‘ಬಿಗ್ ಬಾಸ್ ಹಿಂದಿ ಸೀಸನ್ 17’ (Bigg Boss Hindi) ಪೂರ್ಣಗೊಂಡಿದೆ. ಈ ಸೀಸನ್ ಸಾಕಷ್ಟು ಸುದ್ದಿ ಆಗಿತ್ತು. ಈ ಸೀಸನ್ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿತ್ತು. ಈ ಬಾರಿ ಸಾಕಷ್ಟು ವಿವಾದಗಳು ಕೂಡ ಆದವು. ಸ್ಪರ್ಧಿಗಳ ಮಧ್ಯೆ ಸಾಕಷ್ಟು ಕಿತ್ತಾಟ ನಡೆದಿದೆ. ವಿಕ್ಕಿ ಜೈನ್ ಹಾಗೂ ಅಂಕಿತಾ ಲೋಖಂಡೆ ದಂಪತಿ ಕೂಡ ದೊಡ್ಮನೆಗೆ ಎಂಟ್ರಿ ಕೊಟ್ಟು ಸುದ್ದಿ ಆದರು. ಅವರ ಸಂಬಂಧ ವಿಚ್ಛೇದನದವರೆಗೆ ಹೋಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಕೆಲವು ಸ್ಪರ್ಧಿಗಳಿಗೆ ದೊಡ್ಡ ಮಟ್ಟದ ಫಾಲೋವರ್ಸ್ ಸಿಕ್ಕಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ವಿಕ್ಕಿ ಜೈನ್ ಅವರು ದೊಡ್ಮನೆಗೆ ಬಂದು ಸಾಕಷ್ಟು ಗಮನ ಸೆಳೆದರು. ಫಿನಾಲೆ ವೀಕ್ನಲ್ಲಿ ಅವರು ಔಟ್ ಆದರು. ಈ ಮೂಲಕ ಟಾಪ್ ಐದರಲ್ಲಿ ಒಬ್ಬರಾಗಬೇಕು ಎನ್ನುವ ಕನಸು ನನಸಾಗಲೇ ಇಲ್ಲ. ಅವರು ಬಿಗ್ ಬಾಸ್ಗೆ ಬರುವಾಗ ಇನ್ಸ್ಟಾಗ್ರಾಮ್ನಲ್ಲಿ 18 ಸಾವಿರ ಹಿಂಬಾಲಕರನ್ನು ಹೊಂದಿದ್ದರು. ಅದು ಈಗ 74 ಸಾವಿರಕ್ಕೆ ಏರಿಕೆ ಆಗಿದೆ. ಅವರು ಉದ್ಯಮಿ.
ಅರುಣ್ ಮಾಶೆಟ್ಟಿ ಅವರು ಫಿನಾಲೆ ತಲುಪಿದವರಲ್ಲಿ ಒಬ್ಬರು. ಇವರು ಬಿಗ್ ಬಾಸ್ ಮನೆಗೆ ಹೋಗುವಾಗ 6.39 ಲಕ್ಷ ಹಿಂಬಾಲಕರು ಇದ್ದರು. ಈಗ ಅವರಿಗೆ ಬಿಗ್ ಬಾಸ್ನಿಂದ ಅಭಿಮಾನಿ ಬಳಗ ಹಿರಿದಾಗಿದೆ. ಅವರ ಹಿಂಬಾಲಕರ ಸಂಖ್ಯೆ 11 ಲಕ್ಷಕ್ಕೆ ಏರಿಕೆ ಆಗಿದೆ. ಇದು ಅವರಿಗೆ ಸಿಕ್ಕ ಜನಪ್ರಿಯತೆಗೆ ಸಾಕ್ಷಿ.
ಇಶಾ ಮಾಲ್ವಿಯಾ ಅವರು ಬಿಗ್ ಬಾಸ್ಗೆ ಬಂದು ಖ್ಯಾತಿ ಪಡೆದರು. ಅವರಿಗೆ ಈ ಮೊದಲು 11 ಲಕ್ಷ ಹಿಂಬಾಲಕರು ಇದ್ದರು. ಅದು ಈಗ 20 ಲಕ್ಷಕ್ಕೆ ಏರಿಕೆ ಆಗಿದೆ. ಧಾರಾವಾಹಿಗಳಲ್ಲಿ ನಟಿಸಿ ಇಶಾ ಫೇಮಸ್ ಆಗಿದ್ದಾರೆ.
ಮನಾರಾ ಚೋಪ್ರಾ ಅವರು ಪ್ರಿಯಾಂಕಾ ಚೋಪ್ರಾ ಅವರ ಸಂಬಂಧಿ. ಅವರು ಈ ಬಾರಿ ಬಿಗ್ ಬಾಸ್ಗೆ ಬಂದಿದ್ದರು. ಫಿನಾಲೆವರೆಗೆ ಅವರು ಇದ್ದರು. ಅವರಿಗೆ ಈ ಮೊದಲು 17 ಲಕ್ಷ ಹಿಂಬಾಲಕರು ಇದ್ದರು. ಅದು ಈಗ 30 ಲಕ್ಷಕ್ಕೆ ಏರಿಕೆ ಆಗಿದೆ. ಗ್ಲಾಮರ್ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ.
ಈ ಬಾರಿ ಬಿಗ್ ಬಾಸ್ನಲ್ಲಿ ಸಾಕಷ್ಟು ಹೈಲೈಟ್ ಆದ ಸ್ಪರ್ಧಿಗಳಲ್ಲಿ ಅಭಿಷೇಕ್ ಕೂಡ ಒಬ್ಬರು. ಅವರು ಸಮರ್ಥ್ ಮೇಲೆ ಕೈ ಮಾಡಿ ಬಿಗ್ ಬಾಸ್ನಿಂದ ಔಟ್ ಕೂಡ ಆಗಿದ್ದರು. ನಂತರ ಮತ್ತೆ ಅವರಿಗೆ ದೊಡ್ಮನೆಗೆ ಬರೋಕೆ ಅವಕಾಶ ಸಿಕ್ಕಿತು. ಅವರು ಮೊದಲ ರನ್ನರ್ ಅಪ್ ಆಗಿದ್ದಾರೆ. ಬಿಗ್ ಬಾಸ್ಗೆ ಬರುವಾಗ ಅವರಿಗೆ 6.35 ಲಕ್ಷ ಹಿಂಬಾಲಕರು ಇದ್ದರು. ಅದು ಈಗ 39 ಲಕ್ಷಕ್ಕೆ ಏರಿಕೆ ಆಗಿದೆ. ಅವರ ಜನಪ್ರಿಯತೆ ಸಾಕಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: ಟ್ರೋಫಿ ಗೆದ್ದ ಬಳಿಕ ಸಲ್ಮಾನ್ ಖಾನ್ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಮುನಾವರ್
ಮುನಾವರ್ ಫಾರೂಕಿ ಸ್ಟ್ಯಾಂಡಪ್ ಕಾಮಿಡಿಗಳ ಮೂಲಕ ಗಮನ ಸೆಳೆದವರು. ಅವರು ಬಿಗ್ ಬಾಸ್ ಗೆದ್ದಿದ್ದಾರೆ. ಅವರು ಬರೆಯೋ ಶಾಯರಿಗಳು ಫ್ಯಾನ್ಸ್ಗೆ ಇಷ್ಟವಾಗಿವೆ. ಅವರು ಬಿಗ್ ಬಾಸ್ಗೆ ಬರುವಾಗ 63 ಲಕ್ಷ ಹಿಂಬಾಲಕರು ಇದ್ದರು. ಅದು ಈಗ 1.3 ಕೋಟಿಗೆ ಏರಿಕೆ ಆಗಿದೆ. ಅಂದರೆ ಅವರ ಹಿಂಬಾಲಕರ ಸಂಖ್ಯೆ ದ್ವಿಗುಣ ಆಗಿದೆ. ಅವರು ಹೋದಲ್ಲೆಲ್ಲ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ