‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ರಜತ್ ಹಾಗೂ ಚೈತ್ರಾ ಕುಂದಾಪುರ ಮಧ್ಯೆ ಕಿರಿಕ್ ಆಗಿದೆ. ಟಾಸ್ಕ್ ನಡೆಯುವಾಗ ಚೈತ್ರಾ ಅವರನ್ನು ತಳ್ಳಿ ರಜತ್ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದಾರೆ. ಇವರ ಆಟ ಬೇರೆಯದೇ ಸ್ವರೂಪ ಪಡೆದುಕೊಂಡಿತ್ತು. ಕೊನೆಯಲ್ಲಿ ರಜತ್ ಅವರು ಕ್ಷಮೆ ಕೇಳಿದ್ದಾರೆ. ಇದಕ್ಕೆ ಚೈತ್ರಾ ಅವರು ಆಡಿದ ತೂಕದ ಮಾತು ಅನೇಕರಿಗೆ ಇಷ್ಟ ಆಗಿದೆ.
ಟಾಸ್ಕ್ ನಡೆಯುವಾಗ ಚೈತ್ರಾ ಕುಂದಾಪುರ ಅವರು ಉಸ್ತುವಾರಿ ವಹಿಸಿಕೊಂಡಿದ್ದರು. ಅವರು ಟಾಸ್ಕ್ ಮಾಡುವಾಗ ಉಸ್ತುವಾರಿ ಆಗಿದ್ದವರು ಪದೇ ಪದೇ ಪೌಸ್ ಕೊಟ್ಟಿದ್ದರು. ಮಾಡದ ತಪ್ಪಿಗೆ ತಮಗೆ ಶಿಕ್ಷೆ ನೀಡಲಾಗಿದೆ ಎಂದು ಚೈತ್ರಾ ಭಾವಿಸಿದ್ದರು. ಈ ಕಾರಣಕ್ಕೆ ಸರಿಯಾದ ಸಮಯಕ್ಕೆ ಕಾದಿದ್ದರು. ಟಾಸ್ಕ್ ನಡೆಯುವಾಗ ಅವರು ಹಗೆ ತೀರಿಸಿಕೊಂಡಿದ್ದಾರೆ.
ರಜತ್ ಅವರು ಹದ್ದುಮೀರಿ ಮಾತನಾಡುತ್ತಿದ್ದರು. ಇದಕ್ಕೆ ಚೈತ್ರಾ ಅವರು ಪೌಸ್ ಕೊಟ್ಟಿದ್ದಾರೆ. ಇದರಿಂದ ರಜತ್ ಹಾಗೂ ಚೈತ್ರಾ ಮಧ್ಯೆ ಕಿರಿಕ್ ಆಗಿದೆ. ಅದು ತಳ್ಳಾಟದ ಹಂತದವರೆಗೆ ಹೋಗಿದೆ. ಚೈತ್ರಾ ಅವರನ್ನು ರಜತ್ ತಳ್ಳಿದ ವಿಚಾರಕ್ಕೆ ತಂಡದಲ್ಲೇ ಅಸಮಾಧಾನ ಮೂಡಿತ್ತು. ಐಶ್ವರ್ಯಾ ಅವರು ರಜತ್ ನಡೆದುಕೊಂಡ ರೀತಿಯನ್ನು ವಿರೋಧಿಸಿದರು.
ಆ ಬಳಿಕ ಮೋಕ್ಷಿತಾ ಅವರು ರಜತ್ಗೆ ಕಿವಿಮಾತು ಹೇಳಿದ್ದಾರೆ. ‘ನೀವು ಚೈತ್ರಾನ ತಳ್ಳಿದ್ದು ತಪ್ಪು. ನೀವು ಕೋಪ ಕಡಿಮೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಕಷ್ಟ ಇದೆ. ಚೈತ್ರಾ ಬಳಿ ಕ್ಷಮೆ ಕೇಳಿ. ಆಗ ನೀವು ದೊಡ್ಡವರಾಗುತ್ತೀರಾ’ ಎಂದು ಮೋಕ್ಷಿತಾ ಅವರು ರಜತ್ಗೆ ಹೇಳಿದರು. ಈ ಮಾತಿಗೆ ರಜತ್ ಗೌರವ ಸೂಚಿಸಿದ್ದಾರೆ.
ಇದನ್ನೂ ಓದಿ: ‘ಅವರ ತಂಗಿಯರು ನೋಡ್ತಾ ಇರಲ್ವಾ’; ಗೌತಮಿ ಪ್ರಶ್ನೆಗೆ ಮಂಕಾದ ಹನುಮಂತ; ಮಾಡಿದ ತಪ್ಪೇನು?
ನೇರವಾಗಿ ಚೈತ್ರಾ ಬಳಿ ತೆರಳಿದ ರಜತ್ ಅವರು, ‘ತಪ್ಪಾಯಿತು. ನೀನು ನನ್ನ ತಂಗಿ ಸಮಾನ’ ಎಂದು ರಜತ್ ಹೇಳಿದ್ದಾರೆ. ‘ಗೇಮ್ ಅಗ್ರೆಶನ್ಅಲ್ಲಿ ಎಲ್ಲರೂ ಮಾಡ್ತಾರೆ. ನನಗೆ ಕಂಫರ್ಟ್ ಇಲ್ಲ ಎಂದರೆ ಅವರ ಬಳಿ ಮಾತನಾಡಲ್ಲ. ನಾನು ನಿಮ್ಮ ಬಳಿ ಹೇಗೆ ನಡೆದುಕೊಳ್ಳುತ್ತಿದ್ದೆ ಎಂಬುದು ನಿಮಗೆ ಗೊತ್ತು. ನೀವು ತಳ್ಳುವಾಗ ಯಾರಿದ್ರೂ ಅದನ್ನು ಮಾಡಬೇಡಿ. ಹುಡುಗಿ ಆಗಿ ತಳ್ಳಿದೆ ಎಂದು ನೀವು ಕ್ಷಮೆ ಕೇಳಬೇಕು ಎಂಬುದಿಲ್ಲ’ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.