‘ನೀವು ನನ್ನ ಅಣ್ಣನಾಗಲೂ ಅರ್ಹನೇ ಅಲ್ಲ’; ಸುದೀಪ್ ಎದುರೇ ಧ್ರುವಂತ್​ಗೆ ರಕ್ಷಿತಾ ಆವಾಜ್

ಬಿಗ್ ಬಾಸ್ ಕನ್ನಡ ಮನೆಯಲ್ಲಿ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ನಡುವೆ ತೀವ್ರ ವೈಮನಸ್ಸು ಏರ್ಪಟ್ಟಿದೆ. ಧ್ರುವಂತ್ ತಮ್ಮನ್ನು ಅನುಕರಿಸಿ ಟೀಕಿಸಿದ್ದಕ್ಕೆ ರಕ್ಷಿತಾ ಬೇಸರ ವ್ಯಕ್ತಪಡಿಸಿದ್ದಾರೆ. 'ನಂಬಿಸಿ ಮೋಸ ಮಾಡಿದವರು' ಟಾಸ್ಕ್‌ನಲ್ಲಿ, ರಕ್ಷಿತಾ ಧ್ರುವಂತ್ ಹೆಸರನ್ನು ತೆಗೆದುಕೊಂಡರು. ಮಲ್ಲಮ್ಮ ಎಲಿಮಿನೇಷನ್‌ಗೆ ಧ್ರುವಂತ್ 80% ಕಾರಣ ಎಂದು ಆರೋಪಿಸಿದರು.

‘ನೀವು ನನ್ನ ಅಣ್ಣನಾಗಲೂ ಅರ್ಹನೇ ಅಲ್ಲ’; ಸುದೀಪ್ ಎದುರೇ ಧ್ರುವಂತ್​ಗೆ ರಕ್ಷಿತಾ ಆವಾಜ್
ಬಿಗ್ ಬಾಸ್

Updated on: Nov 17, 2025 | 11:40 AM

ಬಿಗ್ ಬಾಸ್ (Bigg Boss) ಮನೆಯಲ್ಲಿ ಇಬ್ಬರು ಸ್ಪರ್ಧಿಗಳ ಮಧ್ಯೆ ಕಿತ್ತಾಟ ನಡೆಯೋದು ಸರ್ವೇ ಸಾಮಾನ್ಯ. ಅದೇ ರೀತಿ ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಮಧ್ಯೆ ವೈಮನಸ್ಸು ಮೂಡಿದೆ. ‘ಎಂತ ಗೊತ್ತುಂಟ ಗಯ್ಸ್’ ಎಂದು ರಕ್ಷಿತಾನ ಇಮಿಟೇಟ್ ಮಾಡಿ ಧ್ರುವಂತ್ ಅವರು ಟೀಕೆಗೆ ಒಳಗಾದರು. ಈ ವಿಷಯದಲ್ಲಿ ರಕ್ಷಿತಾಗೆ ಬೇಸರ ಇದೆ. ಅವರು ಈಗ ಧ್ರುವಂತ್ ಬಗ್ಗೆ ಮಾತನಾಡಿದ್ದಾರೆ.

ಭಾನುವಾರದ (ನವೆಂಬರ್ 16) ಎಪಿಸೋಡ್​ನಲ್ಲಿ ಸುದೀಪ್ ಒಂದು ಚಟುವಟಿಕೆ ನೀಡಿದರು. ‘ನಂಬಿಸಿ ಮೋಸ ಮಾಡಿದ್ರು’ ಎಂಬುದಕ್ಕೆ ಯಾರು ಹೆಚ್ಚು ಸೂಕ್ತ ಎಂಬುದಕ್ಕೆ ಸ್ಪರ್ಧಿಗಳು ಉತ್ತರಿಸಬೇಕಿತ್ತು. ಆಗ ರಕ್ಷಿತಾ ಅವರು ಧ್ರುವಂತ್ ಹೆಸರು ತೆಗೆದುಕೊಂಡರು. ಈ ವೇಳೆ ರಕ್ಷಿತಾ ಶೆಟ್ಟಿ ಆಡಿದ ಮಾತು ಸಾಕಷ್ಟು ಗಮನ ಸೆಳೆಯುವ ರೀತಿಯಲ್ಲಿ ಇತ್ತು.

‘ಜನರ ಬಳಿ ನಾನು ಮಾತನಾಡೋದೆ ಹಾಗೆ. ನಾನು ಯೂಟ್ಯೂಬ್ ಚಾನೆಲ್ ಓಪನ್ ಮಾಡಿ ಆರು ತಿಂಗಳಲ್ಲಿ ಬಿಗ್ ಬಾಸ್​ಗೆ ಬಂದಿದ್ದೇನೆ. ಅದು ನನ್ನ ತಾಕತ್ತು. ಅವರ ಹಾಗೆ ನಾನು ಇಲ್ಲ. ನನ್ನ ಹಾಗೆ ಅವರಿಲ್ಲ. ನಾನು ಯುನಿಕ್ ಎಂಬುದಕ್ಕೆ ನನಗೆ ಹೆಮ್ಮೆ ಇದೆ’ ಎಂದರು ರಕ್ಷಿತಾ ಶೆಟ್ಟಿ.

ಬಿಗ್ ಬಾಸ್ ರಕ್ಷಿತಾ ಮಾತು

‘ಮಲ್ಲಮ್ಮ ಹೊರಹೋಗಲು ಶೇ.80ರಷ್ಟು ಕಾರಣ ಧ್ರುವಂತ್. ಈ ಕಾರಣದಿಂದ ನಂಬಿಸಿ ಮೋಸ ಮಾಡಿದ್ರು ಎಂಬ ಟ್ಯಾಗ್​ನ ಧ್ರುವಣ್ಣಗೆ ಕೊಡ್ತೀನಿ’ ಎಂದು ರಕ್ಷಿತಾ ಹೇಳಿದರು. ಅಣ್ಣ ಎಂದು ಕರೆದಿದ್ದಕ್ಕೆ ಮರುಗಿದರು. ‘ನೀವು ನನ್ನ ಅಣ್ಣ ಆಗಲಿಕ್ಕೆ ಅರ್ಹರೇ ಅಲ್ಲ. ಹೀಗಾಗಿ, ಧ್ರುವ್ ಸರ್ ಎನ್ನುತ್ತೇನೆ’ ಎಂದು ರಕ್ಷಿತಾ ಶೆಟ್ಟಿ ಹೇಳಿದರು. ರಕ್ಷಿತಾ ಶೆಟ್ಟಿ ಅವರು ಆಡಿದ ಮಾತಿಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಅಷ್ಟೆಲ್ಲ ಬೆಂಬಲ ನೀಡಿದ ರಘುವನ್ನೇ ನಾಮಿನೇಟ್ ಮಾಡಿದ ರಕ್ಷಿತಾ ಶೆಟ್ಟಿ

ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಕಳೆದ ವಾರ ರಕ್ಷಿತಾಗೆ ಕ್ಲಾಸ್ ತೆಗೆದುಕೊಂಡಿದ್ದು ಅನೇಕರಿಗೆ ಇಷ್ಟ ಆಗಿಲ್ಲ. ‘ತಪ್ಪು ಮಾಡಿದ ಅನೇಕರು ಇದ್ದಾರೆ. ಆದರೆ, ರಕ್ಷಿತಾಗೆ ಮಾತ್ರ ಕ್ಲಾಸ್ ಯಾಕೆ’ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.