10 ಸಾವಿರಕ್ಕೆ ಅಬ್ಬಾ ಎಂದಿದ್ದ ಗಿಲ್ಲಿ ಈಗ 50 ಲಕ್ಷ ಗೆಲ್ಲುವ ಹೊಸ್ತಿಲಲ್ಲಿ

Bigg Boss Kannada 12: ಒಂದು ಸಣ್ಣ ಹಳ್ಳಿಯ, ತೀರಾ ಸಾಮಾನ್ಯ ಕುಟುಂಬದಿಂದ ಬಂದ ಗಿಲ್ಲಿ, ಬಿಗ್​​ಬಾಸ್ ಮೂಲಕ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದಾರೆ. ಇದೀಗ ಬಿಗ್​​ಬಾಸ್ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಅಂದಹಾಗೆ ಗಿಲ್ಲಿ, ಜೀವನದ ಒಂದು ಹಂತದಲ್ಲಿ ಕೇವಲ 10 ಸಾವಿರ ರೂಪಾಯಿ ಸಂಭಾವನೆ ಸಿಕ್ಕಿದ್ದಕ್ಕೆ ಅಬ್ಬಾ, ಎಷ್ಟು ದೊಡ್ಡ ಮೊತ್ತ ಎಂದುಕೊಂಡಿದ್ದರು, ಈಗ 50 ಲಕ್ಷ ಗೆಲ್ಲುವ ಹೊಸ್ತಿಲಲ್ಲಿ ನಿಂತಿದ್ದಾರೆ.

10 ಸಾವಿರಕ್ಕೆ ಅಬ್ಬಾ ಎಂದಿದ್ದ ಗಿಲ್ಲಿ ಈಗ 50 ಲಕ್ಷ ಗೆಲ್ಲುವ ಹೊಸ್ತಿಲಲ್ಲಿ
Gilli Nata

Updated on: Jan 18, 2026 | 3:58 PM

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss) ಫಿನಾಲೆ ಇಂದು (ಜನವರಿ 18) ನಡೆಯಲಿದೆ. ಗಿಲ್ಲಿ ನಟ ಬಿಗ್​​ಬಾಸ್​ ಫಿನಾಲೆಯ ವಿನ್ನರ್ ಆಗಲಿದ್ದಾರೆ ಎಂದು ಅವರು ಅಭಿಮಾನಿಗಳು ಈಗಾಗಲೇ ಸಂಭ್ರಮಾಚರಣೆ ಪ್ರಾರಂಭ ಮಾಡಿದ್ದಾರೆ. ಗಿಲ್ಲಿಗೆ ರಾಜ್ಯದಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಗಿಲ್ಲಿಯ ಫೋಟೊವನ್ನು ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ. ಒಂದು ಸಣ್ಣ ಹಳ್ಳಿಯ, ತೀರಾ ಸಾಮಾನ್ಯ ಕುಟುಂಬದಿಂದ ಬಂದ ಗಿಲ್ಲಿ, ಬಿಗ್​​ಬಾಸ್ ಮೂಲಕ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದಾರೆ. ಇದೀಗ ಬಿಗ್​​ಬಾಸ್ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಅಂದಹಾಗೆ ಗಿಲ್ಲಿ, ಜೀವನದ ಒಂದು ಹಂತದಲ್ಲಿ ಕೇವಲ 10 ಸಾವಿರ ರೂಪಾಯಿ ಸಂಭಾವನೆ ಸಿಕ್ಕಿದ್ದಕ್ಕೆ ಅಬ್ಬಾ, ಎಷ್ಟು ದೊಡ್ಡ ಮೊತ್ತ ಎಂದುಕೊಂಡಿದ್ದರು, ಈಗ 50 ಲಕ್ಷ ಗೆಲ್ಲುವ ಹೊಸ್ತಿಲಲ್ಲಿ ನಿಂತಿದ್ದಾರೆ.

ಹಿಂದೆ ರಿಯಾಲಿಟಿ ಶೋ ಒಂದರಲ್ಲಿ ಕೆಲಸ ಮಾಡುತ್ತಿದ್ದಾಗ ನಿರೂಪಕಿ ಅನುಶ್ರೀ ಅವರ ಪಾಡ್​​ಕಾಸ್ಟ್​​ನಲ್ಲಿ ಗಿಲ್ಲಿ ನಟ ಭಾಗವಹಿಸಿದ್ದರು. ಪಾಡ್​​ಕಾಸ್ಟ್​​ನಲ್ಲಿ ವಿಷಯವೊಂದನ್ನು ಗಿಲ್ಲಿ ನಟ ಹಂಚಿಕೊಂಡಿದ್ದರು. ಯೂಟ್ಯೂಬ್ ವಿಡಿಯೋಗಳ ಬಳಿಕ ರಿಯಾಲಿಟಿ ಶೋಗಳಿಗೆ ಬಂದಿದ್ದ ಗಿಲ್ಲಿ ನಟ ತಕ್ಕಮಟ್ಟಿಗೆ ಜನಪ್ರಿಯತೆ ಪಡೆದುಕೊಂಡಿದ್ದರು. ಆಗೆಲ್ಲ ತಬಲ ನಾಣಿ ಇನ್ನೂ ಕೆಲವು ಕಲಾವಿದರು ಫೋನ್ ಮಾಡಿ ಗಿಲ್ಲಿಯನ್ನು ಇವೆಂಟ್​​ಗಳಿಗೆ ಕರೆಯುತ್ತಿದ್ದರಂತೆ. ಆದರೆ ಗಿಲ್ಲಿಗೆ, ಆ ಇವೆಂಟ್​​ಗಳಿಗೆ ಹಣ ಕೊಡುತ್ತಾರೆ ಎಂಬುದು ಸಹ ಅವರಿಗೆ ಗೊತ್ತಿರಲಿಲ್ಲವಂತೆ.

ಈ ಬಗ್ಗೆ ಹೇಳಿರುವ ಗಿಲ್ಲಿ ನಟ, ಅವರು ಫೋನ್ ಮಾಡಿ ಕರೆಯುತ್ತಿದ್ದರು, ಪೆಟ್ರೋಲ್ ಹಾಕಿಕೊಂಡು ನಾನೇ ಹೋಗಬೇಕಲ್ಲ ಎಂದುಕೊಂಡು ನಾನು ಹೋಗುತ್ತಲೇ ಇರಲಿಲ್ಲ. ಹೀಗೆ ಸುಮಾರು ಎಂಟೊಂಬತ್ತು ಶೋಗಳು ಕೈಬಿಟ್ಟು ಹೋದವು. ಆದರೆ ಒಮ್ಮೆ ಮಿಮಿಕ್ರಿ ಮಾಡುವ ನನ್ನ ಗೆಳೆಯ ಕರೆ ಮಾಡಿ, ಹೀಗೊಂದು ಕಾರ್ಯಕ್ರಮ ಇದೆ ಒಂದು ಗಂಟೆ ಕಾರ್ಯಕ್ರಮ, ಹತ್ತು ಸಾವಿರ ಕೊಡುತ್ತಾರೆ ಎಂದರಂತೆ. ಆಗ ಗಿಲ್ಲಿಗೆ ‘ಅಬ್ಬಾ ಒಂದು ಗಂಟೆ ಶೋ ಮಾಡಿದರೆ ಹತ್ತು ಸಾವಿರ ಕೊಡುತ್ತಾರಾ’ ಎಂದು ಆಶ್ಚರ್ಯ ಆಯ್ತಂತೆ. ಬರೀ ಒಂದು ಗಂಟೆಗೆ ಹತ್ತು ಸಾವಿರ ರೂಪಾಯಿ ಯಾರಪ್ಪ ಕೊಡ್ತಾರೆ ಎಂದುಕೊಂಡೆ, ಆ ಮೇಲೆ ಯಾವ ಶೋ ಅನ್ನೂ ಮಿಸ್ ಮಾಡಿರಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ಬಿಗ್​​ಬಾಸ್: ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ವೋಟ್, ಆದರೂ ಇದೆ ಕಠಿಣ ಸ್ಪರ್ಧೆ

ಕೇವಲ ಹತ್ತು ಸಾವಿರ ರೂಪಾಯಿ ಗಿಲ್ಲಿಗೆ ಒಂದು ಸಮಯದಲ್ಲಿ ಬಹಳ ದೊಡ್ಡ ಮೊತ್ತ ಆಗಿತ್ತು. ಹತ್ತು ಸಾವಿರ ರೂಪಾಯಿ ಗಳಿಸಲು ಎಲ್ಲಿಂದ ಎಲ್ಲಿಗೋ ಪ್ರಯಾಣ ಮಾಡುತ್ತಿದ್ದರು. ಆದರೆ ಈಗ ಗಿಲ್ಲಿ, ಬಿಗ್​​ಬಾಸ್ ಸೀಸನ್ 12ರ ವಿನ್ನರ್ ಆಗುವ ಹೊಸ್ತಿಲಲ್ಲಿ ಇದ್ದಾರೆ. ಇದೀಗ ಗಿಲ್ಲಿಯ ಹಳೆಯ ದಿನಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ‘ಬಡವರ ಮಕ್ಳು ಬೆಳೀಬೇಕು’ ಎಂಬ ಹ್ಯಾಷ್ ಟ್ಯಾಗ್ ಅಡಿಯಲ್ಲಿ ಗಿಲ್ಲಿ ವಿಡಿಯೋಗಳು ವೈರಲ್ ಆಗುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ