ಧಾರಾವಾಹಿ: ಲಕ್ಷಣ (Lakshana )
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 8.30
ನಿರ್ದೇಶನ: ಶಿವರಾಮ್ ಮಾಗಡಿ
ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಚಂದ್ರಶೇಖರ್ ಮೌರ್ಯನನ್ನು ಶೂಟ್ ಮಾಡಿ ಸಾಯಿಸಿರುವ ವಿಚಾರ ಮನೆಯವರಿಗೆಲ್ಲರಿಗೂ ಗೊತ್ತಾಗುತ್ತದೆ. ಭೂಪತಿಯ ಮನೆಯವರಿಗಂತೂ ಮನೆ ಮಗ ಇನ್ನಿಲ್ಲ ಎಂಬುವುದನ್ನು ಅರಗಿಸಿಕೊಳ್ಳಲಾಗದೆ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಇತ್ತ ನಕ್ಷತ್ರ ತಂದೆ ಮಾಡಿರುವ ತಪ್ಪಿಗೆ ತಕ್ಕ ಶಿಕ್ಷೆ ಆಗಬೇಕೆಂಬ ಕಾರಣಕ್ಕೆ ಪೋಲಿಸರಿಗೆ ಕಾಲ್ ಮಾಡಿ ಸ್ಥಳಕ್ಕೆ ಬರುವಂತೆ ಹೇಳಿರುತ್ತಾಳೆ.
ಸಿಎಸ್ ಅರೆಸ್ಟ್, ಭಾರ್ಗವಿ ತಂತ್ರಕ್ಕೆ ಬಳಿಯಾದ ಅಪ್ಪ- ಮಗಳು
ಸಿ.ಎಸ್, ನಕ್ಷತ್ರ ಇರುವಂತಹ ಸ್ಥಳಕ್ಕೆ ಆರತಿ ಹಾಗೂ ಭಾರ್ಗವಿ ಬರುತ್ತಾರೆ. ಅಲ್ಲಿಗೆ ಬಂದಾಗ ಗೊತ್ತಾಗುತ್ತೆ ನಕ್ಷತ್ರ ತನ್ನ ತಂದೆಯ ವಿರುದ್ಧನೇ ಪೋಲಿಸ್ ಕಂಪ್ಲೇಂಟ್ ಕೊಟ್ಟಿದ್ದಾಳೆ ಎಂದು. ಈ ವಿಷಯ ತಿಳಿದು ಕೋಪಗೊಂಡ ಆರತಿ, ನಿನ್ನ ತಂದೆಯ ವಿರುದ್ಧನೇ ಪೋಲಿಸರಿಗೆ ದೂರು ಕೊಟ್ಟಿದ್ದೀಯಾ. ಅವರು ನಿನ್ನ ತಂದೆ. ಯಾವ ಮನಸ್ಸಿನಿಂದ ಈ ನಿರ್ಧಾರ ಮಾಡಿದೆ. ನೀನು ಮಾಡುತ್ತಿರುವುದು ದೊಡ್ಡ ತಪ್ಪು ನಕ್ಷತ್ರ ಎಂದು ಆರತಿ ತನ್ನ ಮಗಳ ಮೇಲೆ ರೇಗಾಡುತ್ತಾರೆ. ತಾಯಿ ಎಷ್ಟೇ ಬೈದರೂ ತನ್ನ ತಂದೆ ಕ್ಷಮಿಸಲಾರದಂತಹ ದೊಡ್ಡ ತಪ್ಪು ಮಾಡಿದ್ದಾರೆಂದು ದೃಢ ನಿರ್ಧಾರ ಮಾಡಿ ಹೆತ್ತ ತಂದೆಯ ವಿರುದ್ಧ ಸಾಕ್ಷಿ ಹೇಳೇ ಹೇಳುತ್ತೇನೆ ಎಂದು ಪಟ್ಟು ಹಿಡಿದಿದ್ದಾಳೆ ನಕ್ಷತ್ರ.
ಅಷ್ಟರಲ್ಲಿ ಪೋಲಿಸ್ ಕೂಡಾ ಅಲ್ಲಿಗೆ ಬರುತ್ತಾರೆ. ಆ ಸಂದರ್ಭದಲ್ಲಿ ಕಲ್ಲು ಮನಸ್ಸು ಮಾಡಿಕೊಂಡು, ಅಮ್ಮನ ಮಾತನ್ನೇ ಮೀರಿ ನಕ್ಷತ್ರ ತನ್ನ ತಂದೆಯಾದ ಚಂದ್ರಶೇಖರ್ ಅವರನ್ನು ಬಂಧಿಸುವಂತೆ ಪೋಲಿಸರಿಗೆ ಹೇಳುತ್ತಾಳೆ. ತಂದೆಯ ವಿರುದ್ಧ ನಾನೇ ಸಾಕ್ಷಿ ಹೇಳುತ್ತೇನೆ. ಅವರು ಮೌರ್ಯನನ್ನು ಸಾಯಿಸುವುದನ್ನು ನಾನು ಕಣ್ಣಾರೇ ನೋಡಿದ್ದೇನೆ. ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ. ಅವರನ್ನು ಬಂಧಿಸಿ ಇನ್ಸ್ಪೆಕ್ಟರ್ ಎಂದು ನಕ್ಷತ್ರ ಹೇಳುತ್ತಾಳೆ.
ನಕ್ಷತ್ರಳ ಈ ಮಾತಿಗೆ ಕೋಪಗೊಂಡ ಆರತಿ ಆಕೆಯ ಕಪಾಳಕ್ಕೆ ಹೊಡೆಯಲು ಬರುತ್ತಾಳೆ. ಆಗ ಭಾರ್ಗವಿ ಮಧ್ಯ ಬಂದು ನೀನು ಏನು ಮಾಡಲು ಹೊರಟಿದ್ದೀಯಾ ಅನ್ನುವ ಪರಿಜ್ಞಾನ ನಿನಗಿದೆಯಾ ಎಂದು ಕೇಳುತ್ತಾಳೆ. ಎದುರಿಗೆ ನಾಟಕವಾಡಿದರೂ ಮನಸ್ಸಿನಲ್ಲಿ ನಾನು ಅಂದುಕೊಂಡಂತೆ ಎಲ್ಲವೂ ನಡೆಯುತ್ತಿದೆ ಎನ್ನುವ ಖುಷಿ ಭಾರ್ಗವಿಯದ್ದು. ಈಕೆಗೆ ತಂದೆಯ ಬೆಲೆ ಗೊತ್ತಿಲ್ಲ, ಅವರಿಗೆ ಸಮಾಜದಲ್ಲಿ ಯಾವ ರೀತಿಯ ಗೌರವ ಇದೆ ಎನ್ನುವುದು ಆಕೆಗೆ ಗೊತ್ತಿಲ್ಲ. ಜೈಲಿಗೆ ಕಳುಹಿಸುತ್ತಾಳಂತೆ ಅಲ್ವ ಕಳುಹಿಸಲಿ. ನನ್ನ ಗಂಡನನ್ನು ಹೇಗೆ ಬಿಡಿಸಿಕೊಂಡು ಬರಬೇಕೆಂಬುವುದು ನನಗೆ ಗೊತ್ತು ಎಂದು ಆರತಿ ಹೇಳುತ್ತಾಳೆ.
ಆರತಿ ಏನೇ ಹೇಳಿದರೂ ತಂದೆಯ ತಪ್ಪಿಗೆ ಮಗಳ ಬಳಿ ಯಾವ ಕ್ಷಮೆಯೂ ಇಲ್ಲ. ತಂದೆಯ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸಲೇಬೇಕು ಎಂದು ತಾಯಿಯ ವಿರುದ್ಧನೇ ಮಾತನಾಡುತ್ತಾಳೆ ನಕ್ಷತ್ರ. ಇದಾದ ಬಲಿಕ ಸ್ವತಃ ಚಂದ್ರಶೇಖರ್ ಪೋಲಿಸರ ಬಳಿ ಇದೆಲ್ಲಾ ನಾನೇ ಮಾಡಿದ್ದು ಹಾಗೂ ಮೃತ ದೇಹವನ್ನು ಆಗಲೇ ಸಾಗಿಸಿ ಆಯಿತು. ಅದನ್ನು ಕೇಳಬೇಡಿ ಎಂದು ಹೇಳುತ್ತಾರೆ. ಸಿ.ಎಸ್ ಅವರೇ ಈ ತಪ್ಪನ್ನು ಒಪ್ಪಿಕೊಂಡಾಗ ಕೈಗೆ ಪೋಲಿಸರು ಕೋಳ ಹಾಕುತ್ತಾರೆ. ಅದೇ ವೇಳೆಗೆ ಭೂಪತಿ ಮನೆಯವರೆಲ್ಲರೂ ಆ ಸ್ಥಳಕ್ಕೆ ಆಗಮಿಸುತ್ತಾರೆ.
ಇದನ್ನು ಓದಿ: Lakshana Serial: ಮೌರ್ಯನ ಸಾವಿನ ಸುದ್ದಿಯಿಂದ ಭೂಪತಿಗೆ ಆಘಾತ, ತಂದೆಗೆ ಶಿಕ್ಷೆ ನೀಡಿದ ನಕ್ಷತ್ರ
ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದ ಶಕುಂತಳಾದೇವಿ ಸಿ.ಎಸ್ ಕುತ್ತಿಗೆ ಪಟ್ಟಿಯನ್ನು ಹಿಡಿದು ನನ್ನ ಮಗನನ್ನು ಸಾಯಿಸುವ ಅಧಿಕಾರವನ್ನು ನಿನಗೆ ಯಾರು ಕೊಟ್ಟಿದ್ದು, ನೀನು ಒಬ್ಬ ತಂದೆಯಲ್ವ. ಹೀಗೆ ಮಾಡಲು ಮನಸ್ಸಾದರೂ ಹೇಗೆ ಬಂತು. ನೀನು ಖಂಡಿತವಾಗಿಯೂ ನಾಶವಾಗುತ್ತಿಯಾ. ಇದು ಹೆತ್ತ ತಾಯಿಯ ಶಾಪ ಅಂತ ಹೇಳಿ ಸಿ.ಎಸ್‌ಗೆ ಹಿಡಿ ಶಾಪ ಹಾಕುತ್ತಾರೆ ಶಕುಂತಳಾದೇವಿ.
ಮಗಳನ್ನು ರಕ್ಷಿಸಬೇಕೆಂದರೆ ನಾನು ಈ ಕೆಲಸ ಮಾಡಲೇ ಬೇಕಾಯಿತು. ನನ್ನನ್ನು ಕ್ಷಮಿಸಿ ಬಿಡಿ ಎಂದು ಮಾಡಿದ ಎಲ್ಲಾ ತಪ್ಪಿಗೂ ಒಂದೇ ಬಾರಿ ಕ್ಷಮೆಯನ್ನು ಕೇಳುತ್ತಾರೆ ಚಂದ್ರಶೇಖರ್. ಕೊನೆ ಪಕ್ಷ ಭೂಪತಿ ಮನೆಯವರಿಗೆ ಮೌರ್ಯನ ಮುಖವನ್ನು ನೋಡುವ ಭಾಗ್ಯವೂ ಸಿಗಲಿಲ್ಲ. ಇಷ್ಟೆಲ್ಲ ನಡೆದ ಮೇಲೆ ಭೂಪತಿ ಮನೆಯವರು ಚಂದ್ರಶೇಖರ್ ಅವರನ್ನು ಕ್ಷಮಿಸಲು ಸಾಧ್ಯನಾ. ನಕ್ಷತ್ರಳಿಗೆ ಆ ಮನೆಯಲ್ಲಿ ಸ್ಥಾನಮಾನ ಸಿಗುತ್ತಾ, ಆಕೆ ಕೂಡಾ ಅವರ ದೃಷ್ಟಿಯಲ್ಲಿ ಕೆಟ್ಟವಳಾಗುತ್ತಾಳಾ ಎಂದು ಮುಂದೆ ನೋಡಬೇಕಾಗಿದೆ.
ಮಧುಶ್ರೀ ಅಂಚನ್
Published On - 10:16 am, Thu, 1 December 22