‘ಮಹಾಭಾರತ​’ ಸೀರಿಯಲ್​ ಅರ್ಜುನ ಪಾತ್ರಧಾರಿ ಶಾಹೀರ್ ಶೇಖ್​ ತಂದೆ ಕೊವಿಡ್​ನಿಂದ ನಿಧನ

| Updated By: ಮದನ್​ ಕುಮಾರ್​

Updated on: Jan 20, 2022 | 12:47 PM

ಶಾಹೀರ್ ಶೇಖ್​ ತಂದೆ ಕೊರೊನಾ ವೈರಸ್​ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಅವರು ಕೊವಿಡ್​ಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ವಿಷಯವನ್ನು ಒಂದು ದಿನ ಮುಂಚೆಯಷ್ಟೇ ಶಾಹೀರ್ ಶೇಖ್ ತಿಳಿಸಿದ್ದರು.

‘ಮಹಾಭಾರತ​’ ಸೀರಿಯಲ್​ ಅರ್ಜುನ ಪಾತ್ರಧಾರಿ ಶಾಹೀರ್ ಶೇಖ್​ ತಂದೆ ಕೊವಿಡ್​ನಿಂದ ನಿಧನ
ಶಾಹೀರ್ ಶೇಖ್ ಅವರ ತಂದೆ ಕೊರೊನಾ ವೈರಸ್​ನಿಂದ ಪ್ರಾಣ ಕಳೆದುಕೊಂಡಿದ್ದಾರೆ
Follow us on

ಕೊರೊನಾ ವೈರಸ್ (Covid 19)​ ಹಾವಳಿಗೆ ಅನೇಕ ಜೀವಗಳು ಬಲಿ ಆಗುತ್ತಿವೆ. ಸೆಲೆಬ್ರಿಟಿಗಳ ವಲಯದಲ್ಲಿ ಅನೇಕರಿಗೆ ಕೊರೊನಾ ವೈರಸ್​ ತಗುಲಿದೆ. ಕನ್ನಡ ಚಿತ್ರರಂಗದ ನಿರ್ದೇಶಕ ಪ್ರದೀಪ್​ ರಾಜ್​ ಅವರು ಕೊವಿಡ್​ನಿಂದ ನಿಧನರಾದ ಸುದ್ದಿ ಮುಂಜಾನೆಯಷ್ಟೇ ಕೇಳಿಬಂದಿತ್ತು. ಅದರ ಬೆನ್ನಲ್ಲೇ ಮತ್ತೊಂದು ಕಹಿ ಸುದ್ದಿ ಹೊರಬಿದ್ದಿದೆ. ‘ಮಹಾಭಾರತ’ (Mahabharat Serial) ಹಿಂದಿ ಸೀರಿಯಲ್​ನಲ್ಲಿ ಅರ್ಜುನನ ಪಾತ್ರ ಮಾಡುವ ಮೂಲಕ ಫೇಮಸ್​ ಆದ ನಟ ಶಾಹೀರ್ ಶೇಖ್​ ಅವರ ತಂದೆ ಕೂಡ ಕೊರೊನಾ ವೈರಸ್​ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಅವರು ಕೊವಿಡ್​ಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ವಿಷಯವನ್ನು ಒಂದು ದಿನ ಮುಂಚೆಯಷ್ಟೇ ಶಾಹೀರ್ ಶೇಖ್​ (Shaheer Sheikh) ತಿಳಿಸಿದ್ದರು. ತಂದೆಗಾಗಿ ಪ್ರಾರ್ಥಿಸಿ ಎಂದು ಅಭಿಮಾನಿಗಳಲ್ಲಿ ಅವರು ವಿನಂತಿಸಿಕೊಂಡಿದ್ದರು. ಆದರೆ ಇಂದು ತಂದೆಯನ್ನು ಕಳೆದುಕೊಂಡು ಅವರು ತೀವ್ರ ದುಃಖದಲ್ಲಿದ್ದಾರೆ. ಅವರ ಕುಟುಂಬಕ್ಕೆ ಸ್ನೇಹಿತರು ಮತ್ತು ಅಭಿಮಾನಿಗಳು ಸಾಂತ್ವನ ಹೇಳುತ್ತಿದ್ದಾರೆ.

ಹಿಂದಿ ಕಿರುತೆರೆಯಲ್ಲಿ ಶಾಹೀರ್ ಶೇಖ್​ ತುಂಬಾ ಫೇಮಸ್​. ಕ್ಯಾ ಮಸ್ತ್​ ಹೈ ಲೈಫ್​, ಝಾನ್ಸಿ ಕಿ ರಾಣಿ, ಕುಚ್​ ರಂಗ್​ ಪ್ಯಾರ್​ ಕೆ ಐಸಾ ಬಿ ಮುಂತಾದ ಸೀರಿಯಲ್​ಗಳಲ್ಲಿ ಅವರು ನಟಿಸಿದ್ದಾರೆ. 2013-14ರಲ್ಲಿ ಪ್ರಸಾರವಾದ ‘ಮಹಾಭಾರತ’ ಧಾರಾವಾಹಿಯಲ್ಲಿ ಅರ್ಜುನನ ಪಾತ್ರ ಮಾಡುವ ಮೂಲಕ ಶಾಹೀರ್ ಶೇಖ್​ ಹೆಚ್ಚು ಜನಪ್ರಿಯತೆ ಪಡೆದರು. ಈ ಧಾರಾವಾಹಿ ಕನ್ನಡಕ್ಕೂ ಡಬ್​ ಆಗಿ ಪ್ರಸಾರ ಕಂಡಿದೆ. ಆ ಮೂಲಕ ಕನ್ನಡದ ಪ್ರೇಕ್ಷಕರಿಗೂ ಶಾಹೀರ್ ಶೇಖ್​ ಪರಿಚಿತರಾಗಿದ್ದಾರೆ. ಅವರ ತಂದೆಯ ನಿಧನಕ್ಕೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

‘ನನ್ನ ತಂದೆ ವೆಂಟಿಲೇಟರ್​ನಲ್ಲಿದ್ದಾರೆ. ಕೊವಿಡ್ ಸೋಂಕಿನಿಂದ ಅವರು ತೀವ್ರವಾಗಿ ಬಳಲುತ್ತಿದ್ದಾರೆ. ದಯವಿಟ್ಟು ಅವರಿಗಾಗಿ ಪ್ರಾರ್ಥಿಸಿ’ ಎಂದು ಜ.19ರಂದು ಶಾಹೀರ್ ಶೇಖ್​ ಟ್ವೀಟ್​ ಮಾಡಿದ್ದರು. ಆದರೆ ಯಾರ ಪ್ರಾರ್ಥನೆಯೂ ಫಲಿಸಿಲ್ಲ. ಕೊರೊನಾ ವೈರಸ್​ಗೆ ಅವರ ತಂದೆ ಬಲಿಯಾಗಿದ್ದಾರೆ. ಈ ಸುದ್ದಿಯನ್ನು ನಟ ಅಲಿ ಗೊನಿ ಖಚಿತ ಪಡಿಸಿದ್ದಾರೆ. ‘ಅಂಕಲ್​ ಆತ್ಮಕ್ಕೆ ಆ ದೇವರು ಶಾಂತಿ ನೀಡಲಿ. ಶಾಹೀರ್ ಶೇಖ್​ ಧೈರ್ಯದಿಂದಿರಿ’ ಎಂದು ಅವರು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:

Pradeep Raj Death: ಕೊರೊನಾ ಸೋಂಕಿನಿಂದ ‘ಕಿರಾತಕ’ ಚಿತ್ರದ​ ನಿರ್ದೇಶಕ ಪ್ರದೀಪ್​ ರಾಜ್​ ನಿಧನ

ಕೊರೊನಾ 3ನೇ ಅಲೆ ಉತ್ತುಂಗದಲ್ಲಿ ಪ್ರತಿದಿನದ ಸೋಂಕು ಪ್ರಕರಣಗಳು 1 ಲಕ್ಷ ದಾಟಬಹುದು: ಆರೋಗ್ಯ ಸಚಿವ ಸುಧಾಕರ

Published On - 12:46 pm, Thu, 20 January 22