ಈ ಬಾರಿಯ ಬಿಗ್ ಬಾಸ್ನಲ್ಲಿ ಎಲಿಮಿನೇಷನ್ ಇಲ್ಲದೆ ನಡೆದ ವಾರಗಳ ಪಟ್ಟಿ ದೊಡ್ಡದಿದೆ. ಒಂದು ವಾರ ಹೊಡೆದಾಡಿಕೊಂಡು ಇಬ್ಬರು ಎಲಿಮಿನೇಷನ್ ಆದರು ಎಂಬ ಕಾರಣಕ್ಕೆ, ಮತ್ತೊಂದು ವಾರ ಹಬ್ಬದ ಕಾರಣಕ್ಕೆ, ಮತ್ತೊಂದು ವಾರ ಯಾವುದೇ ಕಾರಣ ಇಲ್ಲದೆ ಹೀಗೆ ಅನೇಕ ಬಾರಿ ‘ನೋ ಎಲಿಮಿನೇಷನ್ ವೀಕ್’ ಆಗಿದೆ. ಅದಕ್ಕೆ ಈ ವಾರ ಹೊಸ ಸೇರ್ಪಡೆ. ಹೀಗಾಗಿ, ಮುಂದಿನ ವಾರ ಡಬಲ್ ಎಲಿಮಿನೇಷನ್ ನಡೆಯಬಹುದು ಎಂದು ಊಹಿಸಲಾಗುತ್ತಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಒಳ್ಳೆಯ ಟಿಆರ್ಪಿ ಪಡೆಯುತ್ತಿದೆ ನಿಜ. ಅದರ ಜೊತೆಗೆ ಡ್ರಾಮಾಗಳ ಸಂಖ್ಯೆಯೂ ಅಧಿಕವಾಗಿದೆ. ಸುಖಾಸುಮ್ಮನೆ ಎಲಿಮಿನೇಷನ್ ಮಾಡದೆ ಇರುವ ಕೆಲಸ ಆಗುತ್ತಿದೆ. ಈಗ ಈ ವಾರ ಫ್ಯಾಮಿಲಿ ವೀಕ್ ಆಗಿದ್ದು, ಯಾವುದೇ ನಾಮಿನೇಷನ್ ಪ್ರಕ್ರಿಯೆ ನಡೆದಿಲ್ಲ.
ಸದ್ಯ 9 ಮಂದಿ ಬಿಗ್ ಬಾಸ್ನಲ್ಲಿ ಇದ್ದು, ಜನವರಿ ಅಂತ್ಯಕ್ಕೆ ಫಿನಾಲೆ ನಡೆಯುವ ಸಾಧ್ಯತೆ ಇದೆ. ದೊಡ್ಮನೆಯಲ್ಲಿ ಈಗ ಉಳಿದುಕೊಂಡಿರೋದು 9 ಮಂದಿ. ಹೀಗಾಗಿ, ಮುಂದಿನ ವಾರ ಡಬಲ್ ಎಲಿಮಿನೇಷನ್ ನಡೆಯುವ ಸಾಧ್ಯತೆ ದಟ್ಟವಾಗಿದೆ. ಆ ವಾರ ಯಾರು ಹೊರ ಹೋಗುತ್ತಾರೆ ಎನ್ನುವ ಕುತೂಹಲ ಮೂಡಿದೆ.
ಈಗ ಕ್ಯಾಪ್ಟನ್ ಆಗುವುದು ತುಂಬಾನೇ ಮುಖ್ಯವಾಗುತ್ತದೆ. ಈ ವಾರ ಕ್ಯಾಪ್ಟನ್ ಆದರೆ ಮುಂದಿನ ವಾರಕ್ಕೆ ಇಮ್ಯೂನಿಟಿ ಸಿಗಲಿದೆ. ಈ ವಾರವಂತೂ ಯಾವುದೇ ಎಲಿಮಿನೇಷನ್ ಇಲ್ಲದೆ ಅವರು ಸೇಫ್ ಆಗಲಿದ್ದಾರೆ. ಇದರ ಜೊತೆಗೆ ಮುಂದಿನ ವಾರ ಡಬಲ್ ಎಲಿಮಿನೇಷನ್ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ: ಬಿಗ್ ಬಾಸ್ನಿಂದ ಹೊರ ಬಂದಮೇಲೆ ಮೋಕ್ಷಿತಾ ಮದುವೆ
ಈ ಬಾರಿಯ ಬಿಗ್ ಬಾಸ್ ನಿರ್ವಹಣೆ ಬಗ್ಗೆ ಅಪಸ್ವರ ಎದ್ದಿದೆ. ಸರಿಯಾದ ರೀತಿಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆಸಲಾಗುತ್ತಿಲ್ಲ ಎನ್ನುವ ಆರೋಪವನ್ನು ಅನೇಕರು ಮಾಡಿದ್ದಾರೆ. ಈ ಮೊದಲ ಸೀಸನ್ಗಳಲ್ಲಿ ಎಲಿಮಿನೇಷನ್ ಇಲ್ಲದ ವಾರಗಳನ್ನು ಹುಡುಕ ಬೇಕಿತ್ತು. ಆದರೆ, ಈಗ ಹಾಗಿಲ್ಲ. ಸದ್ಯ ದೊಡ್ಮನೆಯಲ್ಲಿ ಉಗ್ರಂ ಮಂಜು, ಮೋಕ್ಷಿತಾ, ಗೌತಮಿ, ರಜತ್, ಧನರಾಜ್, ಹನುಮಂತ, ಚೈತ್ರಾ, ತ್ರಿವಿಕ್ರಂ ಹಾಗೂ ಭವ್ಯಾ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.