ಈ ವಾರ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಟ್ವಿಸ್ಟ್ಗಳು ಇದ್ದವು. ಮಿಡ್ ಮೀಕ್ ಎಲಿಮಿನೇಷನ್ ಇರಲಿದೆ ಎಂದು ಮೊದಲು ಘೋಷಿಸಲಾಗಿತ್ತು. ಅದಕ್ಕಾಗಿ ಹಲವು ಟಾಸ್ಕ್ಗಳನ್ನು ನೀಡಲಾಗಿತ್ತು. ಎಲಿಮಿನೇಷನ್ನಿಂದ ಪಾರಾಗಲು ಎಲ್ಲರೂ ಕಷ್ಟಪಟ್ಟು ಟಾಸ್ಕ್ ಆಡಿದರು. ಆದರೆ ಧನರಾಜ್ ಮಾಡಿದ ಒಂದು ತಪ್ಪಿನಿಂದ ಎಲ್ಲವೂ ಹಾಳಾಯಿತು. ಹೊಸದಾಗಿ ನಾಮಿನೇಟ್ ಮಾಡಬೇಕು ಎಂದು ಬಿಗ್ ಬಾಸ್ ಆದೇಶಿಸಿದ್ದರು. ಎರಡನೇ ಬಾರಿ ನಾಮಿನೇಟ್ ಮಾಡಿದಾಗ ಉಗ್ರಂ ಮಂಜು, ಭವ್ಯಾ ಗೌಡ, ಗೌತಮಿ ಜಾದವ್, ರಜತ್, ಧನರಾಜ್ ಆಚಾರ್ ಹಾಗೂ ಮೋಕ್ಷಿತಾ ಪೈ ಹೆಸರುಗಳನ್ನು ತೆಗೆದುಕೊಳ್ಳಲಾಯಿತು.
ನಾಮಿನೇಷನ್ ಪ್ರಕ್ರಿಯೆಯಲ್ಲಿ ಸಿಕ್ಕಾಪಟ್ಟೆ ಜಗಳ ನಡೆಯಿತು. ಹೆಚ್ಚಿನ ಜನರು ಯಾರೂ ನಾಮಿನೇಟ್ ಮಾಡಿಲ್ಲ ಎಂಬ ಕಾರಣದಿಂದ ತ್ರಿವಿಕ್ರಮ್ ಅವರು ಸೇಫ್ ಆದರು. ಹಾಗಾಗಿ ಅವರು ಫಿನಾಲೆ ವಾರಕ್ಕೆ ಎಂಟ್ರಿ ಪಡೆದರು. ಇದರ ಹೊರತಾಗಿ ಕ್ಯಾಪ್ಟನ್ ಹನುಮಂತನಿಗೆ ಒಂದು ವಿಶೇಷ ಅಧಿಕಾರ ನೀಡಲಾಯಿತು. ನಾಮಿನೇಟ್ ಆದ ಒಬ್ಬರನ್ನು ಸೇಫ್ ಮಾಡಲು ಅವರಿಗೆ ಅವಕಾಶ ನೀಡಲಾಯಿತು.
ಹನುಮಂತ ಅವರು ಗೆಳಯ ಧನರಾಜ್ ಹೆಸರು ಹೇಳಬಹುದು ಎಂದು ಅನೇಕರು ಊಹಿಸಿರಬಹುದು. ಆದರೆ ಆಗಿದ್ದೇ ಬೇರೆ. ಹನುಮಂತ ಅವರು ಮೋಕ್ಷಿತಾ ಪರವಾಗಿ ಬ್ಯಾಟ್ ಬೀಸಿದರು. ‘ಮೋಕ್ಷಿತಾ ಚೆನ್ನಾಗಿ ಆಡುತ್ತಿದ್ದಾರೆ. ಹಾಡು ಹೇಳಿ ಮನರಂಜನೆ ನೀಡುತ್ತಾರೆ. ಒಳ್ಳೆಯ ಮನಸ್ಸಿನ ವ್ಯಕ್ತಿ. ಕಲ್ಮಶ ಇಲ್ಲ. ತಪ್ಪನ್ನು ಒಪ್ಪಿಕೊಳ್ಳುತ್ತಾರೆ’ ಎಂಬ ಕಾರಣವನ್ನು ನೀಡಿ ಮೋಕ್ಷಿತಾನ ನಾಮಿನೇಷನ್ನಿಂದ ಹನುಮಂತ ಬಚಾವ್ ಮಾಡಿದರು.
ಇದನ್ನೂ ಓದಿ: ಬಿಗ್ ಬಾಸ್ ಟ್ರೋಫಿ ಗೆದ್ದರೆ ಅತ್ತೆ ಮನೆ ಮುಂದೆ ಹೋಗಿ ಹುಡುಗಿ ಕೇಳ್ತೀನಿ: ಹನುಮಂತ
ಒಟ್ಟಾರೆಯಾಗಿ ಮೋಕ್ಷಿತಾ ಅವರಿಗೆ ಈ ಚಾನ್ಸ್ ಸಿಕ್ಕಿದ್ದು ಹನುಮಂತನ ಕೃಪೆಯಿಂದಲೇ ಎಂಬುದು ನಿಜ. ಹನುಮಂತ ತೆಗೆದುಕೊಂಡ ಈ ನಿರ್ಧಾರವನ್ನು ಬಹುತೇಕ ಎಲ್ಲರೂ ಒಪ್ಪಿಕೊಂಡರು. ಮೋಕ್ಷಿತಾ ಅವರಿಗೆ ತುಂಬ ಖುಷಿ ಆಯಿತು. ಈ ವಾರ ಧನರಾಜ್ ಆಚಾರ್, ಉಗ್ರಂ ಮಂಜು, ಭವ್ಯಾ ಗೌಡ, ಗೌತಮಿ ಜಾದವ್ ಹಾಗೂ ರಜತ್ ಅವರು ನಾಮಿನೇಟ್ ಆಗಿದ್ದಾರೆ. ಅವರ ಪೈಕಿ ಯಾರು ಔಟ್ ಆಗುತ್ತಾರೆ ಎಂಬುದು ವೀಕೆಂಡ್ನಲ್ಲಿ ತಿಳಿಯಲಿದೆ. ಶುಕ್ರವಾರದ ಸಂಚಿಕೆಯಲ್ಲಿ ಹಳೇ ಸ್ಪರ್ಧಿಗಳು ಕೂಡ ಅತಿಥಿಗಳಾಗಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.