AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಉಪ್ಪಿನ ಕಾಯಿಯೇ ಊಟ’; ಬಿಗ್ ಬಾಸ್ ಡ್ರಾಮಾ, ಪ್ರ್ಯಾಂಕ್ ನೋಡಿ ವೀಕ್ಷಕರಿಗೆ ಅಸಮಾಧಾನ

ಈ ಬಾರಿಯ ಬಿಗ್ ಬಾಸ್ ಕನ್ನಡದಲ್ಲಿ ಅತಿಯಾದ ಡ್ರಾಮಾ ಮತ್ತು ಪ್ರಾಂಕ್‌ಗಳು ವೀಕ್ಷಕರನ್ನು ನಿರಾಶೆಗೊಳಿಸಿವೆ. ಈಗ ಮತ್ತೊಮ್ಮೆ ಬಿಗ್ ಬಾಸ್ ಎಲಿಮಿನೇಷನ್ ರದ್ದು ಮಾಡಿದ್ದು, ಇದನ್ನು ಟಿಆರ್‌ಪಿಗಾಗಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಊಟವೆಲ್ಲ ಕೇವಲ ಉಪ್ಪಿನ ಕಾಯಿಯಲ್ಲೇ ಆಗಿದೆ ಎಂಬ ಮಾತು ಕೇಳಿ ಬಂದಿದೆ.

‘ಉಪ್ಪಿನ ಕಾಯಿಯೇ ಊಟ’; ಬಿಗ್ ಬಾಸ್ ಡ್ರಾಮಾ, ಪ್ರ್ಯಾಂಕ್ ನೋಡಿ ವೀಕ್ಷಕರಿಗೆ ಅಸಮಾಧಾನ
ಬಿಗ್ ಬಾಸ್
TV9 Web
| Edited By: |

Updated on: Jan 17, 2025 | 7:01 AM

Share

ಊಟಕ್ಕೆ ಉಪ್ಪಿನಕಾಯಿ ಇದ್ದರೆ ಅಂತಹ ಊಟ ಇಷ್ಟ ಆಗುತ್ತದೆ. ಆದರೆ, ಊಟವೆಲ್ಲ ಕೇವಲ ಉಪ್ಪಿನ ಕಾಯಿಯೇ ಆಗಿ ಬಿಟ್ಟರೆ? ಆಗ ಊಟ ಯಾರಿಗೂ ಇಷ್ಟ ಆಗುವುದಿಲ್ಲ. ಈ ಬಾರಿಯ ಬಿಗ್ ಬಾಸ್ ಕೂಡ ಹಾಗೆಯೇ ಆಗಿದೆ. ಬಿಗ್ ಬಾಸ್​ನಲ್ಲಿ ಡ್ರಾಮಾ, ಪ್ರ್ಯಾಂಕ್​ಗಳ ಅಬ್ಬರವೇ ಹೆಚ್ಚಾಗಿದೆ. ಇದು ಅನೇಕರಿಗೆ ಇಷ್ಟ ಆಗಿಲ್ಲ. ಈ ಬಗ್ಗೆ ಬಿಗ್ ಬಾಸ್​ನ ಎಲ್ಲರೂ ಶಪಿಸುತ್ತಿದ್ದಾರೆ. ಟ್ವಿಸ್ಟ್ ಕೊಡುವ ನೆಪದಲ್ಲಿ ವೀಕ್ಷಕರನ್ನು ಫ್ರಸ್ಟ್ರೇಷನ್ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.

ಬಿಗ್ ಬಾಸ್ ಎಂದರೆ ಒಂದಷ್ಟು ಡ್ರಾಮಾಗಳು ಕಾಮನ್. ಇದು ಪ್ರತಿ ವರ್ಷವೂ ನಡೆದುಕೊಂಡು ಬಂದಿದೆ. ಅಲ್ಲಲ್ಲಿ ಪ್ರ್ಯಾಂಕ್​ಗಳು, ಡ್ರಾಮಾಗಳು ಇದ್ದೇ ಇರುತ್ತವೆ. ಆದರೆ, ಸೀಸನ್ ಉದ್ದಕ್ಕೂ ಈ ಬಾರಿ ಡ್ರಾಮಾ ನಡೆದಿದ್ದೇ ಹೆಚ್ಚು. ಈ ಬಗ್ಗೆ ಅನೇಕರಿಗೆ ಅಸಮಾಧಾನ ಇದೆ. ಟಿಆರ್​ಪಿಗಾಗಿ ಈ ಮಟ್ಟಕ್ಕೆ ಹೋಗಬಾರದಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಒಬ್ಬರಿಗೆ ಒಂದೊಂದು ನ್ಯಾಯ

ರಂಜಿತ್ ಅವರು ಹೊಡೆದುಕೊಂಡು ಬಿಗ್ ಬಾಸ್​ನಿಂದ ಹೊರ ಹೋದರು. ಜಗದೀಶ್ ಅವಾಚ್ಯ ಶಬ್ದ ಬಳಸಿ ಮನೆಯಿಂದ ಹೊರ ದೂಡಲ್ಪಟ್ಟರು. ಹಾಗೆ ಹೊಡೆದವರನ್ನೆಲ್ಲ ಹೊರಕ್ಕೆ ಕಳುಹಿಸುವುದಾದರೆ ಭವ್ಯಾ ಅವರನ್ನೂ ಕಳುಹಿಸಬೇಕಿತ್ತು. ಆದರೆ, ಹಾಗೆ ಮಾಡಿಲ್ಲ. ಮೋಸ ಮಾಡಿ ಗೆಲ್ಲುವ ವಿಚಾರವಾಗಿ ಹೇಳೋದಾದರೆ ಭವ್ಯಾ ಕೂಡ ಮೋಸ ಮಾಡಿ ಕ್ಯಾಪ್ಟನ್ ಆದರು. ಆಗ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದು ಬಿಟ್ಟರೆ ಇನ್ನೇನು ಆಗಿಲ್ಲ. ಅವರ ಕ್ಯಾಪ್ಟನ್ಸಿ ಮುಂದುವರಿದಿದೆ. ಕಳೆದ ಸೀಸನ್​ನಲ್ಲಿ ವರ್ತೂರು ಸಂತೋಷ್ ಇದೇ ರೀತಿ ಮಾಡಿದಾಗ ಕ್ಯಾಪ್ಟನ್ ರೂಂನ ಬಾಗಿಲನ್ನು ಹಾಕಿಸಲಾಗಿತ್ತು.

ಇದನ್ನೂ ಓದಿ: ತಮಗಿಂತ ಕೆಳಗಿದ್ದಾರೆ ಎಂದು ನಕ್ಕಿದ್ದ ತ್ರಿವಿಕ್ರಂ-ರಜತ್​ಗೆ ಸುತ್ತಿ ಬಂತು ಕರ್ಮ

ತ್ರಿವಿಕ್ರಂ ಅವರು ನಿಯಮ ಪಾಲಿಸಿಲ್ಲ ಎಂಬ ಕಾರಣಕ್ಕೆ ರೀ ಮ್ಯಾಚ್ ಆಡಿಸಲಾಯಿತು. ಅದು ಕೂಡ ತಕ್ಷಣವೇ. ಆದರೆ, ಧನರಾಜ್ ವಿಚಾರದಲ್ಲಿ ಆಟ ನಡೆಯುವಾಗ ಸುಮ್ಮನಿದ್ದ ಬಿಗ್ ಬಾಸ್ ಈಗ ಎಲಿಮಿನೇಷ್ ಪ್ರಕ್ರಿಯೆ ಬಂದಾಗ ಅದನ್ನು ಎತ್ತಿದರು. ಈ ಕಾರಣ ನೀಡಿ ಸಂಪೂರ್ಣ ಎಲಿಮಿನೇಷನ್ ಪ್ರಕ್ರಿಯೆ ನಿಲ್ಲಿಸಲಾಯಿತು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಎಲಿಮಿನೇಷನ್ ಪ್ರ್ಯಾಂಕ್

ಈ ಬಾರಿ ನಡೆದಷ್ಟು ಎಲಿಮಿನೇಷನ್ ಪ್ರ್ಯಾಂಕ್ ಇನ್ಯಾವ ಸೀಸನ್​ಗಳಲ್ಲೂ ನಡೆದಿಲ್ಲ. ಈ ಮೊದಲ ಸೀನಸ್​ಗಳಲ್ಲಿ ಎಲ್ಲಾದರೂ ಒಮ್ಮೆ ಪ್ರ್ಯಾಂಕ್ ನಡೆಯುತ್ತಿತ್ತು. ಅದನ್ನು ಹೊರತುಪಡಿಸಿ ಪ್ರತಿ ವಾರವೂ ಸರಿಯಾಗಿ  ಎಲಿಮಿನೇಷನ್​ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಸರಿಯಾಗಿ ಎಲಿಮಿನೇಷನ್ ನಡೆದೇ ಇಲ್ಲ. ತ್ರಿವಿಕ್ರಂ, ಚೈತ್ರಾ ಭವ್ಯಾಗೆ ಎಲಿಮಿನೇಷ್ ಪ್ರ್ಯಾಂಕ್ ಮಾಡಲಾಯಿತು. ಈಗ ಮಧ್ಯವಾರದ ಎಲಿಮಿನೇಷ್ ನಡೆಸುತ್ತೇನೆ ಎಂದಿದ್ದ ಬಿಗ್ ಬಾಸ್ ಅದನ್ನು ಅರ್ಧಕ್ಕೆ ಬಿಟ್ಟಿದ್ದಾರೆ. ಮತ್ತೆ ನಾಮಿನೇಷನ್ ಪ್ರಕ್ರಿಯೆ ಆರಂಭಿಸಿದ್ದಾರೆ. ಎಲ್ಲರನ್ನೂ ನಾಮಿನೇಟ್ ಮಾಡಿ, ವೋಟಿಂಗ್ ಮಾಡಿ ಮುಗಿದಮೇಲೆ ಮತ್ತೇಕೆ ನಾಮಿನೇಷನ್ ಪ್ರಕ್ರಿಯೆ ಎಂಬ ಪ್ರಶ್ನೆಯೂ ಮೂಡುತ್ತದೆ. ಇಷ್ಟೊಂದು ಡ್ರಾಮಾಗಳನ್ನು ನೋಡಿ ವೀಕ್ಷಕರು ಅಸಮಾಧಾನಗೊಂಡಿದ್ದಾರೆ.

ಟಿಆರ್​ಪಿಗಾಗಿ ಅಲ್ಲ!

ಇಷ್ಟೆಲ್ಲ ಮಾಡೋದು ಟಿಆರ್​ಪಿಗೆ ಅಲ್ಲ ಎಂದು ಮುಂದೆ ಸ್ಪಷ್ಟನೆ ಕೊಟ್ಟರೂ ಅಚ್ಚರಿ ಏನಿಲ್ಲ. ಈ ಮೊದಲು ಸುದೀಪ್ ಅವರು, ‘ನಾವು ಏನೇ ಮಾಡಿದರೂ ಅದು ಟಿಆರ್​ಪಿಗೆ ಅಲ್ಲ’ ಎಂದು ಹೇಳಿದ್ದಾರೆ. ಆದರೆ, ಈ ರೀತಿಯ ಡ್ರಾಮಾಗಳನ್ನು ನೋಡಿದರೆ ಅದು ಕೇವಲ ಟಿಆರ್​ಪಿ ಉದ್ದೇಶ ಎಂಬುದು ಸ್ಪಷ್ಟವಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.