ರಕ್ಷಕ್ಗೆ ಯಾಕೆ ಹೀಗೆಲ್ಲ ಆಗುತ್ತೆ? ವೇದಿಕೆ ಮೇಲೆ ಮುಜುಗರ ಅನುಭವಿಸಿದ ನಟ
ಜೀ ಕನ್ನಡದ ರಿಯಾಲಿಟಿ ಶೋ 'ಭರ್ಜರಿ ಬ್ಯಾಚುಲರ್ಸ್ 2' ರಲ್ಲಿ ರಕ್ಷಕ್ ಬುಲೆಟ್ ಅವರ ಹೆಸರನ್ನು ರಮೋಲಾ ತಪ್ಪಾಗಿ 'ರಕ್ಷಿತ್' ಎಂದು ಕರೆದಿದ್ದಾರೆ. ಇದರಿಂದ ರಕ್ಷಕ್ ಮುಜುಗರಕ್ಕೀಡಾಗಿದ್ದಾರೆ. ಆ್ಯಂಕರ್ ನಿರಂಜನ್ ದೇಶಪಾಂಡೆ ಅವರು ರಮೋಲಾ ತಪ್ಪನ್ನು ಸರಿಪಡಿಸಿದರು. ಈ ಶೋನಲ್ಲಿ ರಕ್ಷಕ್ ಗ್ರೂಮಿಂಗ್ ಸೆಷನ್‌ನಲ್ಲೂ ಭಾಗವಹಿಸಿ, ಹೊಸ ಗೆಟಪ್ನಲ್ಲಿ ಬಂದಿದ್ದಾರೆ.

ರಕ್ಷಕ್ ಬುಲೆಟ್ ಅವರು ಹಿರಿಯ ನಟ, ಕಾಮಿಡಿಯನ್ ಬುಲೆಟ್ ಪ್ರಕಾಶ್ ಅವರ ಮಗ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ರಕ್ಷಕ್ ಅವರು ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. ಅವರು ಸಾಕಷ್ಟು ಟ್ರೋಲ್ ಕೂಡ ಆಗಿದ್ದಾರೆ. ಇದಕ್ಕೆ ಕಾರಣ ಆಗೋದು ಅವರ ನಡೆ. ಸುಖಾಸುಮ್ಮನೆ ಬಿಲ್ಡಪ್ ಕೊಡೋಕೆ ಹೋಗಿ ಅವರು ಟೀಕೆ ಎದುರಿಸಿದ ಉದಾಹರಣೆಯೂ ಇದೆ. ಈಗ ಜೀ ಕನ್ನಡ ವೇದಿಕೆ ಮೇಲೆ ಅವರಿಗೆ ಮುಜುಗರ ಆಗುವಂಥ ಘಟನೆಯೊಂದು ನಡೆದಿದೆ.
ಜೀ ಕನ್ನಡದಲ್ಲಿ ‘ಭರ್ಜರಿ ಬ್ಯಾಚುಲರ್ಸ್’ ಹೆಸರಿನ ರಿಯಾಲಿಟಿ ಶೋನ ಎರಡನೇ ಸೀಸನ್ ಆರಂಭ ಆಗಿದೆ. ಇದರಲ್ಲಿ ಡ್ರೋನ್ ಪ್ರತಾಪ್, ಪವಿ ಪೂವಪ್ಪ, ರಕ್ಷಕ್ ಬುಲೆಟ್ ಮೊದಲಾದವರು ಭಾಗಿ ಆಗಿದ್ದಾರೆ. ರಕ್ಷಕ್ ಬುಲೆಟ್ ಅವರಿಗೆ ರಮೋಲಾ ಜೊತೆಯಾಗಿದ್ದಾರೆ. ಅವರು ವೇದಿಕೆ ಮೇಲೆ ರಕ್ಷಕ್ ಹೆಸರನ್ನು ತಪ್ಪಾಗಿ ಹೇಳಿದ್ದಾರೆ.
ರಮೋಲಾಗೆ ರಕ್ಷಕ್ ಜೊತೆಯಾಗಿದ್ದಾರೆ. ರಕ್ಷಕ್ ಎನ್ನುವ ಬದಲು ರಕ್ಷಿತ್ ಎಂದು ಕರೆದಿದ್ದಾರೆ ರಮೋಲಾ. ಆಗ ಆ್ಯಂಕರ್ ನಿರಂಜನ್ ದೇಶಪಾಂಡೆ ಅವರು ರಮೋಲಾ ತಪ್ಪನ್ನು ಹೇಳಿದರು. ಇದರಿಂದ ರಕ್ಷಕ್ ಅವರು ಮುಜುಗರಕ್ಕೆ ಒಳಗಾದರು. ನನ್ನ ಬಗ್ಗೆ ಎಲ್ಲರಿಗೂ ಗೊತ್ತು, ನಾನು ಎಂದರೆ ಇಡೀ ಕರ್ನಾಟಕ ಗುರುತಿಸುತ್ತದೆ ಎಂದೆಲ್ಲ ರಕ್ಷಕ್ ಅವರು ಈ ಮೊದಲು ಹೇಳಿಕೊಂಡಿದ್ದರು. ಆದರೆ, ಅವರ ಹೆಸರನ್ನು ಈಗ ತಪ್ಪಾಗಿ ಹೇಳಲಾಗಿದೆ.
View this post on Instagram
ರಕ್ಷಕ್ ಅವರಿಗೆ ಗ್ರೂಮಿಂಗ್ ಸೆಷನ್ ಕೂಡ ನಡೆದಿದೆ. ಈ ಮೂಲಕ ರಕ್ಷಕ್ ಅವರು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ಷಕ್ ಅವರ ಬಗ್ಗೆ ಎಷ್ಟೇ ಟ್ರೋಲ್ ಆದರೂ ಅವರು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅವರು ತಮ್ಮ ಕೆಲಸ ಮುಂದುವರಿಸಿದ್ದಾರೆ. ಹೊಸ ಹೊಸ ಸಿನಿಮಾಗಳನ್ನು ಮಾಡೋದಾಗಿಯೂ ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಇನ್ನು, ‘ಭರ್ಜರಿ ಬ್ಯಾಚುಲರ್ಸ್ 2’ ಬಗ್ಗೆ ಹೇಳೋದಾದರೆ ಕೆಲ ವರ್ಷಗಳ ಹಿಂದೆ ‘ಭರ್ಜರಿ ಬ್ಯಾಚುಲರ್ಸ್’ ಬಂದು ಯಶಸ್ಸು ಕಂಡಿತ್ತು. ಈ ಕಾರಣಕ್ಕೆ ಇದಕ್ಕೆ ಎರಡನೇ ಸೀಸನ್ ಆರಂಭಿಸಲಾಗಿದೆ. ರಚಿತಾ ರಾಮ್ ಹಾಗೂ ರವಿಚಂದ್ರನ್ ಅವರು ಇದಕ್ಕೆ ಜಡ್ಜ್ ಆಗಿದ್ದಾರೆ. ಈ ಶೋ ಯಾವ ರೀತಿಯಲ್ಲಿ ಮೂಡಿ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.