AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಿಮಾಕು ತೋರಿಸಿದ ಮೋಕ್ಷಿತಾಗೆ ಸಖತ್ ಶೇಪ್​ಔಟ್; ಗೌತಮಿ ಈಗ ಕ್ಯಾಪ್ಟನ್

ಬಿಗ್ ಬಾಸ್​ನಲ್ಲಿ ಬಂದ ಅವಕಾಶವನ್ನು ಯಾವತ್ತೂ ಕೈ ಚೆಲ್ಲಬಾರದು. ಹಾಗೆ ಚೆಲ್ಲಿದರೆ ಅದಕ್ಕೆ ದೊಡ್ಡ ದಂಡ ತೆತ್ತಬೇಕಾಗುತ್ತದೆ. ಇದು ಸ್ಪರ್ಧಿಗಳಿಗೆ ಅನೇಕ ಬಾರಿ ಅನುಭವ ಆಗಿದೆ. ಆದಾಗ್ಯೂ ಅನೇಕರು ಮತ್ತೆ ಮತ್ತೆ ಇದೇ ತಪ್ಪನ್ನು ಮಾಡುತ್ತಿದ್ದಾರೆ. ಮೋಕ್ಷಿತಾ ಕೂಡ ಇದೇ ತಪ್ಪನ್ನು ಮಾಡಿ ದೊಡ್ಡ ದಂಡ ತೆತ್ತಿದರು.

ಧಿಮಾಕು ತೋರಿಸಿದ ಮೋಕ್ಷಿತಾಗೆ ಸಖತ್ ಶೇಪ್​ಔಟ್; ಗೌತಮಿ ಈಗ ಕ್ಯಾಪ್ಟನ್
ರಾಜೇಶ್ ದುಗ್ಗುಮನೆ
|

Updated on:Dec 06, 2024 | 8:05 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್​ಗಳು ಸಿಕ್ಕಿವೆ. ಮೋಕ್ಷಿತಾ ಪೈ ಅವರು ಧಿಮಾಕು ತೋರಿದರು. ಜನರು ಆದೇಶವನ್ನು ಬದಿಗೊತ್ತಿದರು. ಇದಕ್ಕೆ ಅವರು ಸರಿಯಾದ ಪಾಠ ಕಲಿತಿದ್ದಾರೆ. ತಮಗೆ ಸಿಕ್ಕ ಅವಕಾಶ ಕೈ ಚೆಲ್ಲಿದರು. ಇದು ಅವರಿಗೆ ಮುಳುವಾಗಿ ಹೋಗಿದೆ. ಈ ಅವಕಾಶ ಬಳಕೆ ಮಾಡಿಕೊಂಡ ಗೌತಮಿ ಅವರು ಕ್ಯಾಪ್ಟನ್ ಆಗಿದ್ದಾರೆ! ಇದರಿಂದ ಮೋಕ್ಷಿತಾ ಉರಿದುರಿದು ಹೋಗಿದ್ದಾರೆ.

ಬಿಗ್ ಬಾಸ್​ನಲ್ಲಿ ಬಂದ ಅವಕಾಶವನ್ನು ಯಾವತ್ತೂ ಕೈ ಚೆಲ್ಲಬಾರದು. ಹಾಗೆ ಚೆಲ್ಲಿದರೆ ಅದಕ್ಕೆ ದೊಡ್ಡ ದಂಡ ತೆತ್ತಬೇಕಾಗುತ್ತದೆ. ಇದು ಸ್ಪರ್ಧಿಗಳಿಗೆ ಅನೇಕ ಬಾರಿ ಅನುಭವ ಆಗಿದೆ. ಆದಾಗ್ಯೂ ಅನೇಕರು ಮತ್ತೆ ಮತ್ತೆ ಇದೇ ತಪ್ಪನ್ನು ಮಾಡುತ್ತಿದ್ದಾರೆ. ಮೋಕ್ಷಿತಾ ಕೂಡ ಇದೇ ತಪ್ಪನ್ನು ಮಾಡಿ ದೊಡ್ಡ ದಂಡ ತೆತ್ತಿದರು.

ಈ ಬಾರಿ ಎರಡು ತಂಡಗಳನ್ನು ಮಾಡಲಾಗಿತ್ತು. ಈ ಪೈಕಿ ಮೋಕ್ಷಿತಾ ತಂಡ ಗೆಲುವು ಕಂಡಿತು. ತಾವು ಗೆಲ್ಲಲು ತಮ್ಮ ಪರವಾಗಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಬಿಗ್ ಬಾಸ್ ನೀಡಿದರು ಮತ್ತು ಆ ಸ್ಪರ್ಧಿ ಎದುರಾಳಿ ತಂಡದವರೇ ಆಗಬೇಕಿತ್ತು. ಮೋಕ್ಷಿತಾ ಅವರಿಗೆ ಗೌತಮಿ ಅವರ ಆಯ್ಕೆ ಬಂತು. ಇದಕ್ಕೆ ಮೋಕ್ಷಿತಾ ಧಿಮಾಕು ತೋರಿದರು.

ಇದನ್ನೂ ಓದಿ: ಗೌತಮಿ ಎದುರು ಮೋಕ್ಷಿತಾಗೆ ದೊಡ್ಡ ಸೋಲು; ಎಚ್ಚರಿಕೆ ನೀಡಿದ ಬಿಗ್ ಬಾಸ್

‘ಗೌತಮಿ ಗೆದ್ದು ನಾನು ಕ್ಯಾಪ್ಟನ್ ಆಗಬೇಕೆಂಬುದು ಯಾವತ್ತೂ ಇಲ್ಲ’ ಎಂದಿದ್ದಾರೆ ಮೋಕ್ಷಿತಾ. ಇದಕ್ಕೆ ಬಿಗ್ ಬಾಸ್ ಎಚ್ಚರಿಕೆಯನ್ನು ಕೂಡ ನೀಡಿದರು. ಇದಕ್ಕೆ ನೀವು ದೊಡ್ಡ ದಂಡ ತೆತ್ತಬೇಕಾಗುತ್ತದೆ ಎಂದರು. ಕೊನೆಗೆ ಮೋಲ್ಷಿತಾ ಬದಲಾಗಿ ಓರ್ವ ಬೇರೆ ಆಟಗಾರನನ್ನು ಎದುರಾಳಿ ತಂಡದಿಂದ ಆಯ್ಕೆ ಮಾಡಲು ಅವಕಾಶ ನೀಡಲಾಯಿತು. ಆಗ ಎಲ್ಲರೂ ಗೌತಮಿ ಅವರನ್ನು ಆಯ್ಕೆ ಮಾಡಿದರು. ಈಗ ರಿಲೀಸ್ ಆಗಿರೋ ಹೊಸ ಪ್ರೋಮೋದಲ್ಲಿ ಗೌತಮಿ ಕ್ಯಾಪ್ಟನ್ ಆಗಿದ್ದಾರೆ. ಮೋಕ್ಷಿತಾ ಕೊಟ್ಟ ಅವಕಾಶದಿಂದ ಗೌತಮಿಗೆ ಈ ಪಟ್ಟ ಒಲಿದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:56 am, Fri, 6 December 24

ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?