ಬಲಿಷ್ಠ ದೇಹ, ಮಗುವಿನ ಮನಸ್ಸು, ಶಿಸ್ತಿನ ಆಟ: ಆದರೆ ಅಷ್ಟೇ ಸಾಕಾಗಲಿಲ್ಲ ಗೆಲ್ಲಲು
Bigg Boss Kannada 12: ಆರನೇ ಸ್ಪರ್ಧಿಯಾಗಿ ಧನುಶ್ ಮನೆಯಿಂದ ಹೊರ ನಡೆದಿದ್ದಾರೆ. ಧನುಶ್, ಟಾಸ್ಕ್ ಮಾಸ್ಟರ್ ಎನಿಸಿಕೊಂಡಿದ್ದರು, ಒಳ್ಳೆಯ ವ್ಯಕ್ತಿತ್ವದಿಂದ ಗಮನ ಸೆಳೆದಿದ್ದರು, ಅನವಶ್ಯಕ ವಿವಾದ, ಜಗಳಗಳನ್ನು ಮಾಡಿರಲಿಲ್ಲ. ಅದರ ಪ್ರತಿರೂಪದಂತೆ ಇದ್ದವರು ರಘು. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟರೂ ಸಹ ತಮ್ಮ ಆಟ, ವ್ಯಕ್ತಿತ್ವದಿಂದ ಗಮನ ಸೆಳೆದಿದ್ದರು ರಘು. ಇದೀಗ ರಘು ಅವರು ಐದನೇ ಸ್ಪರ್ಧಿಯಾಗಿ ಮನೆಯಿಂದ ಹೊರಗೆ ಬಂದಿದ್ದಾರೆ.

ಬಿಗ್ಬಾಸ್ (Bigg Boss) ಫಿನಾಲೆ ಚಾಲ್ತಿಯಲ್ಲಿದೆ. ಫಿನಾಲೆ ತಲುಪಿದ ಆರು ಮಂದಿಯಲ್ಲಿ ಈಗಾಗಲೇ ಧನುಶ್ ಮನೆಯಿಂದ ಹೊರ ನಡೆದಿದ್ದಾರೆ. ಧನುಶ್, ಟಾಸ್ಕ್ ಮಾಸ್ಟರ್ ಎನಿಸಿಕೊಂಡಿದ್ದರು, ಅದ್ಭುತವಾಗಿ ಆಡಿದ್ದರು, ಒಳ್ಳೆಯ ವ್ಯಕ್ತಿತ್ವದಿಂದ ಗಮನ ಸೆಳೆದಿದ್ದರು, ಅನವಶ್ಯಕ ವಿವಾದ, ಜಗಳಗಳನ್ನು ಮಾಡಿರಲಿಲ್ಲ. ಅದರ ಪ್ರತಿರೂಪದಂತೆ ಇದ್ದವರು ರಘು. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟರೂ ಸಹ ತಮ್ಮ ಆಟ, ವ್ಯಕ್ತಿತ್ವದಿಂದ ಗಮನ ಸೆಳೆದಿದ್ದರು ರಘು. ಇದೀಗ ರಘು ಅವರು ಐದನೇ ಸ್ಪರ್ಧಿಯಾಗಿ ಮನೆಯಿಂದ ಹೊರಗೆ ಬಂದಿದ್ದಾರೆ.
ರಘು ಅವರು ಬಿಗ್ಬಾಸ್ ಪ್ರಾರಂಭವಾಗಿ 22 ದಿನಗಳ ಬಳಿಕ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ಬಾಸ್ ಮನೆಗೆ ಬಂದರು. ಬಂದ ಮೊದಲ ದಿನವೇ ಮನೆಯಲ್ಲಿ ಸಖತ್ ಅಬ್ಬರಿಸಿದ್ದರು. ಆರಂಭದಲ್ಲಿಯೇ ಅಶ್ವಿನಿ ಜೊತೆಗೆ ಜೋರು ಜಗಳ ಸಹ ಮಾಡಿಕೊಂಡಿದ್ದರು. ಅವರ ದೈತ್ಯ ದೇಹ, ಫಿಟ್ ಬಾಡಿ ಮತ್ತು ಅಬ್ಬರದ ಧ್ವನಿಯಿಂದ ಮನೆಯವರ ಮೇಲೆ ಕಮಾಂಡ್ ಸಾಧಿಸಿದ್ದರು. ಆದರೆ ಬರ ಬರುತ್ತಾ ರಘು ಅವರು ಕಠಿಣ ದೇಹಿ ಆದರೆ ಮೃದು ಮನಸ್ಸಿನ ವ್ಯಕ್ತಿ ಎಂಬುದು ಗೊತ್ತಾಯಿತು.
ಇದನ್ನೂ ಓದಿ:Bigg Boss 12 Grand Finale Live Updates: ಬಿಗ್ಬಾಸ್ ವೇದಿಕೆಗೆ ಬಂದ ಅತಿಥಿ
ಗಿಲ್ಲಿ ನಟ, ರಕ್ಷಿತಾ ಅವರುಗಳೊಡನೆ ಬಹಳ ಆಪ್ತ ಬಂಧ ಹೊಂದಿದ್ದ ರಘು ಅವರು ಅವರು ತಪ್ಪು ಮಾಡಿದಾಗ ಮುಲಾಜಿಲ್ಲದೆ ಹೇಳುತ್ತಿದ್ದರು. ಬಿಗ್ಬಾಸ್ಗೆ ಬಂದು ಯಾರ ವ್ಯಕ್ತಿತ್ವದಲ್ಲಾದರೂ ಬದಲಾಗಿದೆ ಅಥವಾ ಹೊರಗೆ ತಾನು ನಡೆದುಕೊಳ್ಳುತ್ತಿದ್ದ ರೀತಿ ತಪ್ಪು ಎಂದು ಅನಿಸಿದೆ ಎಂದರೆ ಅದು ರಘು ಅವರಿಗೆ. ಮನೆಯಲ್ಲಿ ತಾನೊಬ್ಬ ಸೋಮಾರಿ, ಮನೆಯವರ ಜೊತೆ ಸಮಯ ಕಳೆಯುತ್ತಿರಲಿಲ್ಲ, ಮನೆಯವರ ಪ್ರೀತಿಯನ್ನು ಗಂಭೀರವಾಗಿಯೇ ಪರಿಗಣಿಸಿರಲಿಲ್ಲ ಆದರೆ ಬಿಗ್ಬಾಸ್ ಮನೆಗೆ ಬಂದ ಮೇಲೆ ನಾನು ಮಾಡುತ್ತಿದ್ದ ತಪ್ಪಿನ ಅರಿವಾಗಿದೆ ಎಂದು ರಘು ಹೇಳಿಕೊಂಡಿದ್ದರು. ಇದೀಗ ರಘು ಅವರು ಐದನೇ ಸ್ಪರ್ಧಿಯಾಗಿ ಹೊರಗೆ ಹೋಗಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬಂದರೂ ಅವರು ಆಡಿದ ಆಟ ನಿಜಕ್ಕೂ ಪ್ರೇಕ್ಷಕರ ಮನಸ್ಸು ಗೆದ್ದಿದೆ.
ಮಾಜಿ ಬಿಗ್ಬಾಸ್ ವಿಜೇತರು ಮತ್ತು ಕನ್ನಡದ ಖ್ಯಾತ ನಟಿ ಶ್ರುತಿ ಅವರು ಬಿಗ್ಬಾಸ್ ಮನೆಗೆ ಅತಿಥಿಯಾಗಿ ಬಂದು, ಐದನೇ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಬಂದರು. ಎಲ್ಲ ಸ್ಪರ್ಧಿಗಳಿಂದ ಆಕ್ಟಿವಿಟಿ ರೂಂನಲ್ಲಿ ಆಟವೊಂದನ್ನು ಆಡಿಸಿದರು. ಆ ಆಕ್ಟಿವಿಟಿಯಲ್ಲಿ ರಘು ಅವರು ಹೊರಗೆ ಹೋಗುತ್ತಿರುವುದು ತಿಳಿಯಿತು. ಎಂದಿನ ತಮ್ಮ ನಗುಮುಖದಲ್ಲಿಯೇ ರಘು ಮನೆಯಿಂದ ಹೊರಗೆ ಬಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




