AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಿನಾಲೆ ಸಮೀಪದಲ್ಲಿ ತ್ರಿವಿಕ್ರಮ್ ಹೆಸರನ್ನು ನಾಮಿನೇಟ್ ಮಾಡಿದ ಭವ್ಯಾ ಗೌಡ

ಒಂದಷ್ಟು ದಿನಗಳ ಹಿಂದೆ ಭವ್ಯಾ ಗೌಡ ಮತ್ತು ತ್ರಿವಿಕ್ರಮ್ ಅವರು ಎಷ್ಟು ಕ್ಲೋಸ್ ಆಗಿದ್ದರು ಎಂಬುದು ಎಲ್ಲರಿಗೂ ಗೊತ್ತು. ಆದರೆ ಫಿನಾಲೆ ಹತ್ತಿರ ಬಂದಾಗ ಸ್ನೇಹ ಹಳ್ಳ ಹಿಡಿದಿದೆ. ಕೊನೇ ವಾರದ ನಾಮಿನೇಷನ್ ಪ್ರಕ್ರಿಯೆ ವೇಳೆ ಭವ್ಯಾ ಗೌಡ ಅವರು ತ್ರಿವಿಕ್ರಮ್ ಹೆಸರನ್ನು ತೆಗೆದುಕೊಂಡಿದ್ದಾರೆ. ಇದರಿಂದ ಇಬ್ಬರ ನಡುವೆ ಮನಸ್ತಾಪ ಆಗಿದೆ.

ಫಿನಾಲೆ ಸಮೀಪದಲ್ಲಿ ತ್ರಿವಿಕ್ರಮ್ ಹೆಸರನ್ನು ನಾಮಿನೇಟ್ ಮಾಡಿದ ಭವ್ಯಾ ಗೌಡ
Trivikram, Bhavya Gowda
ಮದನ್​ ಕುಮಾರ್​
|

Updated on: Jan 17, 2025 | 10:00 PM

Share

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ಕೆಲವೇ ದಿನಗಳು ಉಳಿದುಕೊಂಡಿವೆ. ಶೀಘ್ರದಲ್ಲೇ ಫಿನಾಲೆ ಬರಲಿದೆ. ಈ ವಾರ ಎರಡನೇ ಬಾರಿಗೆ ನಾಮಿನೇಷನ್ ಪ್ರಕ್ರಿಯೆ ಮಾಡಲಾಗಿದೆ. ಈ ವೇಳೆ ಎಲ್ಲರ ಮುಖವಾಡಗಳು ಕಳಚಿವೆ. ಆಪ್ತರು ಎಂಬುದನ್ನೂ ನೋಡದೇ ಒಬ್ಬರನ್ನೊಬ್ಬರು ನಾಮಿನೇಟ್ ಮಾಡಿಕೊಂಡಿದ್ದಾರೆ. ಭವ್ಯಾ ಗೌಡ ಅವರು ತ್ರಿವಿಕ್ರಮ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಅಂದರೆ, ಈ ವಾರ ತ್ರಿವಿಕ್ರಮ್ ಹೊರಗೆ ಹೋಗಬೇಕು ಎಂಬುದು ಭವ್ಯಾ ಅವರ ಆಶಯ.

ಸಾಮಾನ್ಯವಾಗಿ ತಮ್ಮ ಆಪ್ತರು ಎಲಿಮಿನೇಟ್ ಆಗಬಾರದು ಎಂದು ಸ್ಪರ್ಧಿಗಳು ಬಯಸುತ್ತಾರೆ. ಅಂಥದ್ದೆಲ್ಲ ನಡೆಯುವುದು ಆರಂಭದ ದಿನಗಳಲ್ಲಿ ಮಾತ್ರ. ಫಿನಾಲೆ ಸಮೀಪ ಆಗುತ್ತಿದ್ದಂತೆಯೇ ಸ್ವಾರ್ಥ ಜಾಸ್ತಿ ಕೆಲಸ ಮಾಡುತ್ತದೆ. ತಮ್ಮ ಉಳಿವಿಗಾಗಿ ಬೇರೆ ಎಲ್ಲರನ್ನೂ ಮನೆಗೆ ಕಳಿಸಲು ಸ್ಪರ್ಧಿಗಳು ರೆಡಿಯಾಗುತ್ತಾರೆ. ಭವ್ಯಾ ಗೌಡ ಅವರು ಕೂಡ ಅದೇ ಕೆಲಸ ಮಾಡಿದ್ದಾರೆ.

ಮೊದಲೆಲ್ಲ ಭವ್ಯಾ ಗೌಡ ಅವರು ತ್ರಿವಿಕ್ರಮ್​ನ ಸಹಾಯ ಪಡೆದುಕೊಂಡಿದ್ದಾರೆ. ಭವ್ಯಾ ಕುಗ್ಗಿದಾಗೆಲ್ಲ ತ್ರಿವಿಕ್ರಮ್ ಧೈರ್ಯ ತುಂಬಿದ್ದರು. ಆ ಬೆಂಬಲದಿಂದಾಗಿ ಭವ್ಯಾಗೆ ಜೋಶ್ ಬಂದಿತ್ತು. ಈ ಮೊದಲು ತ್ರಿವಿಕ್ರಮ್ ಅವರನ್ನು ಹುಸಿ ಎಲಿಮಿನೇಷನ್ ಮಾಡಿದಾಗ ಭವ್ಯಾ ಬಿಕ್ಕಿ ಬಿಕ್ಕಿ ಅತ್ತಿದ್ದರು. ಆದರೆ ಈಗ ತ್ರಿವಿಕ್ರಮ್ ಅವರೇ ಮನೆಯಿಂದ ಹೊರಗೆ ಹೋಗಬೇಕು ಎಂದು ಭವ್ಯಾ ಬಯಸುತ್ತಿದ್ದಾರೆ.

ಇದನ್ನೂ ಓದಿ: ‘ಬಂಡವಾಳ ಗೊತ್ತಾಯ್ತು, ಪುಂಗಬೇಡ’; ಭವ್ಯಾ ಬಗ್ಗೆ ತ್ರಿವಿಕ್ರಂ ಖಾರದ ಮಾತು

ತ್ರಿವಿಕ್ರಮ್ ಜೊತೆ ಉಗ್ರಂ ಮಂಜು ಮತ್ತು ಗೌತಮಿ ಜಾದವ್ ಹೆಸರನ್ನು ಕೂಡ ಭವ್ಯಾ ಅವರು ನಾಮಿನೇಟ್ ಮಾಡಿದ್ದಾರೆ. ‘ಮಂಜುಗೆ ನೀವು ಮುಖ್ಯ ಶಿಕ್ಷಕಿಯಾಗಿ ಇಲ್ಲಿಗೆ ಬಂದಿದ್ದೀರಿ. ಮಂಜುನ ತಿದ್ದೋದರಲ್ಲಿ ನಿಮ್ಮ ಟೈಮ್ ವ್ಯರ್ಥ ಮಾಡಿದ್ದೀರಿ. ಅವರನ್ನು ಡಾಮಿನೇಟ್ ಮಾಡಿದ್ದೀರಿ’ ಎಂದು ಗೌತಮಿಗೆ ಭವ್ಯಾ ಹೇಳಿದ್ದಾರೆ. ಅದೇ ರೀತಿ ಮಂಜು ಅವರು ಗೌತಮಿಗೆ ಬಿಟ್ಟು ಬೇರೆ ಯಾರಿಗೂ ಸರಿಯಾದ ಮಾನ್ಯತೆ ನೀಡಿಲ್ಲ ಎಂದು ಭವ್ಯಾ ಗೌಡ ಅವರು ಕಾರಣ ನೀಡಿ ಮಂಜು ಅವರನ್ನು ನಾಮಿನೇಟ್ ಮಾಡಿದ್ದಾರೆ. ಒಟ್ಟಾರೆ ನಾಮಿನೇಷನ್ ಪ್ರಕ್ರಿಯೆ ವೇಳೆ ಎಲ್ಲರ ನಡುವೆ ಜಗಳ ಆಗಿದೆ. ಫಿನಾಲೆಗೆ ತಲುಪಿರುವ ಹನುಮಂತ ಮಾತ್ರ ಮೌನವಾಗಿ ಕುಳಿತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.