ದರ್ಶನ್ ಸ್ಟೈಲ್ ಕಾಪಿ ಮಾಡಿದ ರಕ್ಷಕ್ ಬುಲೆಟ್; ರಚಿತಾ ರಾಮ್ ಫುಲ್ ಫಿದಾ

ರಕ್ಷಕ್ ಬುಲೆಟ್, ಬುಲೆಟ್ ಪ್ರಕಾಶ್ ಅವರ ಪುತ್ರ, 'ಭರ್ಜರಿ ಬ್ಯಾಚುಲರ್ಸ್ ಸೀಸನ್ 2' ರಲ್ಲಿ ದರ್ಶನ್ ಅವರ 'ಬುಲ್ ಬುಲ್' ಸಿನಿಮಾದ ಶೈಲಿಯನ್ನು ಅನುಕರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ರಚಿತಾ ರಾಮ್ ಅವರನ್ನು ಸಹ ಖುಷಿಪಡಿಸಿದೆ. ರಕ್ಷಕ್ ತಮ್ಮ ತಂದೆಯನ್ನು ಕಳೆದುಕೊಂಡ ಬೇಸರವನ್ನು ಹಂಚಿಕೊಂಡಿದ್ದಾರೆ, ತಂದೆ ತಮ್ಮ ನಟನೆಯನ್ನು ನೋಡದಿರುವುದು ಅವರಿಗೆ ಬೇಸರವಾಗಿದೆ ಎಂದು ಹೇಳಿದ್ದಾರೆ.

ದರ್ಶನ್ ಸ್ಟೈಲ್ ಕಾಪಿ ಮಾಡಿದ ರಕ್ಷಕ್ ಬುಲೆಟ್; ರಚಿತಾ ರಾಮ್ ಫುಲ್ ಫಿದಾ
ದರ್ಶನ್ ಸ್ಟೈಲ್ ಕಾಪಿ ಮಾಡಿದ ರಕ್ಷಕ್ ಬುಲೆಟ್; ರಚಿತಾ ರಾಮ್ ಫುಲ್ ಫಿದಾ
Edited By:

Updated on: Mar 12, 2025 | 8:11 AM

ನಟ ದರ್ಶನ್ ಅವರು ‘ಬುಲ್ ಬುಲ್’ ಸಿನಿಮಾ ಮಾಡಿದ್ದರು. ಈ ಚಿತ್ರದಲ್ಲಿ ರಚಿತಾ ರಾಮ್ (Rachita Ram) ಅವರು ದರ್ಶನ್​ಗೆ ಜೊತೆಯಾಗಿದ್ದರು. ಈ ಚಿತ್ರ ರಚಿತಾ ರಾಮ್ ಪಾಲಿಗೆ ಈಗಲೂ ವಿಶೇಷ. ಈಗ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ದರ್ಶನ್ ಅವರ ಸ್ಟೈಲ್​ನ ರಕ್ಷಕ್ ಬುಲೆಟ್ ಅವರು ಕಾಪಿ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ರಕ್ಷಕ್ ಬುಲೆಟ್ ಅವರು ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಮಗ. ಈ ಕಾರಣಕ್ಕೆ ಚಿತ್ರರಂಗದಲ್ಲಿ ಅವರಿಗೆ ಅವಕಾಶ ಸಿಗುತ್ತಿದೆ. ಆದರೆ ಅವರು ನಡೆದುಕೊಳ್ಳುವ ರೀತಿಗೆ ಅನೇಕ ಬಾರಿ ಟ್ರೋಲ್ ಆಗಿದ್ದೂ ಇದೆ. ರಕ್ಷಕ್ ಬುಲೆಟ್ ಅವರು ತಮ್ಮ ಇಮೇಜ್​ನ ಪಾಸಿಟಿವ್ ಆಗಿ ಬದಲಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗುತ್ತಿಲ್ಲ. ಈಗ ರಕ್ಷಕ್ ಬುಲೆಟ್ ಅವರು ದರ್ಶನ್ ಸ್ಟೈಲ್​ನ ಯಥಾವತ್ತು ಕಾಪಿ ಮಾಡಿದ್ದಾರೆ.

ಇದನ್ನೂ ಓದಿ
ಸುಮಲತಾ-ದರ್ಶನ್ ಮಧ್ಯೆ ಬಿರುಕು? ಈ ಬೆಳವಣಿಗೆ ನೋಡಿದ್ರೆ ನೀವೂ ಒಪ್ತೀರಿ
ಅಕ್ಕನ ಮಗನನ್ನೇ ‘ಡೆವಿಲ್’ ಚಿತ್ರದಿಂದ ಹೊರಗಿಟ್ಟ ದರ್ಶನ್; ಕಾರಣ ನೀಡಿದ ನಟ
ಚಂದನ್ ಶೆಟ್ಟಿ ಜೊತೆ ಮತ್ತೆ ಬಾಳುತ್ತೀರಾ? ನೇರವಾಗಿ ಉತ್ತರ ನೀಡಿದ ನಿವೇದಿತಾ
ಮತ್ತೆ ಚಂದನ್ ಶೆಟ್ಟಿ ತಬ್ಬಿಕೊಂಡು ಕಣ್ಣೀರು ಹಾಕಿದ ನಿವೇದಿತಾ ಗೌಡ

ರಕ್ಷಕ್ ಬುಲೆಟ್ ಹಾಗೂ ರಮೋಲಾ ‘ಭರ್ಜರಿ ಬ್ಯಾಚುಲರ್ಸ್ 2’ ವೇದಿಕೆ ಮೇಲೆ ಒಂದಾಗಿದ್ದಾರೆ. ದರ್ಶನ್ ಸಿನಿಮಾದ ದೃಶ್ಯವನ್ನು ಮರುಸೃಷ್ಟಿ ಮಾಡಲಾಗಿದೆ. ಈ ದೃಶ್ಯ ನೋಡಿ ರಚಿತಾ ರಾಮ್ ಖುಷಿಪಟ್ಟರು. ‘ಸತ್ಯವಾಗಲೂ ಸಿನಿಮಾ ನೋಡಿದ ಹಾಗೆಯೇ ಇತ್ತು’ ಎಂದು ಬಾಯ್ತುಂಬ ಹೊಗಳಿದರು ರಚಿತಾ ರಾಮ್. ಖುಷಿ ಆಯ್ತು ಎಂದು ರವಿಚಂದ್ರನ್ ಕೂಡ ಹೇಳಿದರು.

ಇದನ್ನೂ ಓದಿ: ರಕ್ಷಕ್​ಗೆ ಯಾಕೆ ಹೀಗೆಲ್ಲ ಆಗುತ್ತೆ? ವೇದಿಕೆ ಮೇಲೆ ಮುಜುಗರ ಅನುಭವಿಸಿದ ನಟ

ರಕ್ಷಕ್ ಹೀರೋ ಆಗುವ ಮೊದಲೇ ಬುಲೆಟ್ ಪ್ರಕಾಶ್ ನಿಧನ ಹೊಂದಿದರು. ಈ ವಿಚಾರದಲ್ಲಿ ಅವರಿಗೆ ಬೇಸರ ಇದೆ. ತಂದೆ ನನ್ನ ನಟನೆ ನೋಡಿಲ್ಲವಲ್ಲ ಎನ್ನುವ ಕೊರಗು ಕೊನೆಯವರೆಗೂ ಅವರಿಗೆ ಇರಲಿದೆ. ‘ಈ ಸ್ಟುಡಿಯೋಗೆ ಅಪ್ಪನ ಜೊತೆ ಬರುತ್ತಿದ್ದೆ. ಆದರೆ, ನನ್ನ ಸ್ಟೇಜ್ ಪರ್ಫಾರ್ಮೆನ್ಸ್ ನೋಡೋಕೆ ಅವರು ಇಲ್ಲ ಎಂಬ ವಿಚಾರ ನನಗೆ ದುಃಖ ತಂದಿದೆ’ ಎಂದು ಬೇಸರದಿಂದ ರಕ್ಷಕ್ ಹೇಳಿಕೊಂಡು ಕಣ್ಣೀರು ಹಾಕಿದರು. ಅವರನ್ನು ಸಮಾಧಾನ ಮಾಡುವ ಕೆಲಸವೂ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.