
‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBk 12) ಕಿರಿಯ ಸ್ಪರ್ಧಿ ಎಂದರೆ ಅದು ರಕ್ಷಿತಾ ಶೆಟ್ಟಿ. ಅವರಿಗೆ ಇನ್ನೂ 24 ವರ್ಷ. ದೊಡ್ಮನೆಯಲ್ಲಿ ಅಷ್ಟು ಕಿರಿಯ ಸ್ಪರ್ಧಿಗಳು ಈ ಸೀಸನ್ನಲ್ಲಿ ಯಾರೂ ಇಲ್ಲ. ಕೆಲವರು ಅವರ ವಯಸ್ಸು ಇನ್ನೂ ಸಣ್ಣದು ಎಂದು ಭಾವಿಸಿದ್ದರು. ಆದರೆ, ಕಳೆದ ವಾರ ವೇದಿಕೆ ಮೇಲೆ ಅವರು ತಮ್ಮ ವಯಸ್ಸನ್ನು ರಿವೀಲ್ ಮಾಡಿದರು. ಈಗ ಕಾವ್ಯಾ ಅವರು ರಕ್ಷಿತಾ ಶೆಟ್ಟಿ ಬಗ್ಗೆ ಅಪಸ್ವರ ತೆಗೆದಿದ್ದಾರೆ.
ಸ್ಪಂದನಾ ಹಾಗೂ ಕಾವ್ಯಾ ಅವರು ಎದುರುಬದುರು ಕುಳಿತು ಕೆಲವು ವಿಷಯಗಳನ್ನು ಚರ್ಚೆ ಮಾಡುತ್ತಿದ್ದರು. ಈ ವೇಳೆ ಸ್ಪಂದನಾ ಅವರು, ‘ರಕ್ಷಿತಾ ಮಾಡಿದ್ದು ಸರಿ ಎಂದು ನಿನಗೆ ಅನಿಸುತ್ತಿದೆಯೇ’ ಎಂದು ಕೇಳಿದರು. ಇದಕ್ಕೆ ಕಾವ್ಯಾ ಉತ್ತರಿಸಿದರು. ಅವರ ಮಾತುಗಳಲ್ಲಿ ಅಸಮಾಧಾನ ಸ್ಪಷ್ಟವಾಗಿ ಕಾಣಿಸುತ್ತಾ ಇತ್ತು.
‘ತಪ್ಪು ನಿರ್ಧಾರ ತೆಗೆದುಕೊಂಡಾಗ ಪ್ರಬುದ್ಧತೆ ಇಲ್ಲ ಪಾಪ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ, ಅವಳು ಸರಿಯಾದ ನಿರ್ಧಾರ ತೆಗೆದುಕೊಂಡಾಗ ಚಿಕ್ಕವಳಾದರೂ ಒಳ್ಳೆಯ ನಿರ್ಧಾರ ತೆಗೆದುಕೊಂಡಳು ಎಂದು ಆಗುತ್ತಿದೆ. ಈ ಕಾರಣಕ್ಕೆ ಅವಳು ಯಾರ ಬಳಿಯೂ ವಯಸ್ಸು ಹೇಳುತ್ತಾ ಇರಲಿಲ್ಲ. ಸುದೀಪ್ ಅವರು ಕೇಳಿದ ಮೇಲೆ ವಯಸ್ಸು ಹೇಳಿದಳು’ ಎಂದಿದ್ದಾರೆ ಕಾವ್ಯಾ.
‘ಎಲ್ಲಾ ಪರಿಸ್ಥಿತಿಗಳು ಅವಳ ಪರವಾಗಿಯೇ ಇದೆ’ ಎಂದರು ಕಾವ್ಯಾ. ‘ಅವಳು ಸ್ಟ್ರೆಟಜಿ ಮಾಡುತ್ತಿಲ್ಲ, ಹೊರಗೆ ಇರುವ ರೀತಿಯೇ ಇದ್ದಾಳೆ ಎಂದರೆ ನನಗೆ ನಂಬಲು ಸಾಧ್ಯವೇ ಆಗುತ್ತಿಲ್ಲ’ ಎಂದು ಸ್ಪಂದನಾ ಹೇಳಿದರು. ಈ ವಿಷಯ ವೀಕೆಂಡ್ನಲ್ಲಿ ಚರ್ಚೆಗೆ ಬರೋ ಸಾಧ್ಯತೆ ಇದೆ.
ಇದನ್ನೂ ಓದಿ: ವೀಕೆಂಡ್ನಲ್ಲಿ ಸುದೀಪ್ ಚರ್ಚೆ ಮಾಡಲೇಬೇಕಾದ ವಿಷಯಗಳಿವು; ಪಟ್ಟಿ ದೊಡ್ಡದಿದೆ
ರಕ್ಷಿತಾ ಶೆಟ್ಟಿ ಅವರು ಈ ವಾರ ಕೆಲವು ತಪ್ಪುಗಳನ್ನು ಮಾಡಿದ್ದಾರೆ. ರಘುನ ನಾಮಿನೇಟ್ ಮಾಡಬೇಕು ಎಂದು ಹಠ ಹಿಡಿದರು. ಆ ಬಳಿಕ ಇದು ತಪ್ಪು ನಿರ್ಧಾರ ಎಂಬುದು ಅವರಿಗೆ ಅರಿವಾಗಿತ್ತು. ಈ ಅರಿವು ಮಾಡಿಸಿದ್ದು ಕಾವ್ಯಾ ಅವರೇ. ಈ ವಾರ ರಕ್ಷಿತಾ ಸಾಕಷ್ಟು ಎಡವಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.