‘ಬಿಗ್ ಬಾಸ್’ ಮನೆಯಲ್ಲಿ ಯಾರು ಯಾವ ರೀತಿಯಲ್ಲಿ ಆಟ ಆಡುತ್ತಾರೆ ಎಂದು ಊಹಿಸೋದು ಕಷ್ಟ. ಟಫ್ ಸ್ಪರ್ಧಿ ಎನಿಸಿಕೊಂಡವರು ಆಟ ಆಡುವಾಗ ವೀಕ್ ಎನಿಸಿಕೊಳ್ಳಬಹುದು. ವೀಕ್ ಸ್ಪರ್ಧಿಗಳು ಟಫ್ ಕಾಂಪಿಟೇಟರ್ ಆಗಬಹುದು. ಈಗ ಬಿಗ್ ಬಾಸ್ನಲ್ಲಿ ಅಂಥದ್ದೇ ಒಂದು ಘಟನೆ ನಡೆದಿದೆ. ಮೋಕ್ಷಿತಾ ಅವರಿಗೆ ಹೋಲಿಸಿದರೆ ಮಂಜು ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಳ್ಳುತ್ತಾರೆ. ಆದರೆ, ಮೋಕ್ಷಿತಾ ಅವರೇ ಮಂಜುನ ಸೋಲಿಸಿದ್ದಾರೆ. ಈ ಸೋಲನ್ನು ಅರಗಿಸಿಕೊಳ್ಳಲಾಗದೆ ಗೌತಮಿ ಅತ್ತಿದ್ದಾರೆ. ಅವರಿಗೆ ಫಿನಾಲೆ ಟಿಕೆಟ್ ಸಿಗದ ಕಾರಣ ಬೇಸರ ಆಗಿದೆ.
ಈ ವಾರ ಒಂದು ಟಾಸ್ಕ್ ನೀಡಲಾಗಿತ್ತು. ಟಬ್ ಮಾದರಿಯ ಆಕೃತಿಯನ್ನು ಗಾರ್ಡನ್ ಏರಿಯಾದಲ್ಲಿ ಇಡಲಾಗಿತ್ತು. ಮೇಲೆ ಅದನ್ನು ಕಂಬಿಗಳಿಂದ ಮುಚ್ಚಲಾಗಿತ್ತು. ಇದರ ಒಳಗೆ ಸ್ಪರ್ಧಿಗಳು ಇಳಿಯಬೇಕು. ಇದರಲ್ಲಿ ನಿರಂತರವಾಗಿ ನೀರು ಬರುತ್ತಾ ಇರುತ್ತದೆ. ತಂಡದ ಮತ್ತೋರ್ವ ಸ್ಪರ್ಧಿ ನೀರನ್ನು ಎತ್ತಿ ಹಾಕಬೇಕು. ಮಂಜು ಅವರು ಟಬ್ನಲ್ಲಿ ಮಲಗಿದರೆ, ಗೌತಮಿ ನೀರನ್ನು ಎತ್ತಿ ಹಾಕಿದರು. ಅತ್ತ ಭವ್ಯಾ ಅವರು ನೀರನ್ನು ತೆಗೆಯುವ ಕಾಯಕದಲ್ಲಿ ತೊಡಗಿದರೆ ಮೋಕ್ಷಿತಾ ಟಬ್ನಲ್ಲಿ ಮಲಗಿದರು.
ನೀರು ತುಂಬುತ್ತಾ ಬಂದಂತೆ ಮಂಜು ಅವರಿಗೆ ಉಸಿರುಗಟ್ಟಲು ಆರಂಭ ಆಯಿತು. ಅವರು ಟಾಸ್ಕ್ನ ಬಿಟ್ಟೇ ಬಿಟ್ಟರು. ಮೋಕ್ಷಿತಾ ಅವರು ಟಾಸ್ಕ್ನ ಗೆದ್ದರು. ಇದನ್ನು ಭವ್ಯಾ ಸಂಭ್ರಮಿಸಿದರು. ಮೋಕ್ಷಿತಾ ಕೂಡ ಮಹತ್ವದ ಘಟ್ಟದಲ್ಲಿ ಮಂಜು ಎದುರು ಗೆದ್ದೆನಲ್ಲ ಎನ್ನುವ ಖುಷಿಯಲ್ಲಿ ಕುಣಿದರು. ಅವರಿಗೆ ಆನಂದ ಭಾಷ್ಪವೇ ಬಂತು.
ಇದನ್ನೂ ಓದಿ: ‘ಆಗಿದ್ದು ಆಗಿ ಹೋಯ್ತು, ಅದನ್ನು ಬಿಟ್ಟುಬಿಡು’; ಹಳೆಯ ಘಟನೆಯ ಬಗ್ಗೆ ಮೋಕ್ಷಿತಾಗೆ ಧೈರ್ಯ ತುಂಬಿದ ತಾಯಿ
ಈ ಮೊದಲು ಗೌತಮಿ ಅವರು ಮಂಜು ಬಳಿ ‘ನಾನು ಮಲಗುತ್ತೇನೆ. ನೀವು ನೀರನ್ನು ಎತ್ತು ಹಾಕಿ. ನೀರನ್ನು ತೆಗೆಯೋದು ಈ ಟಾಸ್ಕ್ನಲ್ಲಿ ಮುಖ್ಯವಾಗುತ್ತದೆ’ ಎಂದಿದ್ದರು. ಆದರೆ, ಇದಕ್ಕೆ ಮಂಜು ಒಪ್ಪಲೇ ಇಲ್ಲ. ಇದು ಕೂಡ ಟಾಸ್ಕ್ ಸೋಲಲು ಕಾರಣ ಆಯಿತು ಎಂಬುದು ಗೌತಮಿ ಅಭಿಪ್ರಾಯ. ಈ ಕಾರಣಕ್ಕೆ ಅವರು ಕಣ್ಣೀರು ಹಾಕಿದ್ದಾರೆ. ಟಾಸ್ಕ್ ಸೋತ ಮಂಜು ಅವರು ಗೌತಮಿಯನ್ನು ಸಮಾಧಾನ ಮಾಡುವ ಪ್ರಯತ್ನದಲ್ಲೇ ಕಳೆದು ಹೋದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.