ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷಣ ಧಾರವಾಹಿಯು ವಿಭಿನ್ನ ಕಥೆ ಹಾಗೂ ಟ್ವಿಸ್ಟ್ಗಳ ಮೂಲಕ ವೀಕ್ಷಕರ ಮನ ಗೆದ್ದಿದೆ. ಶ್ವೇತಾಳಿಗೆ ಕೊಬ್ಬಿದ ರಾಣಿ ಎಂದು ಹೇಳುವುದಕ್ಕೂ ಅವಳು ಮಾಡುವ ಕೆಸಲಕ್ಕೂ ಸರಿಯಾಗಿದೆ. ಯಾರದರೂ ತಮ್ಮ ಮನೆಯ ಬಗ್ಗೆ ಕೊಂಪೆ, ನರಕ ಎಂದರೆ ಏನಾಗಬೇಡ, ಶ್ವೇತಾ ಕೂಡಾ ಅದೇ ರೀತಿ ಆಕೆಯ ತಂದೆ ಮನೆಯನ್ನು ಸೃಷ್ಟಿಯ ಮುಂದೆನೇ ಹೀಯಾಳಿಸುತ್ತಾಳೆ. ಇದರಿಂದ ಕೋಪಗೊಂಡ ಸೃಷ್ಟಿ ರಾತ್ರಿಯೆಲ್ಲ ಹೊರಗಡೆನೇ ಬಿದ್ದಿರೂ, ಮನೆಯಿಲ್ಲದೆ ಬೀದಿಯಲ್ಲಿರುವವರ ಕಷ್ಟ ನಿನಗೂ ಗೊತ್ತಾಗಲಿ ಎಂದು ಹೇಳಿ ಅವಳನ್ನು ಮನೆಯಿಂದ ಹೊರ ಹಾಕುತ್ತಾಳೆ. ಅಮ್ಮ ಮತ್ತು ಅಜ್ಜಿಯ ಮಾತನ್ನು ಕೇಳದೆ ಮನೆಯಿಂದ ಹೊರ ಹಾಕುತ್ತಾಳೆ. ಹೊರಗಡೆ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಮನೆಯವರಿಗೆ ಶಾಪ ಹಾಕುತ್ತ ನಿಂತಿದ್ದ ಶ್ವೇತಾಳ ವೀಡಿಯೋವನ್ನು ಸೆರೆ ಹಿಡಿದು ಮಜಾ ತೆಗೆದುಕೊಳ್ಳುತ್ತಾಳೆ ಮಿಲ್ಲಿ.
ಮಕ್ಕಳಿಗೆ ಒಂದಿಷ್ಟು ನೋವಾದರೂ ಹೆಚ್ಚು ದುಃಖ ಪಡುವ ಜೀವ ಎಂದರೆ ಅದು ತಾಯಿ. ಹಾಗೇನೆ ಮಧ್ಯ ರಾತ್ರಿಯಲ್ಲಿ ಎದ್ದು ಬಂದು ಶ್ವೇತಾಳ ಪರಿಸ್ಥಿತಿ ಕಂಡು ಅಳುತ್ತಾರೆ ಜಯಮ್ಮ. ತಾಯಿಯ ಕಣ್ಣೀರು ನೋಡಳಾರದೆ ಸ್ವತಃ ಸೃಷ್ಟಿಯೇ ಶ್ವೇತಾಳನ್ನು ಒಳಗಡೆ ಮಲಗು ಎಂದು ಹೇಳಿ ಮನೆ ಒಳಗಡೆ ಕರೆದುಕೊಂಡು ಹೋಗುತ್ತಾಳೆ. ಬೆಳಗಾಗುತ್ತಿದ್ದಂತೆ ರಾತ್ರಿ ನಡೆದ ಅವಾಂತರವನ್ನು ನಕ್ಷತ್ರಳಿಗೂ ಹೇಳುತ್ತಾರೆ ಜಯಮ್ಮ. ಇತ್ತ ಕಡೆ ಮಿಲ್ಲಿ ರಾತ್ರಿ ಮಾಡಿದ್ದ ವೀಡಿಯೋವನ್ನು ಶಕುಂತಳಾದೇವಿಗೆ ಕಳುಹಿಸುವಂತೆ ಶ್ವೇತಾ ಹೇಳುತ್ತಾಳೆ.
ಇದನ್ನು ಓದಿ: ಶ್ವೇತಾಳನ್ನು ಮನೆಗೆ ಕರೆತರುವ ನಿರ್ಧಾರಕ್ಕೆ ಭೂಪತಿಗೆ ಒಪ್ಪಿಗೆಯಿಲ್ಲ
ವೀಡಿಯೋ ಯಾಕೆ ಫೋನ್ ಮಾಡಿಯೇ ವಿಷಯ ಹೇಳುತ್ತೇನೆ ಎಂದು ಹೇಳಿ ಮಿಲ್ಲಿ ಶಕುಂತಳಾದೇವಿಗೆ ಫೋನ್ ಮಾಡಿ ಶ್ವೇತಾಳನ್ನು ಈ ಮನೆಯಲ್ಲಿ ತುಂಬಾ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ, ಅವಳ ಪರಿಸ್ಥಿತಿ ಚೆನ್ನಾಗಿಲ್ಲ, ನೀವೆ ಬಂದು ನೋಡಿ ಎಂದು ಹೇಳಿ ಫೋನ್ ಕಟ್ ಮಾಡುತ್ತಾಳೆ. ಈಕೆಯ ಸುಳ್ಳು ಮಾತನ್ನು ನಂಬಿ ಶಕುಂತಳಾದೇವಿಗೆ ಏನಾಗಿರಬಹುದೆಂದು ಗಾಬರಿಯಾಗುತ್ತದೆ. ಮಗಳ ಸಂತೋಷಕ್ಕಾಗಿ ತುಕರಾಮ್ ತುಂಬಾ ಸಾಲವನ್ನು ಮಾಡಿರುತ್ತಾನೆ. ಆ ಸಾಲ ಕೊಟ್ಟ ವ್ಯಕ್ತಿ ತುಕರಾಮ್ ಮನೆಯ ಮುಂದೆ ಬೆಳಗ್ಗೇನೆ ಬಂದು ಕುಳಿತಿರುತ್ತಾರೆ.
ತುಕರಾಮ್ ಬಂದ ತಕ್ಷಣ ಸಾಲದ ಹಣವನ್ನು ಕೇಳುತ್ತಾರೆ. ಸಾಲದ ಹಣವನ್ನು ಕೊಡುತ್ತಿರುವುದು ಶ್ವೇತಾಳ ಕಣ್ಣಿಗೆ ಬೀಳುತ್ತದೆ. ತಕ್ಷಣ ತಂದೆಯ ಬಳಿ ಬಂದ ಕೊಬ್ಬಿದ ರಾಣಿ ನಾನು ಕೇಳಿದ ಹತ್ತು ಸಾವಿರ ಎಲ್ಲಿ ಎಂದು ಕೋಪದಲ್ಲಿ ಕೇಳುತ್ತಾಳೆ. ಆಗ ಸಮಾಧಾನದಿಂದಲೇ ಶ್ವೇತಾಳಿಗೆ ಕಷ್ಟವನ್ನು ವಿವರಿಸುತ್ತಾನೆ ತುಕರಾಮ್.
ತಂದೆಯ ಕಷ್ಟಕ್ಕೂ ಬೆಲೆ ಕೊಡದ ಶ್ವೇತಾ ವಠಾರದ ಜನರ ಮುಂದೆಯ ಸ್ವಂತ ತಂದೆಯನ್ನು ಹೀಯಾಳಿಕೆಯ ಮಾತುಗಳಿಂದ ಅವಮಾನಿಸುತ್ತಾಳೆ. ಈಕೆಯ ಮಾತನ್ನು ಕೇಳಿ ಕೋಪಗೊಂಡ ತುಕರಾಮ್ ಮಗಳ ಮೇಲೆ ಕೈ ಮಾಡಲು ಹೋದರೂ ನಂತರ ಸುಮ್ಮನಿದ್ದು, ಶ್ವೇತಾಳನ್ನು ಮನೆಯ ಒಳಗಡೆ ಎಳೆದುಕೊಂಡು ಹೋಗಿ ಸ್ವಂತ ಅಪ್ಪನಿಗೆ ಬೀದಿಯವರ ಮುಂದೆ ಅವಮಾನಿಸುತ್ತೀಯಾ, ನಿನಗೇನೆ ಕಮ್ಮಿ ಮಾಡಿದ್ದೇನೆ ಎಂದು ನಾಲ್ಕು ಬುದ್ಧಿ ಮಾತು ಹೇಳುತ್ತಾರೆ.
ಆದರೆ ಬುದ್ಧಿ ಮಾತುಗಳನ್ನು ಕೇಳುವ ಜಾಯಮಾನ ಈ ಶ್ವೇತಾಳಿಗೆ ಇಲ್ಲ ಅಲ್ವ. ಬುದ್ಧಿ ಮಾತು ಹೇಳಿದ ತಂದೆಯ ವಿರುದ್ಧನೇ ಮಾತನಾಡುತ್ತಾಳೆ. ಕೇಳಿದಾಗ ಹಣವನ್ನು ಕೊಡದವ ನೀನು ಒಬ್ಬ ಅಪ್ಪನಾ, ನಿನಗಿಂತ ಆ ಚಂದ್ರಶೇಖರ್ ಎಷ್ಟೋ ವಾಸಿ ಎಂದು ಹೇಳುತ್ತಾಳೆ. ಮಗಳ ಈ ಅವಮಾನದ ಮಾತನ್ನು ಕೇಳಲಾರದೆ ತುಕರಾಮ್ ಆಕೆಯ ಮೇಲೆ ಕೈ ಮಾಡಲು ಹೋದಾಗ ನನ್ನ ಮೇಲೆ ಕೈ ಮಾಡುವ ಅಧಿಕಾರ ನಿಮಗಿಲ್ಲ ಎಂದು ತಂದೆಯನ್ನು ದೂರ ತಳ್ಳುತ್ತಾಳೆ. ಇದರಿಂದ ಇನ್ನಷ್ಟು ಸಿಟ್ಟುಗೊಂಡ ತುಕರಾಮ್ ನೀನು ಈ ಮನೆಯಲ್ಲೇ ಇರಬೇಡ, ಆ ಚಂದ್ರಶೇಖರ್ ಮನೆಗೆನೇ ಹೋಗು ಎಂದು ಹೇಳುತ್ತಾನೆ. ನಿಜವಾಗಿಯೂ ಶ್ವೇತಾಳನ್ನು ಆಕೆಯ ತಂದೆಯೇ ಮನೆಯಿಂದ ಹೊರ ಹಾಕುತ್ತಾರಾ, ಕೊಬ್ಬಿದ ರಾಣಿಯ ಸಹಾಯಕ್ಕೆ ಶಕುಂತಳಾದೇವಿ ಬರುತ್ತಾರಾ ಎಂದು ಮುಂದೆ ನೋಡಬೇಕಾಗಿದೆ.
ಮಧುಶ್ರೀ
Published On - 12:31 pm, Wed, 26 October 22