
‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ (Serial) ದೊಡ್ಡ ತಿರುವು ಒಂದು ಎದುರಾಗಿದೆ. ಈ ಧಾರಾವಾಹಿಯಲ್ಲಿ ಇಷ್ಟು ದಿನ ದುರ್ಗಾ ಕಣ್ಣಿಗೆ ಅಂಬಿಕಾ ಕಾಣುತ್ತಲೇ ಇರಲಿಲ್ಲ. ಇದಕ್ಕೆ ಅಂಬಿಕಾ ಮಾಡಿದ ತಪ್ಪೇ ಕಾರಣ ಆಗಿತ್ತು. ಆದರೆ, ಈಗ ದೊಡ್ಡ ಬದಲಾವಣೆಯಲ್ಲಿ ದುರ್ಗಾ ಕಣ್ಣಿಗೆ ಅಂಬಿಕಾ ಕಾಣಿಸಿದ್ದಾಳೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಟ್ವಿಸ್ಟ್ಗಳನ್ನು ನಾವು ನಿರೀಕ್ಷಿಬಹುದಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.
‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಶರತ್ ಹಾಗೂ ಮಾಯಾ ಮದುವೆ ನಡೆಯುವುದರಲ್ಲಿತ್ತು. ಆ ಸಂದರ್ಭದಲ್ಲಿ ದುರ್ಗಾಳ ದೇಹ ಸೇರಿದ್ದ ಅಂಬಿಕಾ ಆತ್ಮ ಮದುವೆಯಲ್ಲಿ ಭಾಗಿ ಆಗಿತ್ತು. ಈ ಮದುವೆ ನಡೆದಿದ್ದು ಹೇಗೆ ಎಂಬುದು ಯಾರಿಗೂ ಗೊತ್ತಾಗಲಿಲ್ಲ. ದುರ್ಗಾಳ ಒಪ್ಪಿಗೆ ಇಲ್ಲದೆ ಅವಳ ದೇಹ ಸೇರಿದ್ದರಿಂದ ಅಂಬಿಕಾ ಆತ್ಮವು ದುರ್ಗಾ ಕಣ್ಣಿಗೆ ಕಾಣುತ್ತಿರಲಿಲ್ಲ. ಆದರೆ, ಈಗ ದೊಡ್ಡ ಟ್ವಿಸ್ಟ್ ಎದುರಾಗಿದೆ.
ದುರ್ಗಾ ಹಾಗೂ ಶರತ್ ಇಬ್ಬರೂ ಒಪ್ಪಿ ಮತ್ತೊಮ್ಮೆ ಮದುವೆ ಆಗಿದ್ದಾರೆ. ಈ ಮದುವೆ ಬಳಿಕ ದುರ್ಗಾ ಕಣ್ಣಿಗೆ ಅಂಬಿಕಾ ಆತ್ಮ ಕಾಣಿಸಿದಂತೆ ತೋರಿಸಲಾಗಿದೆ. ಅಂಬಿಕಾ ಕಾಣುತ್ತಿದ್ದಂತೆ ದುರ್ಗಾ ಕಣ್ಣಲ್ಲಿ ಸಂತೋಷದ ಕಣ್ಣೀರು ಹರಿದಿದೆ. ಶರತ್ ಹಾಗೂ ದುರ್ಗಾ ವಿವಾಹ ನಡೆದಿದ್ದರಿಂದ ಈ ರೀತಿ ಆತ್ಮ ಕಾಣಿಸಿರಬಹುದು ಎಂಬುದು ಅನೇಕರ ಊಹೆ.
ಇದನ್ನೂ ಓದಿ:‘ಸಂಬರಾಲ ಏಟಿಗಟ್ಟು’ ಗ್ಲಿಂಪ್ಸ್ ಮೂಲಕ ಕನ್ನಡದಲ್ಲೂ ಅಬ್ಬರಿಸಿದ ಸಾಯಿ ದುರ್ಗಾ ತೇಜ್
ದುರ್ಗಾ ಹಾಗೂ ಅಂಬಿಕಾ ಅಕ್ಕ-ತಂಗಿ. ಈ ವಿಚಾರ ಅನೇಕರಿಗೆ ಗೊತ್ತಿಲ್ಲ. ದುರ್ಗಾಗೇ ಈ ವಿಚಾರ ಗೊತ್ತಿಲ್ಲ. ರಕ್ತ ಸಂಬಂಧದ ಕಾರಣಕ್ಕೆ ಅಂಬಿಕಾ ಆತ್ಮ ದುರ್ಗಾ ಹಾಗೂ ಆಕೆಯ ತಂದೆಗೆ ಮಾತ್ರ ಕಾಣಿಸುತ್ತದೆ. ಅಂಬಿಕಾ ಕಾಣಿಸುತ್ತಾಳೆ ಎಂದು ಹೇಳಿದರೂ ಯಾರೊಬ್ಬರೂ ಅವರ ಮಾತನ್ನು ನಂಬಿಲ್ಲ. ಈಗ ಮತ್ತೆ ಅಂಬಿಕಾ ಆತ್ಮ ದುರ್ಗಾಗೆ ಕಾಣಿಸಲು ಪ್ರಾರಂಭಿಸಿದರೆ ಹಿತಾಳ ಮನಸ್ಸು ಗೆಲ್ಲಲು ಇದು ಸಹಕಾರಿ ಆಗಬಹುದು.
ಈ ಮೊದಲು ಹಿತಾಳು ಪದೇ ಪದೇ ಬಂದು ದುರ್ಗಾಳ ಬಳಿ, ‘ಅಮ್ಮ ಏನು ಹೇಳುತ್ತಾಳೆ’ ಎಂದು ಕೇಳಿದ್ದಳು. ಆಗ ದುರ್ಗಾ ಸುಳ್ಳು ಉತ್ತರಗಳನ್ನು ನೀಡಿದ್ದಳು. ಈಗ ಅಂಬಿಕಾ ಕಾಣಿಸೋಕೆ ಆರಂಭಿಸಿದರೆ ಹಿತಾ ಹಾಗೂ ದುರ್ಗಾ ಮತ್ತಷ್ಟು ಹತ್ತಿರ ಆಗಬಹುದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:53 pm, Tue, 11 November 25