ಸೋಶಿಯಲ್ ಮೀಡಿಯಾದಲ್ಲಿ ಲಾಯರ್ ಜಗದೀಶ್ ಹಲವಾರು ವಿಡಿಯೋಗಳ ಮೂಲಕ ಫೇಮಸ್ ಆಗಿದ್ದಾರೆ. ಕಾನೂನಿನ ಬಗ್ಗೆ ಅವರು ಯಾವಾಗಲೂ ಧ್ವನಿ ಎತ್ತುತ್ತಾರೆ. ಆದರೆ ಅವರು ಬಿಗ್ ಬಾಸ್ ಮನೆಯ ಕಾನೂನು ಅರ್ಥ ಮಾಡಿಕೊಳ್ಳುವಲ್ಲಿ ಸೋತಿದ್ದಾರೆ. ಹಾಗಾಗಿ ಮೊದಲ ದಿನವೇ ಅವರು ಆಟದ ರೂಲ್ಸ್ ಬ್ರೇಕ್ ಮಾಡಿದ್ದು, ಇನ್ನುಳಿದ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಹಾಗಾದ್ರೆ ಜಗದೀಶ್ ಮಾಡಿದ ತಪ್ಪು ಏನು? ‘ಬಿಗ್ ಬಾಸ್ ಕನ್ನಡ ಸೀನಸ್ 11’ ಶೋನಲ್ಲಿ ಅವರ ಆಟ ಹೇಗೆ ಶುರುವಾಗಿದೆ? ಇಲ್ಲಿದೆ ಉತ್ತರ..
ದೊಡ್ಮನೆಯೊಳಗೆ ಎರಡು ಭಾಗ ಇದೆ. ಸ್ವರ್ಗದಲ್ಲಿ ಕೆಲವರು ಇದ್ದಾರೆ. ನರಕದಲ್ಲಿ ಇನ್ನುಳಿದವರು ಇದ್ದಾರೆ. ಮನೆಯ ಒಂದಷ್ಟು ಕೆಲಸವನ್ನು ನರಕವಾಸಿಗಳಿಂದ ಮಾಡಿಸಲಾಗುತ್ತಿದೆ. ಆ ಕೆಲಸವನ್ನು ಸ್ವರ್ಗವಾಸಿಗಳು ಮಾಡುವಂತಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಬಿಗ್ ಬಾಸ್ ಮನೆಯ ನಿಯಮವನ್ನು ಮುರಿದಂತೆ ಆಗುತ್ತದೆ. ಇಂಥ ಪ್ರಮಾದವನ್ನು ಲಾಯರ್ ಜಗದೀಶ್ ಮಾಡಿದ್ದಾರೆ.
ಬಿಗ್ ಬಾಸ್ ಮನೆಯನ್ನು ಕ್ಲೀನ್ ಮಾಡುವ ಕೆಲಸ ಚೈತ್ರಾ ಕುಂದಾಪುರ ಅವರಿಗೆ ನೀಡಲಾಗಿದೆ. ಆದರೆ ಅವರು ಸರಿಯಾಗಿ ಸ್ವಚ್ಛ ಮಾಡಿಲ್ಲ ಎಂಬ ಕಾರಣಕ್ಕೆ ಲಾಯರ್ ಜಗದೀಶ್ ಅವರು ಕ್ಲೀನ್ ಮಾಡಿದ್ದಾರೆ. ಇದರಿಂದ ನಿಯಮದ ಉಲ್ಲಂಘನೆ ಆಗಿದೆ. ಈ ಬಗ್ಗೆ ಇನ್ನುಳಿದ ಸ್ಪರ್ಧಿಗಳು ಜಗದೀಶ್ಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ತಾವು ಮಾಡಿದ್ದಕ್ಕೆ ಸಮರ್ಥನೆ ನೀಡಲು ಅವರು ಮುಂದಾಗಿದ್ದಾರೆ.
ಒಂದರ್ಥದಲ್ಲಿ ನೋಡಿದರೆ ಇದಕ್ಕೆ ಚೈತ್ರಾ ಕುಂದಾಪುರ ಅವರೇ ಮೂಲ ಕಾರಣ. ಅವರು ಸರಿಯಾಗಿ ಕ್ಲೀನ್ ಮಾಡದೇ ಇರುವುದರಿಂದಲೇ ಈ ರೀತಿ ಗೊಂದಲ ಉಂಟಾಗಿದೆ. ಈ ಬಗ್ಗೆ ವೀಕೆಂಡ್ನಲ್ಲಿ ಸುದೀಪ್ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು. ಅದಕ್ಕೂ ಮುನ್ನ ಈ ವಿಚಾರಕ್ಕೆ ಬಿಗ್ ಬಾಸ್ ನಿಲುವು ಏನು ಎಂಬುದನ್ನು ಕೂಡ ತಿಳಿಯಬೇಕಿದೆ. ‘ಕಲರ್ಸ್ ಕನ್ನಡ’ ಮತ್ತು ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮ ಪ್ರಸಾರ ಆಗಲಿದೆ.
ಇದನ್ನೂ ಓದಿ: ಉಗ್ರಂ ಮಂಜು ಜೊತೆ ಚೈತ್ರಾ ಕುಂದಾಪುರ ಕಿರಿಕ್: ಬಿಗ್ ಬಾಸ್ ಮೊದಲ ದಿನವೇ ರಂಪಾಟ
‘ಬಿಗ್ ಬಾಸ್ ಕನ್ನಡ ಸೀಸನ್ 11’ ಸ್ಪರ್ಧಿಗಳು:
ಲಾಯರ್ ಜಗದೀಶ್, ಚೈತ್ರಾ ಕುಂದಾಪುರ, ಉಗ್ರಂ ಮಂಜು, ಅನುಷಾ ರೈ, ಧರ್ಮ ಕೀರ್ತಿರಾಜ್, ತ್ರಿವಿಕ್ರಮ್, ಶಿಶಿರ್, ರಂಜಿತ್, ಹಂಸಾ, ಮಾನಸಾ, ಗೋಲ್ಡ್ ಸುರೇಶ್, ಗೌತಮಿ ಜಾಧವ್, ಧನರಾಜ್, ಭವ್ಯಾ ಗೌಡ, ಯಮುನಾ ಶ್ರೀನಿಧಿ, ಐಶ್ವರ್ಯಾ, ಮೋಕ್ಷಿತಾ ಅವರು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.