‘ಜಗಳವಾಡಿ ಕ್ಷಮೆ ಕೇಳುವುದರೊಳಗೆ ಹೆಣವಾಗಿ ಬಂದಿದ್ದರು ತಂದೆ’​; ‘ನನ್ನರಸಿ ರಾಧೆ’ ಅಭಿನವ್ ನೋವಿನ ಕಥೆ 

| Updated By: ರಾಜೇಶ್ ದುಗ್ಗುಮನೆ

Updated on: Aug 28, 2021 | 1:30 PM

ಧಾರಾವಾಹಿಯಲ್ಲಿ ಬಣ್ಣ ಹಚ್ಚಿ ನಟಿಸುವ ಕಲಾವಿದರು ಎದುರಿನಿಂದ ನಗುತ್ತಿರುತ್ತಾರೆ. ಆದರೆ, ಅನೇಕರ ನಿಜವಾದ ಬದುಕು ಆ ರೀತಿ ಇರುವುದೇ ಇಲ್ಲ. ಸಾಕಷ್ಟು ನೋವುಗಳನ್ನು ಅನುಭವಿಸುತ್ತಿರುತ್ತಾರೆ.

‘ಜಗಳವಾಡಿ ಕ್ಷಮೆ ಕೇಳುವುದರೊಳಗೆ ಹೆಣವಾಗಿ ಬಂದಿದ್ದರು ತಂದೆ’​; ‘ನನ್ನರಸಿ ರಾಧೆ’ ಅಭಿನವ್ ನೋವಿನ ಕಥೆ 
‘ಜಗಳವಾಡಿ ಕ್ಷಮೆ ಕೇಳುವುದರೊಳಗೆ ಹೆಣವಾಗಿ ಬಂದಿದ್ದರು ತಂದೆ’​;  ಇದು ‘ನನ್ನರಸಿ ರಾಧೆ’ ಅಭಿನವ್ ನೋವಿನ ಕಥೆ 
Follow us on

ಅಭಿನವ್​ ಅವರು ಅಗಸ್ತ್ಯ ಪಾತ್ರದ ಮೂಲಕ ಹೆಚ್ಚು ಗುರುತಿಸಿಕೊಂಡವರು. ‘ನನ್ನರಸಿ ರಾಧೆ’ ಧಾರಾವಾಹಿ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದೆ. ತೆರೆಮೇಲಿನ ಪಾತ್ರವನ್ನು ನೋಡಿ ಇಷ್ಟಪಟ್ಟಿದ್ದ ವೀಕ್ಷಕರಿಗೆ ಈಗ ಅಭಿನವ್ ನಿಜವಾದ ವ್ಯಕ್ತಿತ್ವ ಬಿಗ್​ ಬಾಸ್​ ಮಿನಿ ಸೀಸನ್ ಮೂಲಕ ಗೊತ್ತಾಗುತ್ತಿದೆ . ಇಲ್ಲಿಯೂ ಅವರು ವೀಕ್ಷಕರಿಗೆ ಹೆಚ್ಚು ಇಷ್ಟವಾಗಿದ್ದಾರೆ. ಈ ಮಧ್ಯೆ ಅವರು ತಮ್ಮ ಜೀವನದಲ್ಲಿ ನಡೆದ ಕರಾಳ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ.

ಧಾರಾವಾಹಿಯಲ್ಲಿ ಬಣ್ಣ ಹಚ್ಚಿ ನಟಿಸುವ ಕಲಾವಿದರು ಎದುರಿನಿಂದ ನಗುತ್ತಿರುತ್ತಾರೆ. ಆದರೆ, ಅನೇಕರ ನಿಜವಾದ ಬದುಕು ಆ ರೀತಿ ಇರುವುದೇ ಇಲ್ಲ. ಸಾಕಷ್ಟು ನೋವುಗಳನ್ನು ಅನುಭವಿಸುತ್ತಿರುತ್ತಾರೆ.  ಅದನ್ನು ಎಲ್ಲಿಯೂ ಅವರು ಹೇಳಿಕೊಂಡಿರುವುದಿಲ್ಲ. ಈ ನೋವನ್ನು ಹೇಳಿಕೊಳ್ಳಲು ಬಿಗ್​ ಬಾಸ್​ ಮಿನಿ ಸೀಸನ್​ ವೇದಿಕೆ ಕಲ್ಪಿಸಿದೆ. ಜೀವನದಲ್ಲಿ ನಡೆದ ಕರಾಳ ಘಟನೆ ಬಗ್ಗೆ ಈಗ ಅಭಿನವ್​ ಮಾತನಾಡಿದ್ದಾರೆ.

ಅಭಿನವ್​ ಹುಟ್ಟಿದ್ದು, ಬೆಳೆದಿದ್ದು ದೆಹಲಿಯಲ್ಲಿ. ಅವರ ಕುಟುಂಬ ದೆಹಲಿಯಲ್ಲಿದ್ದ ಕಾರಣ,  ಅವರು ಅಲ್ಲಿಯೇ ಇರುವ ಅನಿವಾರ್ಯತೆ ಎದುರಾಗಿತ್ತು. ಅಭಿನವ್​ ಅವರು ದೆಹಲಿಯಲ್ಲಿದ್ದಾಗ ತಂದೆಯನ್ನು ಕಳೆದುಕೊಂಡರು. ತಂದೆ-ಮಗನ ನಡುವೆ ಜಗಳ ಏರ್ಪಟ್ಟಿತ್ತು. ಅಭಿನವ್​ ಕ್ಷಮೆ ಕೇಳುವ ಮೊದಲೇ ತಂದೆ ಮೃತಪಟ್ಟಿದ್ದರು.

ಬಿಗ್​ ಬಾಸ್​ ವೇದಿಕೆ ಮೇಲೆ ನೋವುಗಳನ್ನು ಹೇಳಿಕೊಳ್ಳೋಕೆ ಅವಕಾಶ ನೀಡಲಾಗಿತ್ತು. ಈ ವೇಳೆ ಎಲ್ಲರೂ ತಮ್ಮ ನೋವುಗಳನ್ನು ಹೇಳಿಕೊಂಡಿದ್ದಾರೆ. ಅದೇ ರೀತಿ ಅಭಿನವ್​ ತಾವು ತಂದೆ ಕಳೆದುಕೊಂಡ ವಿಚಾರವನ್ನು ಹೇಳಿಕೊಂಡಿದ್ದಾರೆ. ‘ನಾವು ದೆಹಲಿಗೆ ಹೊರಟಿದ್ದೆವು. ನನ್ನ ತಂದೆ ಹಾಗೂ ನನ್ನ ನಡುವೆ ಜಗಳ ಏರ್ಪಟ್ಟಿತ್ತು. ಮೂರು ದಿನ ಅವರನ್ನು ಭೇಟಿ ಮಾಡಿರಲಿಲ್ಲ. ಅಂದು ಅವರು ಮನೆಗೆ ಬರಬೇಕಿತ್ತು. ಆದರೆ, ಬಂದಿದ್ದು ಅವರ ಹೆಣ. ನಾನು ಅವರ ಬಳಿ ಕ್ಷಮೆ ಕೇಳಬೇಕಿತ್ತು. ಅದಕ್ಕೂ ಅವಕಾಶ ನೀಡದೇ ಅವರು ನನ್ನನ್ನು ಬಿಟ್ಟು ಹೋದರು’ ಎಂದು ಕಣ್ಣೀರು ಹಾಕಿದ್ದಾರೆ ಅಭಿನವ್.

ಕಲರ್ಸ್​ ಕನ್ನಡ ವಾಹಿನಿ ಈ ಪ್ರೋಮೋವನ್ನು ಹಂಚಿಕೊಂಡಿದೆ. ನಗುನಗುತ್ತಾ ಮಾತನಾಡುವ ಅಭಿನವ್​ ಹಿಂದೆ ಇಷ್ಟೊಂದು ನೋವಿದೆ ಎಂಬುದನ್ನು ತಿಳಿದು ಅನೇಕರು ಮರುಗಿದ್ದಾರೆ. ಈ ಸಂಚಿಕೆ ಇಂದು (ಆಗಸ್ಟ್​ 28) ಪ್ರಸಾರವಾಗಲಿದೆ.

ಇದನ್ನೂ ಓದಿ: ‘ಅಪ್ಪನ ಹೆಸರು ಗೊತ್ತಾಗಿದ್ದೇ 10ನೇ ಕ್ಲಾಸಲ್ಲಿ; ಸಾಯೋಕಿಂತ ಮುಂಚೆ ಅವ್ರನ್ನ ನೋಡ್ಬೇಕು’: ಮಿಥುನ ರಾಶಿ ವೈಷ್ಣವಿ ಕಣ್ಣೀರು