‘ಯಾರಾದ್ರೂ ಟಚ್ ಮಾಡಿದ್ರೆ ₹ 500 ಕೋಟಿ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ’; ರಾಖಿ ಹೀಗೆ ಆವಾಜ್ ಹಾಕಿದ್ದೇಕೆ?

ಬಾಲಿವುಡ್ ಹಾಗೂ ಹಿಂದಿ ಕಿರುತೆರೆಯಲ್ಲಿ ರಾಖಿ ಸಾವಂತ್​ಗೆ ಅವರದ್ದೇ ಆದ ಅಭಿಮಾನಿ ಬಳಗವಿದೆ. ಪಾಪರಾಜಿಗಳು ಫೋಟೋ ಕೇಳಿದಾಗ ರಾಖಿ ಇಲ್ಲ ಎಂದವರೂ ಅಲ್ಲ. ಆದರೆ ಇತ್ತೀಚೆಗೆ ರಾಖಿ ಸ್ವಲ್ಪ ರಾಂಗ್ ಆಗಿದ್ದಾರೆ.

‘ಯಾರಾದ್ರೂ ಟಚ್ ಮಾಡಿದ್ರೆ ₹ 500 ಕೋಟಿ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ’; ರಾಖಿ ಹೀಗೆ ಆವಾಜ್ ಹಾಕಿದ್ದೇಕೆ?
ರಾಖಿ ಸಾವಂತ್
Follow us
TV9 Web
| Updated By: shivaprasad.hs

Updated on: Feb 04, 2022 | 8:17 AM

ಬಾಲಿವುಡ್ ನಟಿ, ಡಾನ್ಸರ್​ ರಾಖಿ ಸಾವಂತ್ (Rakhi Sawant) ಇತ್ತೀಚೆಗಷ್ಟೇ ಬಿಗ್ ಬಾಸ್ 15ರ (Big Boss 15) ಭಾಗವಾಗಿದ್ದರು. ಅವರ ವೈಯಕ್ತಿಕ ಜೀವನದ ಕುರಿತು ಮಹತ್ತರ ಗುಟ್ಟೊಂದು ಬಿಗ್ ಬಾಸ್​ನಲ್ಲಿ ಬಹಿರಂಗಾವಗಿತ್ತು. ಅವರ ಪತಿಯ ಬಗ್ಗೆ ಅಲ್ಲಿಯವರೆಗೆ ಯಾರಿಗೂ ತಿಳಿದಿರಲಿಲ್ಲ. ಆದರೆ ಬಿಗ್ ಬಾಸ್​ನಲ್ಲಿ ಪತಿಯೊಂದಿಗೆ ಕಾಣಿಸಿಕೊಂಡಿದ್ದ ರಾಖಿ, ಎಲ್ಲರ ಗಮನ ಸೆಳೆದಿದ್ದರು. ಬಿಗ್ ಬಾಸ್​ನಲ್ಲಿ ಕಾಣಿಸಿಕೊಂಡ ನಂತರ ರಾಖಿ ತಮ್ಮ ಪತಿಯೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಖಿ ಮೊದಲಿನಿಂದಲೂ ಪಾಪರಾಜಿಗಳೊಂದಿಗೆ (ಸೆಲೆಬ್ರಿಟಿ ಚಿತ್ರ ತೆಗೆಯುವ ಸ್ವತಂತ್ರ ಫೋಟೋಗ್ರಾಫರ್​ಗಳು​) ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಫೋಟೋ ಕೇಳಿದಾಗ ಅವರು ಇಲ್ಲ ಎಂದಿದ್ದೇ ಇಲ್ಲ. ಅಲ್ಲದೇ ತಮಾಷೆ ಮಾಡುತ್ತಾ ಎಲ್ಲರ ಮೊಗದಲ್ಲಿ ನಗು ಮೂಡಿಸಲು ಅವರು ಪ್ರಯತ್ನಿಸುತ್ತಾರೆ. ಇದೀಗ ಅಂಥದ್ದೇ ಒಂದು ಪ್ರಕರಣ ನಡೆದಿದೆ. ರಾಖಿ ಸಾವಂತ್ ಇತ್ತೀಚೆಗೆ ಬಿಗ್ ಬಾಸ್​ನಲ್ಲಿ ಪರಿಚಯವಾಗಿದ್ದ ಗೆಳತಿ ಶಮಿತಾ ಶೆಟ್ಟಿಯವರ (Shamita Shetty) ಜನ್ಮದಿನದ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಸಖತ್ ಬೋಲ್ಡ್ ಅವತಾರದಲ್ಲಿ, ತಮ್ಮ ಪತಿಯೊಂದಿಗೆ ರಾಖಿ ಕಾಣಿಸಿಕೊಂಡಿದ್ದರು.

ಮೊದಲಿಗೆ ಪತಿ ರಿತೇಶ್ ಜತೆ ಭರ್ಜರಿ ಪೋಸ್ ನೀಡಿದ ರಾಖಿ, ನಂತರ ತಮ್ಮ ಸ್ನೇಹಿತೆಯೊಂದಿಗೆ ಪೋಸ್ ನೀಡಿದ್ದಾರೆ. ಅಲ್ಲದೇ ವಿಧ ವಿಧ ಭಂಗಿಯಲ್ಲಿ ಪಾಪರಾಜಿಗಳ ಕ್ಯಾಮೆರಾಗಳ ಮುಂದೆ ರಾಖಿ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ಪಾಪರಾಜಿಯೊಬ್ಬರು ‘ನೀವು ನೋರಾ ಫತೇಹಿಯನ್ನೂ ಮೀರಿಸಿದ್ದೀರಿ’ ಎಂದು ಶಹಬ್ಬಾಸ್​ಗಿರಿ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಾಖಿ, ‘ಆದರೆ ನನಗೆ ನೋರಾರನ್ನು ಕಂಡರೆ ಇಷ್ಟ’ ಎಂದು ಮರುಪ್ರತಿಕ್ರಿಯೆ ನೀಡಿದ್ದಾರೆ.

ರಾಖಿ ಕ್ಯಾಮೆರಾಗಳಿಗೆ ಪೋಸ್ ನೀಡಿದ ನಂತರ ಪಾಪರಾಜಿಗಳು ಮತ್ತಷ್ಟು ಫೋಟೋಗಾಗಿ ಅವರನ್ನು ಮುತ್ತಿಕೊಂಡಿದ್ದಾರೆ. ಈ ವೇಳೆ ರಾಖಿ ಎಲ್ಲರನ್ನೂ ಬದಿಗೆ ಸರಿಯಲು ಹೇಳಿದ್ದಲ್ಲದೇ ಹೆಚ್ಚು ಕಡಿಮೆಯಾದರೆ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಖಡಕ್ ಆಗಿ ನುಡಿದಿದ್ದಾರೆ. ಸುತ್ತ ನೆರೆದಿರುವ ಪಾಪರಾಜಿಗಳಿಗೆ ರಾಖಿ, ‘‘ಯಾರಾದರೂ ನನ್ನನ್ನು ಮುಟ್ಟಿದರೆ ಅಬವರ ಮೇಲೆ 500 ಕೋಟಿ ರೂಗಳ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’’ ಎಂದು ಆವಾಜ್ ಹಾಕಿದ್ದಾರೆ. ಸದ್ಯ ರಾಖಿ ಮಾತು ವೈರಲ್ ಆಗಿದೆ.

ರಾಖಿ ಫೋಟೋಗೆ ಪೋಸ್ ನೀಡಿದ್ದು ಹಾಗೂ ಆವಾಜ್ ಹಾಕಿರುವ ವಿಡಿಯೋ ಇಲ್ಲಿದೆ:

View this post on Instagram

A post shared by Filmozo (@filmozo)

ರಾಖಿ ಸಾವಂತ್​ಗೆ ಈಗ 43 ವರ್ಷ ವಯಸ್ಸು. ಕಿರುತೆರೆಯಲ್ಲೂ ಸಕ್ರಿಯವಾಗಿರುವ ಅವರು, ಹಲವು ಶೋಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿಯನ್ನೂ ಹೊಂದಿದ್ದಾರೆ. ರಾಖಿ ಚಿತ್ರಗಳಲ್ಲಿ ನಟಿಸಿದ್ದು 2019ರಲ್ಲೇ ಕೊನೆ. ಆದರೆ ನಂತರದಲ್ಲೂ ಅವರು ಹಲವು ಚಿತ್ರಗಳ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಮ್ಯೂಸಿಕ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೆಚ್ಚಾಗಿ ಕಿರುತೆರೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಖಿ ಕನ್ನಡ ಚಿತ್ರದ ಹಾಡೊಂದರಲ್ಲೂ ಹೆಜ್ಜೆ ಹಾಕಿ ಜನರ ಮನಸೂರೆಗೊಂಡಿದ್ದರು. ‘ಗೆಳೆಯ’ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಜತೆ ‘ನನ್ನ ಸ್ಟೈಲು ಬೇರೆನೆ’ ಎಂದು ಅವರು ಮಸ್ತ್ ಹೆಜ್ಜೆ ಹಾಕಿದ್ದರು.

ಇದನ್ನೂ ಓದಿ:

ಪತ್ರಕರ್ತರಿಗೆ ಖಡಕ್​ ತಿರುಗೇಟು ಕೊಟ್ಟ ಕಂಗನಾ; ದೀಪಿಕಾ ಬಟ್ಟೆ ಬಗ್ಗೆ ಮಾತಾಡಲು ಬಂದವರು ಗಪ್​ಚುಪ್​

ಶಾರುಖ್​ ನಟನೆಯ ‘ಪಠಾಣ್​’ ರಿಲೀಸ್ ​ಡೇಟ್​ ಬಗ್ಗೆ ಹೊಸ ಅಪ್​ಡೇಟ್​ ನೀಡಿದ ದೀಪಿಕಾ ಪಡುಕೋಣೆ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ