂಡೆ ಕಚೇರಿಗೆ ಬರುತ್ತಿದ್ದಂತೆ ಹರ್ಷನ ಬಳಿ ಬಂದು ಹಾಯ್ ಹೇಳಿದ್ದಾನೆ. ಆಗ ಹರ್ಷ ತಿರುಗೇಟು ನೀಡಿದ್ದಾನೆ. ‘ಹಾಯ್ ಎಂದು ಹೇಳೋಕೆ ಇಲ್ಲಿಗೆ ಬಂದ್ರಾ? ದಯವಿಟ್ಟು ಅಷ್ಟಕ್ಕೇ ಬಂದಿದ್ದು ಅಂತಾದ್ರೆ ಇಲ್ಲಿಂದ ಹೊರಡಬಹುದು. ಮುಂದಿನ ಬಾರಿ ಬರುವಾಗ ನನ್ನ ಶೆಡ್ಯೂಲ್ ತಿಳಿದುಕೊಂಡು ಬಾ’ ಎಂದು ಎಚ್ಚರಿಕೆ ನೀಡಿದ್ದಾನೆ.
ಅನುಗೆ ಸತ್ಯ ಹೇಳಿದ ಜೋಗ್ತವ್ವ
ಅನು ಎದುರು ಜೋಗ್ತವ್ವ ಬಂದಿದ್ದಾಳೆ. ‘ನಿನ್ನ ಗಂಡ ಬದುಕಿದ್ದಾನೆ. ಇನ್ನೂ ತಡ ಮಾಡಿದರೆ ನಿನ್ನ ಗಂಡನ ನೀನು ಕಳೆದುಕೊಳ್ತೀಯಾ’ ಎಂದು ಎಚ್ಚರಿಕೆ ನೀಡಿ ಹೋಗಿದ್ದಾಳೆ. ಇದನ್ನು ಕೇಳಿ ಅನುಗೆ ಸಾಕಷ್ಟು ಅನುಮಾನ ಮೂಡಿದೆ. ಮತ್ತೊಂದು ಕಡೆ ಸತ್ಯ ತಿಳಿದು ಅನುಗೆ ಖುಷಿ ಕೂಡ ಆಗಿದೆ. ‘ಆರ್ಯ ಸರ್ ಬದುಕಿದ್ದಾರೆ ಎಂದು ನನಗೆ ಮೊದಲೇ ಅನಿಸಿತ್ತು. ಈಗ ಅದನ್ನು ನೀವು ಹೇಳಿದ್ದು ಖುಷಿ ನೀಡಿದೆ’ ಎಂದು ಹೇಳಿದ್ದಾಳೆ ಅನು. ಈಗ ಸಂಜುನೇ ಆರ್ಯ ಎನ್ನುವ ವಿಚಾರ ಅನುಗೆ ಶೀಘ್ರವೇ ಗೊತ್ತಾಗಬಹುದು.
ಶ್ರೀಲಕ್ಷ್ಮಿ ಎಚ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.