Bhargavi Narayan Birthday : ‘ಯಾವ ರೈಲು ಹೇಗೆ ಹೋಗುವುದು ಗೊತ್ತಿಲ್ಲ, ನಾವೈದೂ ಹೆಣ್ಣುಮಕ್ಕಳು ಹತ್ತಿಬಿಟ್ಟೆವು!’

Artist : ‘ಅಮ್ಮ ಯಾವಾಗಲೂ ಹೇಳುವುದು, ಯಾವುದೇ ಕಾರಣಕ್ಕೋ ನಗುವನ್ನು ಮಾತ್ರ ಅಳಿಸದಿರಿ. ಕಷ್ಟಗಳು, ದುರಂತಗಳು ಜೀವನ ಅಂದ ಮೇಲೆ ಬಂದು ಹೋಗುವುದು ಸಹಜ. ಅದು ನಮ್ಮ ನಗುವನ್ನು ಕುಗ್ಗಿಸಬಾರದು. ಬರೆವಣಿಗೆ, ನಾಟಕ, ಧಾರಾವಾಹಿ, ಸಿನೆಮಾ ಇತ್ಯಾದಿ ಎಲ್ಲದಕ್ಕೂ ಅಮ್ಮನ ಹತ್ತಿರ ಸಮಯ ಇತ್ತು.’ ಸುಧಾ ಬೆಳವಾಡಿ

Bhargavi Narayan Birthday : ‘ಯಾವ ರೈಲು ಹೇಗೆ ಹೋಗುವುದು ಗೊತ್ತಿಲ್ಲ, ನಾವೈದೂ ಹೆಣ್ಣುಮಕ್ಕಳು ಹತ್ತಿಬಿಟ್ಟೆವು!’
ಮಗಳು ಸುಧಾ ಬೆಳವಾಡಿ ಮೊಮ್ಮಗಳು ಸಂಯುಕ್ತಾ ಹೊರನಾಡ ಜೊತೆ ಭಾರ್ಗವಿ ನಾರಾಯಣ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Feb 04, 2022 | 1:48 PM

ಭಾರ್ಗವಿ ನಾರಾಯಣ | Bhargavi Narayan : ಕಾಸಗಲ ಬೊಟ್ಟು, ದಿಟ್ಟ ಹೆಜ್ಜೆ, ನಡಿಗೆಯಲ್ಲಿ ಆತ್ಮವಿಶ್ವಾಸ, ಮಾತು ನೇರ. ಅಮ್ಮ ಅಂದರೆ ಕಣ್ಣ ಮುಂದೆ ಬರುವ ಚಿತ್ರ. ಅಜ್ಜಿ, ತಾತ, ಅಜ್ಜಿ ಸೋದರ ಅತ್ತೆ ಇವರೆಲ್ಲ ನನ್ನ ಮನೆಯಲ್ಲೇ ಇದ್ದರು. ಅಮ್ಮ ಎಲ್ಲವನ್ನೂ, ಎಲ್ಲರನ್ನೂ ನಿಭಾಯಿಸಿ, ಕೆಲಸಕ್ಕೆ ಹೋಗಿ ಬಂದವರನ್ನು ಉಪಚರಿಸಿಸುತ್ತಿದ್ದರು. ಹೀಗಾಗಿ ಮನೆಯಲ್ಲಿ ನಿತ್ಯ ಜನವೋ ಜನ. ಅಣ್ಣ ಅಂದರೆ ನಮ್ಮಪ್ಪ. ಅವರನ್ನು ಭೇಟಿ ಮಾಡಲು ಯಾವಾಗಲೂ ನಮ್ಮ ಮನೆಯಲ್ಲಿ ಅತಿಥಿಗಳು ಬರುತ್ತಿದ್ದರು. ಎಲ್ಲ ಹಬ್ಬವನ್ನು ಅಮ್ಮ ತಪ್ಪದೇ ಆಚರಿಸುತ್ತಿದ್ದರು. ಈಗಲೂ ಅಷ್ಟೇ. ಹಬ್ಬ ಅಂದರೆ ಅಮ್ಮನ ಮನೆ. ಅಲ್ಲಿಯ ಹರಟೆ, ನಗು, ಗಲಾಟೆ. ಅಮ್ಮ ಯಾವಾಗಲೂ ಹೇಳುವುದು, ಯಾವುದೇ ಕಾರಣಕ್ಕೋ ನಗುವನ್ನು ಮಾತ್ರ ಅಳಿಸದಿರಿ. ಕಷ್ಟಗಳು, ದುರಂತಗಳು ಜೀವನ ಅಂದ ಮೇಲೆ ಬಂದು ಹೋಗುವುದು ಸಹಜ. ಅದು ನಮ್ಮ ನಗುವನ್ನು ಕುಗ್ಗಿಸಬಾರದು. ಬರೆವಣಿಗೆ, ನಾಟಕ, ಧಾರಾವಾಹಿ, ಸಿನೆಮಾ ಇತ್ಯಾದಿ ಎಲ್ಲದಕ್ಕೂ ಅಮ್ಮನ ಹತ್ತಿರ ಸಮಯ ಇತ್ತು. ಇದರ ಮಧ್ಯೆ ಮೊಮ್ಮಕ್ಕಳ ಪಾಲನೆ ಪೋಷಣೆ ನನ್ನ ಮಕ್ಕಳನ್ನು ಅಮ್ಮನೇ ಬೆಳೆಸಿದ್ದು.

ಸುಧಾ ಬೆಳವಾಡಿ, ನಟಿ (Sudha Belavadi)

ಬೆಳಗ್ಗೆ ನಾನು ಆಫೀಸ್ ಅಥವಾ ಶೂಟಿಂಗ್ ಗೆ ಹೋದರೆ ನಾ ಬರುವವರೆಗೂ ಅಮ್ಮನೇ ನೋಡಿಕೊಳ್ಳುತ್ತಾ ಇದ್ದರು. ತುಂಬಾ ಆತ್ಮೀಯತೆಯಿಂದ ಪ್ರೀತಿಯಿಂದ ಮಕ್ಕಳನ್ನು ಬೆಳೆಸಿದರು. ನಾನು ಜೋರಾಗಿ ಮಾತಾಡಿದರೂ ಅಮ್ಮ ಮಕ್ಕಳ ಹತ್ತಿರ ನಯವಾಗಿ ಮಾತಾಡು ಅನ್ನುತ್ತಿದ್ದರು. ಈವತ್ತು ಅವರ 84ನೇ ಹುಟ್ಟುಹಬ್ಬ. ಸ್ವಲ್ಪ ಮರೆವು. ದೇಹ ದುರ್ಬಲವಾಗಿದೆ. ಆದರೆ ನಗು ಮಾಸಿಲ್ಲ. ಒಂದು ಪುಟ್ಟ  ಮಗುವಿನಂತೆ ಕಾಣುತ್ತಾರೆ. ಅಮ್ಮನ ಜೀವನೋತ್ಸಾಹದಲ್ಲಿ ಅರ್ಧದಷ್ಟು ನಮಗೆ ದೇವರು ಕೊಟ್ಟರೆ ಸಾಕು. ಅವರ ಕಲೆಯ ಬಗ್ಗೆ ಆಸಕ್ತಿ, ಅವರ ಸಾಹಿತ್ಯದ ಒಲವು, ಸಂಗೀತದ ಪ್ರೀತಿ ಎಲ್ಲವೂ ಅಪಾರ. ಹೆಣ್ಣುಮಕ್ಕಳೆಂದರೆ ತುಂಬಾ ಅನುಕಂಪ. ಮನೆ ಮುಂದೆ ಯಾರಾದರೂ ಬಡ ಹೆಂಗಸು ಬಂದರೆ ಒಳ್ಳೆ ರೇಷ್ಮೆ ಸೀರೆ, ಕುಂಕುಮ ಕೊಟ್ಟು ಕಳಿಸುತ್ತಿದ್ದರು. ತುಂಬಾ ಧಾರಾಳ. ಎಷ್ಟು ಹೊಗಳಿದರೂ ಅಮ್ಮನ ಬಗ್ಗೆ ಸಾಲದು. ಅಂಥಾ ಅಮ್ಮನನ್ನು ಪಡೆದ ನಾವು ಭಾಗ್ಯವಂತರು.

‘ನಾನು ಭಾರ್ಗವಿ’ (ಆತ್ಮಕಥನದ ಆಯ್ದ ಭಾಗ)

ಭಾಗ – 1

ನಮ್ಮ ಪದ್ಮ ಚಿಕ್ಕಮ್ಮನ ಮಗ ಶೇಷಾದ್ರಿ ಮದುವೆಗೆ ನಾವೆಲ್ಲಾ ಪುದುಕೋಟೆಯ ಹತ್ತಿರದ ಒಂದು ಹಳ್ಳಿಗೆ ಹೋಗಿದ್ದೆವು – 1965ರಲ್ಲಿ. ನಮ್ಮ ಶೇಷ ಮದುವೆ ಆದ ಒಂದೆರಡು ವರ್ಷದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದ. ಅವನ ಹೆಂಡತಿ, ಮಗು ಕೌಲಾಲಂಪೂರ್​ನಲ್ಲಿ ಉಳಿದುಕೊಂಡರೆಂದು ಕಾಣುತ್ತದೆ.

ಚಿಕ್ಕಮ್ಮನ ಮಗಳು ಕೌಸಲ್ಯ ತಿರುಚಿನಾಪಳ್ಳಿಯ ನಾಗರಾಜ ಅವರನ್ನು ಮದುವೆಯಾಗಿ ಅಲ್ಲೇ ಕೌಲಾಲಂಪೂರಿನಲ್ಲಿ ಇದ್ದವಳು 1980ರ ಆಸುಪಾಸಿಗೆ ತಿರುಚಿನಾಪಳ್ಳಿಗೇ ಗಂಡ ಮಕ್ಕಳೊಡನೆ ಬಂದುಬಿಟ್ಟಳು. ತಾನು ಬರುವಾಗ ಇನ್ನೂ ಮದುವೆಯಾಗದ ತಂಗಿ ರಾಧ ಮತ್ತು ರಾಮಚಂದ್ರರನ್ನು ಜೊತೆಯಲ್ಲಿ ಕರೆತಂದಿದ್ದಳು.

Kannada Actress Bhargavi Narayan Birthday Daughter Sudha Belavadi penned memories skvd

ಭಾರ್ಗವಿಯವರ ಕುಟುಂಬ

ನಾನು ಸುಜಾತ, ಚಿಂತಾ, ಲೀಲಾ, ಅನು, ಅಪರ್ಣ ಎಲ್ಲ ಹೋಗಿದ್ದೆವು ತಿರುಚಿನಾಪಳ್ಳಿಗೆ ರಾಧಾಳ ಮದುವೆಗೆ ಮತ್ತೆ ನಾವು ತಿರುಚಿನಾಪಳ್ಳಿಗೆ ಹೋಗಿದ್ದು ಕೌಸಲ್ಯಳ ಮಗಳು ಶೀಲಾಳ ಮದುವೆಗೆ. ಆ ವೇಳೆಗೆ ಚಿಂತೆ ಇರಲಿಲ್ಲ. ನಾನೂ, ಲೀಲಾ ಸುಧಾ, ಅನು ಹೋಗಿದ್ದೆವು. ಅಪರ್ಣ ಬರಲಿಲ್ಲ. ಅವರ ಮನೆ ನಾಯಿ ಟೈಗರ್ ಜೊತೆ ಯಾರಾದರೂ ಮನೆಯವರು ಇರಬೇಕಿತ್ತು. ಚಿಂತ ತಾನು ಹೋಗುವ ಸ್ವಲ್ಪ ದಿನಗಳ ಮೊದಲು ಮಗಳಿಗೆ ಒಂದು ಆಲ್ಸೆಷನ್  ಮರಿಯನ್ನು ತಂದುಕೊಟ್ಟಿದ್ದ. ಬಹಳ ಕೋಪಿಷ್ಠ ಮುಂಡೇದು ಅದು. ಅದರ ಸಲುವಾಗಿ ಅಪರ್ಣ ನಿಂತಳು ಬೆಂಗಳೂರಿನಲ್ಲಿ ಜೊತೆಯಲ್ಲಿ ರಂಗಣ್ಣ ಇದ್ದರು.

ನಾವು ಈ ಬಾರಿ ತಿರುಚಿನಾಪಳ್ಳಿಗೆ ಹೋದವರು ಸುಮ್ಮನೆ ಗಂಭೀರವಾಗಿ ಮದುವೆ ಮುಗಿಸಿಕೊಂಡು ಬೆಂಗಳೂರಿಗೆ ಬರಲಿಲ್ಲ. ನಮ್ಮ ಚಿಕ್ಕಮ್ಮ ಸುಗುಣಳ ಮಗಳು ವಸುಂಧರಾ ಅವನ ಮಗನ ಜೊತೆ ಮದುವೆಗೆ ಬಂದಿದ್ದಳು. ಅವಳನ್ನು ನಾವೆಲ್ಲಾ ನನ್ನ ಮೊದಲ L.T.C. ಸೌಲಭ್ಯ ಉಪಯೋಗಿಸಿಕೊಂಡು ದೆಹಲಿಗೆ ಹೋದಾಗ ನೋಡಿದ್ದು. ಆಗ ಅವಳ ಮಗ ಒಂದು ವರ್ಷದವನು. ಈಗ 10-11 ವರ್ಷದ ಹುಡುಗ. ಮದುವೆ ಮುಗಿದಿತ್ತು. ನನಗೆ ಇನ್ನೂ ಒಂದೆರಡು ದಿನಗಳ ರಜವಿತ್ತು. ಮದುವೆಯ ಮರುದಿನ ತಿಂಡಿ-ತೀರ್ಥ ಮುಗಿದ ಮೇಲೆ ಇದ್ದಕ್ಕಿದ್ದಂತೆ brain-wave ಕನ್ಯಾಕುಮಾರಿಗೆ ಏಕೆ ಹೋಗಿ ಬರಬಾರದು ಎಂದು. ಸರಿ, ಕೌಸಲ್ಯನಿಗೆ ಹೇಳಿ ಹೊರಟುಬಿಟ್ಟೆವು. ಯಾವ ರೈಲು, ಹೇಗೆ ಹೋಗುವುದು, ಏನೂ ಗೊತ್ತಿಲ್ಲ. ನಾವು 5 ಮಂದಿ ಹೆಂಗಳೆಯರು ಜೊತೆಗೆ 10 ವರ್ಷದ ಗಂಡುಹುಡುಗ.

(ಮುಂದಿನ ಭಾಗದಲ್ಲಿ ನಿರೀಕ್ಷಿಸಿ)

ಭಾರ್ಗವಿಯವರು ಬರೆದ ಈ ಪುಸ್ತಕದ ಆಯ್ದ ಭಾಗ ಓದಿ :  Television Presenter : ನಾ. ಸೋಮೇಶ್ವರರು ಇಂದಿಗೂ ಜೋಪಾನವಾಗಿಟ್ಟುಕೊಂಡ ಆ ಪುಸ್ತಕ? ಥಟ್ ಅಂತ ಹೇಳಿ!

Published On - 12:56 pm, Fri, 4 February 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್