ಡಿವೋರ್ಸ್ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ನಿವೇದಿತಾ ಗೌಡ

Niveditha Gowda-Chandan Shetty:ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅಲ್ಲಿಯೇ ಪ್ರೀತಿಸಿ ಬಳಿಕ 2020ರ ಫೆಬ್ರವರಿ 24ರಂದು ವಿವಾಹವಾದರು. ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ಕ್ಯೂಟ್ ವಿಡಿಯೋಗಳನ್ನು ಸಹ ಆಗಾಗ್ಗೆ ಹಂಚಿಕೊಳ್ಳುತ್ತಿದ್ದರು. ವಿಡಿಯೋ ನೋಡಿದ ಅಭಿಮಾನಿಗಳು ಇಬ್ಬರದ್ದೂ ಸಿಹಿ ದಾಂಪತ್ಯ ಎಂದುಕೊಂಡಿದ್ದರು. ಆದರೆ ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಅಂದರೆ 2024ರಲ್ಲಿ ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡರು. ಇಬ್ಬರೂ ಈಗ ಸ್ವತಂತ್ರ್ಯ ಜೀವನ ನಡೆಸುತ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ನಿವೇದಿತಾ ಗೌಡ ಅವರು ತಮ್ಮ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ.

ಡಿವೋರ್ಸ್ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ನಿವೇದಿತಾ ಗೌಡ
Niveditha Gowda Chandan Shetty

Updated on: Jun 13, 2026 | 6:10 PM

ನಿವೇದಿತಾ ಗೌಡ (Niveditha Gowda) ಮತ್ತು ಚಂದನ್ ಶೆಟ್ಟಿ ಅವರ ದಾಂಪತ್ಯ ಮತ್ತು ವಿಚ್ಛೇದನ ಎರಡೂ ಸಹ ಬಹಳ ಚರ್ಚೆಯಲ್ಲಿದ್ದವು. ಬಿಗ್​​ಬಾಸ್​​ ಸೀಸನ್ 5ರ ಸ್ಪರ್ಧಿಗಳಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅಲ್ಲಿಯೇ ಪ್ರೀತಿಸಿ ಬಳಿಕ 2020ರ ಫೆಬ್ರವರಿ 24ರಂದು ವಿವಾಹವಾದರು. ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ಕ್ಯೂಟ್ ವಿಡಿಯೋಗಳನ್ನು ಸಹ ಆಗಾಗ್ಗೆ ಹಂಚಿಕೊಳ್ಳುತ್ತಿದ್ದರು. ವಿಡಿಯೋ ನೋಡಿದ ಅಭಿಮಾನಿಗಳು ಇಬ್ಬರದ್ದೂ ಸಿಹಿ ದಾಂಪತ್ಯ ಎಂದುಕೊಂಡಿದ್ದರು. ಆದರೆ ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಅಂದರೆ 2024ರಲ್ಲಿ ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡರು. ಇಬ್ಬರೂ ಈಗ ಸ್ವತಂತ್ರ್ಯ ಜೀವನ ನಡೆಸುತ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ನಿವೇದಿತಾ ಗೌಡ ಅವರು ತಮ್ಮ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ.

ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅವರಿಗೆ ಈಗಲೂ ವಿಚ್ಛೇದನದ ಬಗ್ಗೆ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿರುವ ನಿವೇದಿತಾ ಗೌಡ ಅವರಿಗೆ ನೆಟ್ಟಿಗರು ಥರವೇವಾರಿ ಕಮೆಂಟ್​​ಗಳನ್ನು ಹಾಕುತ್ತಿರುತ್ತಾರೆ. ವಿಚ್ಛೇದನಕ್ಕೆ ನಿವೇದಿತಾ ಕಾರಣ, ನಿವೇದಿತಾಗೆ ಪ್ರೀತಿಯ ಮಹತ್ವ ಗೊತ್ತಿಲ್ಲ ಎಂದೆಲ್ಲ ಕಮೆಂಟ್​​ಗಳನ್ನು ಹಾಕುತ್ತಿರುತ್ತಾರೆ. ಇದೀಗ ಮೊದಲ ಬಾರಿಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ವಿಚ್ಛೇದನದ ಬಗ್ಗೆ ನಿವೇದಿತಾ ಗೌಡ ಮಾತನಾಡಿದ್ದಾರೆ.

‘ವಿಚ್ಛೇದನ ಪಡೆಯಬೇಕು ಎಂದು ಯಾರೂ ಮದುವೆ ಆಗುವುದಿಲ್ಲ. ಚೆನ್ನಾಗಿರಬೇಕು, ಚೆನ್ನಾಗಿರ್ತೀವಿ ಅಂತಲೇ ಎಲ್ಲರೂ ಮದುವೆ ಆಗುವುದು. ನಾವೂ ಸಹ ಹಾಗೆಯೇ ಅಂದುಕೊಂಡಿದ್ದೆವು. ಆದರೆ ನಮ್ಮಿಬ್ಬರಿಗೂ ಹೊಂದಾಣಿಕೆ ಇರಲಿಲ್ಲ. ಡಿವೋರ್ಸ್ ಏಕೆ ಆಯಿತು ಎಂದು ಕಾರಣ ಹೇಳೋಕೆ ನಾನು ಹೋಗುವುದಿಲ್ಲ. ಅದು ನಮ್ಮಿಬ್ಬರ ವೈಯಕ್ತಿಕ ವಿಷಯ. ಆದರೆ ವಿಚ್ಛೇದನದ ಬಳಿಕ ಸಂಬಂಧ ಇಲ್ಲದೋರೆಲ್ಲ ಬಂದು ಏನೇನೋ ಹೇಳೋಕೆ ಶುರು ಮಾಡಿದರು. ಎಲ್ಲದಕ್ಕೂ ಫುಲ್​​ಸಸ್ಟಾಪ್ ಇಡಬೇಕೆಂದು ನಾವು ಸುದ್ದಿಗೋಷ್ಠಿ ನಡೆಸಿದ್ದೆವು’ ಎಂದು ನಿವೇದಿತಾ ಹೇಳಿದ್ದಾರೆ.

ಇದನ್ನೂ ಓದಿ:ಕ್ಯೂಟ್ ಟ್ರಾನ್ಸಿಷನ್ ವಿಡಿಯೋ ಹಂಚಿಕೊಂಡ ನಿವೇದಿತಾ ಗೌಡ

‘ನಮ್ಮಿಬ್ಬರ ನಡುವೆ ಪರಸ್ಪರ ಗೌರವ ಇದೆ. ಬೇರೆಯವರ ಖಾಸಗಿ ಜೀವನದ ಬಗ್ಗೆ ಗೌರವ ಸಹ ಇದೆ. ಇದೇ ಕಾರಣಕ್ಕೆ ನಾವು ವಿಚ್ಛೇದನದ ಬಗ್ಗೆ ನಾವು ಮಾತನಾಡಿಲ್ಲ. ಅದು ಅನಗತ್ಯ ಸಹ, ನನ್ನ ಹತ್ತಿರದವರಿಗೆ ಗೊತ್ತಾದರೆ ಸಾಕು, ಎಲ್ಲರಿಗೂ ಗೊತ್ತಾಗುವ ಅಗತ್ಯ ಇಲ್ಲ. ಜನರು ಅವರಿಗೆ ಏನು ಬೇಕೋ ಅದನ್ನು ನಂಬುತ್ತಾರೆ. ಅದು ಅವರಿಗೆ ಬಿಟ್ಟಿದ್ದು, ಎಲ್ಲರನ್ನೂ ಕನ್ವಿನ್ಸ್ ಮಾಡೋಕೆ ಆಗಲ್ಲ’ ಎಂದು ನಿವೇದಿತಾ ಹೇಳಿದ್ದಾರೆ.

ಅಲ್ಲದೆ, ತಮ್ಮ ಮದುವೆಯ ಮೇಲೆ ಸಾಮಾಜಿಕ ಜಾಲತಾಣದ ಪ್ರಭಾವ ಹೆಚ್ಚಾಗಿತ್ತು ಎಂದಿರುವ ನಿವೇದಿತಾ, ‘ನಾವು ಬಿಗ್​​ಬಾಸ್​​​ಗೆ ಹೋಗಿದ್ದಕ್ಕೆ ಅಲ್ಲಿಯೇ ನಮ್ಮನ್ನು ‘ಜೋಡಿ’ ಎಂದು ಬ್ರ್ಯಾಂಡ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲೂ ಅದೇ ತುಂಬಿತ್ತು, ಹೋದಲ್ಲೆಲ್ಲ ನೀವು ಮದುವೆ ಆಗಬೇಕು ಎಂದು ಹೇಳುತ್ತಿದ್ದರು. ನಾವು ಆ ಪ್ರಭಾವಕ್ಕೆ ಒಳಗಾದೆವು. ಮದುವೆ ಆದೆವು, ಆದರೆ ನಮ್ಮ ನಡುವೆ ಕಂಪಾಟಿಬಿಲಿಟಿ ಇರಲಿಲ್ಲ’ ಎಂದಿದ್ದಾರೆ ನಟಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us