ಕನ್ನಡದ ಈ ಸ್ಟಾರ್ ನಟ ಯಾರೆಂದು ಗುರುತಿಸುತ್ತೀರಾ?

| Updated By: ರಾಜೇಶ್ ದುಗ್ಗುಮನೆ

Updated on: Sep 27, 2022 | 5:55 PM

ರಕ್ಷಿತ್ ಶೆಟ್ಟಿ ಅವರು ಯಾವುದೇ ಸಿನಿಮಾ ಹಿನ್ನೆಲೆ ಇದ್ದು ಚಿತ್ರರಂಗಕ್ಕೆ ಬಂದವರಲ್ಲ. ಸ್ವಂತ ಪ್ರಯತ್ನದೊಂದಿಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ನಟನೆ, ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಅವರು ಯಶಸ್ಸು ಕಂಡಿದ್ದಾರೆ.

ಕನ್ನಡದ ಈ ಸ್ಟಾರ್ ನಟ ಯಾರೆಂದು ಗುರುತಿಸುತ್ತೀರಾ?
ರಕ್ಷಿತ್
Follow us on

ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಅಭಿಮಾನಿಗಳಿಗೋಸ್ಕರ ಹಲವು ಫೋಟೋಗಳು ಹಂಚಿಕೊಳ್ಳುತ್ತಾರೆ. ತಮ್ಮ ದಿನನಿತ್ಯದ ಕೆಲಸಗಳ ಬಗ್ಗೆ ಅಪ್​ಡೇಟ್ ನೀಡೋಕೆ ಸೋಶಿಯಲ್ ಮೀಡಿಯಾವನ್ನು (Social Media) ಸೆಲೆಬ್ರಿಟಿಗಳು ಹೆಚ್ಚು ಬಳಕೆ ಮಾಡುತ್ತಾರೆ. ಅಭಿಮಾನಿಗಳು ಕೂಡ ನೆಚ್ಚಿನ ನಟ/ನಟಿ ಹೊಸ ಫೋಟೋ ಪೋಸ್ಟ್ ಮಾಡಲಿ ಎಂದು ಕಾಯುತ್ತಿರುತ್ತಾರೆ. ಅದರಲ್ಲೂ ಇವರು ಬಾಲ್ಯದ ಫೋಟೋಗಳನ್ನು ಪೋಸ್ಟ್ ಮಾಡಿದರೆ ಕ್ಷಣಮಾತ್ರದಲ್ಲಿ ಅದು ಫ್ಯಾನ್​ಪೇಜ್​ಗಳಲ್ಲಿ ವೈರಲ್ ಆಗುತ್ತದೆ. ಈಗ ರಕ್ಷಿತ್ ಶೆಟ್ಟಿ (Rakshit Shetty) ಅವರ ಬಾಲ್ಯದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ವತಃ ರಕ್ಷಿತ್ ಶೆಟ್ಟಿ ಅವರು ಈ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ರಕ್ಷಿತ್ ಶೆಟ್ಟಿ ಅವರು ಯಾವುದೇ ಸಿನಿಮಾ ಹಿನ್ನೆಲೆ ಇದ್ದು ಚಿತ್ರರಂಗಕ್ಕೆ ಬಂದವರಲ್ಲ. ಸ್ವಂತ ಪ್ರಯತ್ನದೊಂದಿಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ನಟನೆ, ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಅವರು ಯಶಸ್ಸು ಕಂಡಿದ್ದಾರೆ. ಬಾಲ್ಯ ಹೇಗಿತ್ತು ಎಂಬುದನ್ನು ರಕ್ಷಿತ್ ಅನೇಕ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಬಾಲ್ಯದಲ್ಲಿ ಹೇಗಿದ್ದೆ ಎಂಬುದನ್ನು ಈಗ ಅವರು ತೋರಿಸಿದ್ದಾರೆ. ಈ ಫೋಟೋಗೆ ಫ್ಯಾನ್ಸ್​ ಲೈಕ್ಸ್ ಒತ್ತುತ್ತಿದ್ದಾರೆ. ಅಲ್ಲದೆ, ತಮ್ಮ ಬಾಲ್ಯದ ಫೋಟೋಗಳನ್ನು ಕಮೆಂಟ್ ಬಾಕ್ಸ್​​ನಲ್ಲಿ ಹಾಕಿ ಸಂತಸ ಹೊರಹಾಕುತ್ತಿದ್ದಾರೆ.

ಇದನ್ನೂ ಓದಿ
‘777 ಚಾರ್ಲಿ’ ಸಿನಿಮಾದಲ್ಲಿ ಡಿಲೀಟ್ ಮಾಡಿದ್ದ ದೃಶ್ಯವನ್ನು ರಿಲೀಸ್ ಮಾಡಿದ ಟೀಂ; ಇಲ್ಲಿದೆ ವಿಡಿಯೋ
Rakshit Shetty: 150 ಕೋಟಿ ರೂ. ಗಳಿಸಿದ ‘777 ಚಾರ್ಲಿ’; ಪ್ರಾಣಿಗಳ ರಕ್ಷಣೆಗೆ ಶೇ.5ರಷ್ಟು ಹಣ ದೇಣಿಗೆ ನೀಡಿದ ರಕ್ಷಿತ್​ ಶೆಟ್ಟಿ
Rakshit Shetty: ‘777 ಚಾರ್ಲಿ’ ಸಿನಿಮಾಗೆ ಸೀಕ್ವೆಲ್​; ಪ್ಲ್ಯಾನ್ ಬಗ್ಗೆ ಮಾಹಿತಿ ನೀಡಿದ ರಕ್ಷಿತ್ ಶೆಟ್ಟಿ
ಮುದ್ದಿನ ಶ್ವಾನದೊಂದಿಗೆ 777 ಚಾರ್ಲಿ ಸಿನಿಮಾ ವೀಕ್ಷಿಸಿದ ಜನಾರ್ದನ ರೆಡ್ಡಿ; ವೈರಲ್ ವಿಡಿಯೋ ಇಲ್ಲಿದೆ

‘ರಕ್ಷಿತ್ ಬಾಲ್ಯದಲ್ಲಿ ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ‘ರಕ್ಷಿತ್ ಶೆಟ್ಟಿ ಎಷ್ಟೊಂದು ಹ್ಯಾಂಡ್ಸಮ್​’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಟ್ವಿಟರ್​ನಲ್ಲಿ ಸಾವಿರಾರು ಲೈಕ್ಸ್ ಪಡೆದುಕೊಂಡಿದೆ.

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ರಕ್ಷಿತ್ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಸೃಷ್ಟಿ ಆಗಿದೆ. ಇದಲ್ಲದೆ ಹಲವು ಸಿನಿಮಾಗಳನ್ನು ಅವರು ನಿರ್ಮಾಣ ಮಾಡುತ್ತಿದ್ದಾರೆ. ‘ರಿಚರ್ಡ್​ ಆ್ಯಂಟನಿ’ ಸಿನಿಮಾಗೆ ರಕ್ಷಿತ್ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ಸುಮಾರು 8 ವರ್ಷಗಳ ಗ್ಯಾಪ್​ನ ಬಳಿಕ ಅವರು ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಈ ಚಿತ್ರಕ್ಕಾಗಿಯೂ ಫ್ಯಾನ್ಸ್ ಕಾದಿದ್ದಾರೆ.

ಇದನ್ನೂ ಓದಿ: ‘777 ಚಾರ್ಲಿ’ ಗೆದ್ದ ಖುಷಿಯಲ್ಲಿ ರಕ್ಷಿತ್; ಥೈಲ್ಯಾಂಡ್​​ನಲ್ಲಿ ಟೀಂ ಜೊತೆ ಪಾರ್ಟಿ

ರಕ್ಷಿತ್ ನಿರ್ಮಿಸಿ ನಟಿಸಿದ್ದ ‘777 ಚಾರ್ಲಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ 150 ಕೋಟಿ ರೂಪಾಯಿಗೂ ಅಧಿಕ ಬಿಸ್ನೆಸ್ ಮಾಡಿದೆ. ಈ ಚಿತ್ರದಿಂದ ರಕ್ಷಿತ್ ಶೆಟ್ಟಿ ಅವರು ದೊಡ್ಡ ಲಾಭ ಕಂಡಿದ್ದಾರೆ. ಅವರು ಈ ಹಣವನ್ನು ಮತ್ತೆ ಸಿನಿಮಾ ನಿರ್ಮಾಣಕ್ಕೆ ಬಳಕೆ ಮಾಡುತ್ತಿದ್ದಾರೆ.

Published On - 2:42 pm, Tue, 27 September 22