ಅಭಿಮಾನಿಗಳಿಗೆ ಗುಡ್​​ನ್ಯೂಸ್​ ಕೊಟ್ಟ ‘ನಮ್ಮನೆ ಯುವರಾಣಿ’ ಅಂಕಿತಾ; ಇದು ಫ್ಯಾನ್ಸ್​ಗೆ ಖುಷಿಯಾಗೋ ವಿಚಾರ

| Updated By: ರಾಜೇಶ್ ದುಗ್ಗುಮನೆ

Updated on: Aug 11, 2021 | 2:21 PM

ಎಸ್​.ಪಿ. ಬಾಲಸುಬ್ರಮಣ್ಯಂ​ ಅವರು ಜಡ್ಜ್​​ ಆಗಿ ನಡೆಸಿಕೊಡುತ್ತಿದ್ದ  ‘ಎದೆ ತುಂಬಿ ಹಾಡುವೆನು’ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಸಾಕಷ್ಟು ಟ್ಯಾಂಲೆಂಟ್​ಗಳಿಗೆ ಇದು ವೇದಿಕೆ ಆಗಿತ್ತು.

ಅಭಿಮಾನಿಗಳಿಗೆ ಗುಡ್​​ನ್ಯೂಸ್​ ಕೊಟ್ಟ ‘ನಮ್ಮನೆ ಯುವರಾಣಿ’ ಅಂಕಿತಾ; ಇದು ಫ್ಯಾನ್ಸ್​ಗೆ ಖುಷಿಯಾಗೋ ವಿಚಾರ
ಅಭಿಮಾನಿಗಳಿಗೆ ಗುಡ್​​ನ್ಯೂಸ್​ ಕೊಟ್ಟ ‘ನಮ್ಮನೆ ಯುವರಾಣಿ’ ಅಂಕಿತಾ; ಇದು ಫ್ಯಾನ್ಸ್​ಗೆ ಖುಷಿಯಾಗೋ ವಿಚಾರ
Follow us on

‘ನಮ್ಮನೆ ಯುವರಾಣಿ’ ಧಾರಾವಾಹಿ ಮೂಲಕ ಹೆಚ್ಚು ಮನೆ ಮಾತಾದವರು ಅಂಕಿತಾ. ಮೀರಾ ಪಾತ್ರದಲ್ಲಿ ನಟಿಸುವ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿಕೊಂಡರು. ಈಗ ಅವರಿಗೆ ಹೊಸ ಅವಕಾಶವೊಂದು ಸಿಕ್ಕಿದೆ. ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗಲಿರುವ ‘ಎದೆ ತುಂಬಿ ಹಾಡುವೆನು’ ಶೋ ಅನ್ನು ಅಂಕಿತಾ ಹೋಸ್ಟ್​ ಮಾಡಲಿದ್ದಾರೆ.

ಎಸ್​.ಪಿ. ಬಾಲಸುಬ್ರಮಣ್ಯಂ​ ಅವರು ಜಡ್ಜ್​​ ಆಗಿ ನಡೆಸಿಕೊಡುತ್ತಿದ್ದ  ‘ಎದೆ ತುಂಬಿ ಹಾಡುವೆನು’ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಸಾಕಷ್ಟು ಟ್ಯಾಂಲೆಂಟ್​ಗಳಿಗೆ ಇದು ವೇದಿಕೆ ಆಗಿತ್ತು. ಈಗ ಕಲರ್ಸ್​ ಕನ್ನಡ ವಾಹಿನಿ ಈ ಶೋನ ಹೊಸ ಸೀಸನ್​ ಆರಂಭಿಸುತ್ತಿದೆ. ಇದೇ ಆಗಸ್ಟ್​ 14ರಿಂದ ಈ ರಿಯಾಲಿಟಿ ಎಪಿಸೋಡ್​ ಆರಂಭಗೊಳ್ಳಲಿದೆ. ಇದಕ್ಕೆ ಅಂಕಿತಾ ನಿರೂಪಕಿಯಾಗಿದ್ದಾರೆ.

ಅಂಕಿತಾ ನಟನೆ ಮೂಲಕ ಹೆಚ್ಚು ಗುರುತಿಸಿಕೊಂಡವರು. ನಿರೂಪಣೆ ಅವರಿಗೆ ಹೊಸದು. ಆದಾಗ್ಯೂ ಹೆಚ್ಚು ಆತ್ಮವಿಶ್ವಾಸದಿಂದ ಅವರಿದ್ದಾರೆ. ಈ ಮೂಲಕ ಹೊಸ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವ ವಿಶ್ವಾಸ ಅವರಲ್ಲಿದೆ.

ಅಂದಹಾಗೆ, ಅಂಕಿತಾ ನೃತ್ಯ ಮತ್ತು ಸಂಗೀತದ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ. ನಟನೆಯಲ್ಲಿ ಪಳಗಲು ನೃತ್ಯ ತುಂಬಾನೇ ಸಹಕಾರಿಯಾಗಿದೆ ಎಂದು ಅವರು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಇನ್ನು, ಸಂಗೀತದ ಬಗ್ಗೆ ಅವರಿಗೆ ಎಲ್ಲಿಲ್ಲದ ಆಸಕ್ತಿ. ಹೀಗಿರುವಾಗಲೇ ಸಂಗೀತ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಶೋ ಅನ್ನು ನಡೆಸಿಕೊಡುವ ಅವಕಾಶ ಅವರಿಗೆ ಒಲಿದಿರುವುದಕ್ಕೆ ಸಾಕಷ್ಟು ಖುಷಿಯಾಗಿದ್ದಾರೆ.

ಎಸ್.ಪಿ. ಬಾಲಸುಬ್ರಮಣ್ಯಂ ಅವರು ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಈಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಹೊಸ ಸೀಸನ್​ನಲ್ಲಿ ರಾಜೇಶ್ ಕೃಷ್ಣನ್, ವಿ.ಹರಿಕೃಷ್ಣ ಹಾಗೂ ರಘು ದೀಕ್ಷಿತ್ ಕಾರ್ಯಕ್ರಮದ ತೀರ್ಪುಗಾರರಾಗಿ ಇರಲಿದ್ದಾರೆ. ವಿಶೇಷ ತೀರ್ಪುಗಾರರಾಗಿ ಎಸ್‌ಪಿಬಿ ಅವರ ಪುತ್ರ ಎಸ್.ಪಿ. ಚರಣ್ ಇರುತ್ತಾರೆ ಅನ್ನೋದು ವಿಶೇಷ. ಈಗಾಗಲೇ ಆಡಿಷನ್ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಆಗಸ್ಟ್​ 14ರಂದು ಮೊದಲ ಎಪಿಸೋಡ್​ ಪ್ರಸಾರವಾಗಲಿದೆ.

ಇದನ್ನೂ ಓದಿ:ಬಿಗ್​ ಬಾಸ್​ ಬಳಿಕ ರಂಜಿಸಲು ಬರ್ತಿವೆ ಹೊಸ ಸೀರಿಯಲ್​ಗಳು; ಲಕ್ಷಣ, ಕನ್ಯಾಕುಮಾರಿ ಕಥೆ ಏನು?

ಸಾಮಾಜಿಕ ಸಂದೇಶ ಹೊತ್ತು ಬರುತ್ತಿದ್ದಾರೆ ತನ್ವಿ ರಾವ್; ರಾಧೆ ಶ್ಯಾಮ ಧಾರಾವಾಹಿಯಲ್ಲಿ ಭಿನ್ನ ಪ್ರಯತ್ನ