Mokshitha Pai: ಮೋಕ್ಷಿತಾಗೆ ತೆರೆಯಿತು ದೊಡ್ಮನೆ ಬಾಗಿಲು; ನಡೆಯಿತು ಕೊನೆಯ ಎಲಿಮಿನೇಷನ್

|

Updated on: Jan 26, 2025 | 9:41 PM

ಬಿಗ್ ಬಾಸ್ ಕನ್ನಡದಲ್ಲಿ ಟಾಪ್ 5ರಲ್ಲಿ ಇದ್ದ ಮೋಕ್ಷಿತಾ ಅವರು ಮೂರನೇ ರನ್ನರ್ ಅಪ್ ಆಗಿ ಎಲಿಮಿನೇಟ್ ಆಗಿದ್ದಾರೆ. ಪಾರು ಧಾರಾವಾಹಿಯ ಮೂಲಕ ಜನಪ್ರಿಯರಾದ ಮೋಕ್ಷಿತಾ ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮ ಪ್ರದರ್ಶನದ ಮೂಲಕ ಅಭಿಮಾನಿಗಳನ್ನು ಸೆಳೆದಿದ್ದರು. ಅವರ ಎಲಿಮಿನೇಷನ್ ಅಭಿಮಾನಿಗಳಲ್ಲಿ ನಿರಾಶೆಯನ್ನುಂಟು ಮಾಡಿದೆ, ಆದರೆ ಅವರ ಸಾಧನೆಯನ್ನು ಫ್ಯಾನ್ಸ್ ಸ್ಮರಿಸುತ್ತಾರೆ.

Mokshitha Pai: ಮೋಕ್ಷಿತಾಗೆ ತೆರೆಯಿತು ದೊಡ್ಮನೆ ಬಾಗಿಲು; ನಡೆಯಿತು ಕೊನೆಯ ಎಲಿಮಿನೇಷನ್
ಮೋಕ್ಷಿತಾ ಪೈ
Follow us on

‘ಬಿಗ್ ಬಾಸ್’ ಮನೆಯಲ್ಲಿ ಕಪ್ ಗೆಲ್ಲಬೇಕು ಎನ್ನುವ ಹಂತದಲ್ಲಿ ಮೋಕ್ಷಿತಾ ಅವರು ಎಲಿಮಿನೇಟ್ ಆಗಿದ್ದಾರೆ. ಟಾಪ್ 4ರಲ್ಲಿ ಇದ್ದ ಅವರು ದೊಡ್ಮನೆಯಿಂದ ಹೊರಕ್ಕೆ ಹೋಗಿದ್ದಾರೆ. ಈ ಮೂಲಕ ಹನುಮಂತ, ರಜತ್ ಹಾಗೂ ತ್ರಿವಿಕ್ರಂ ಪೈಕಿ ಒಬ್ಬರಿಗೆ ಕಪ್ ಹೋಗಲಿದೆ. ಇದಕ್ಕಾಗಿ ಕ್ಷಣಗಣನೆ ಶುರವಾಗಿದೆ. ಟಾಪ್ ಐದರಲ್ಲಿ ಇದ್ದ ಏಕೈಕ ಮಹಿಳಾ ಸ್ಪರ್ಧಿ ಅವರಾಗಿದ್ದಾರೆ.

ಮೋಕ್ಷಿತಾ ಅವರು ಜೀ ಕನ್ನಡದ ‘ಪಾರು’ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಮೂಲಕ ಜನಪ್ರಿಯತೆ ಪಡೆದರು. ಅವರು ಬಿಗ್ ಬಾಸ್ ವೇದಿಕೆ ಏರಿದರು. ಟಾಸ್ಕ್ ಮೂಲಕ ಗಮನ ಸೆಳೆದ ಅವರು, ಹನುಮಂತ ಅವರ ಸಹಾಯದಿಂದ ಫಿನಾಲೆ ಟಿಕೆಟ್ ಪಡೆದರು. ಕಪ್ ಗೆಲ್ಲುವುದಿಲ್ಲ ಎನ್ನುವುದು ಅವರಿಗೇ ಖಚಿತತೆ ಇತ್ತು. ಅದರಂತೆಯೇ ಆಗಿದೆ. ಅವರು ಮೂರನೇ ರನ್ನರ್​ ಅಪ್ ಆಗಿ ಸಾಧನೆ ಮಾಡಿದ್ದಾರೆ.

ಶನಿವಾರ (ಜನವರಿ 25) ಭವ್ಯಾ ಗೌಡ ಅವರು ಎಲಿಮಿನೇಟ್ ಆದರು. ಈ ಮೂಲಕ ಫಿನಾಲೆಯ ಎರಡನೇ ದಿನಕ್ಕೆ ಐವರು ಮಾತ್ರ ಎಂಟ್ರಿ ಕೊಟ್ಟರು. ಹನುಮಂತ, ತ್ರಿವಿಕ್ರಂ, ರಜತ್, ಮೋಕ್ಷಿತಾ ಹಾಗೂ ಮಂಜು ಟಾಪ್ 5ರಲ್ಲಿ ಉಳಿದರು. ಮಂಜು ಮೊದಲು ಹೋದರೆ ನಂತರ  ಮೋಕ್ಷಿತಾ ಅವರು ಔಟ್ ಆದರು.

ಇದನ್ನೂ ಓದಿ: ‘ಅಪನಿಂದನೆ ಮಾತ್ರ ನಿನಗೆ ಸಿಕ್ಕಿದ್ದು’; ಮಕ್ಕಳ ಕಳ್ಳಿ ಆರೋಪದ ಬಗ್ಗೆ ಮೋಕ್ಷಿತಾಗೆ ಪರೋಕ್ಷವಾಗಿ ಹೇಳಿದ್ರಾ ಗುರೂಜಿ?

ಮೋಕ್ಷಿತಾ ಅಭಿಮಾನಿ ಬಳಗ ಹಿರಿದಾಗಿದೆ. ಅವರಿಗೆ ಇಲ್ಲಿಯವರೆಗೆ ಬಂದ ವಿಚಾರ ಖುಷಿ ಕೊಟ್ಟಿದೆ. ಮೋಕ್ಷಿತಾ ಕಪ್ ಗೆಲ್ಲಬೇಕು ಎಂಬುದು ಅವರ ಅಭಿಮಾನಿಗಳ ಆಸೆ ಆಗಿತ್ತು. ಆದರೆ, ಆ ಆಸೆ ಈಡೇರಿಲ್ಲ ಎಂಬ ಬಗ್ಗೆ ಅವರಿಗೆ ಸಾಕಷ್ಟು ಬೇಸರ ಇದೆ. ಅವರಿಗೆ ಹೊರ ಬಂದ ಬಳಿಕ ಸಿನಿಮಾ ಮಾಡುತ್ತಾರಾ ಕಿರುತೆರೆಯಲ್ಲಿ ಮುಂದುವರಿಯುತ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 9:39 pm, Sun, 26 January 25