
ರಾಶಿಕಾ ಶೆಟ್ಟಿ ಹಾಗೂ ಸೂರಜ್ ಸಿಂಗ್ ಬಿಗ್ ಬಾಸ್ (Bigg Boss) ಮನಯೆಲ್ಲಿ ಆಪ್ತವಾಗಿ ಇರುತ್ತಿದ್ದರು. ದಿನ ಕಳೆದಂತೆ ಇವರ ಸಂಬಂಧ ಗಟ್ಟಿ ಆಗುತ್ತಿದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಾ ಇತ್ತು. ಆದರೆ, ಸಣ್ಣ ವಿಚಾರಕ್ಕೆ ಇವರ ಮಧ್ಯೆ ಕಿರಿಕ್ ಆಗಿದೆ. ರಾಶಿಕಾ ಅವರು ಸೂರಜ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇವರ ಜಗಳ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ರಾಶಿಕಾ ಅವರು ಆರಂಭದಿಂದ ಡಲ್ ಆಗಿದ್ದರು. ಅವರು ಫಿನಾಲೆ ರೇಸ್ನಲ್ಲಿ ಸ್ಥಾನ ಪಡೆದು ಅಚ್ಚರಿ ಮೂಡಿಸಿದರು. ಆದರೆ, ಮೂರನೇ ವಾರದಲ್ಲಿ ನಡೆದ ಮೊದಲ ಫಿನಾಲೆಯಲ್ಲಿ ಗೆಲ್ಲೋಕೆ ಸಾಧ್ಯವಾಗಿಲ್ಲ. ಆ ಬಳಿಕ ವೈಲ್ಡ್ ಕಾರ್ಡ ಮೂಲಕ ಎಂಟ್ರಿ ಪಡೆದ ಸೂರಜ್ ಸಿಂಗ್ ಜೊತೆ ಒಳ್ಳೆಯ ಗೆಳೆತನ ಬೆಳೆಸಿಕೊಂಡರು.
ಸೂರಜ್ ಸಿಂಗ್ ಅವರಿಗೂ ರಾಶಿಕಾ ಇಷ್ಟ ಆದರು. ಇಬ್ಬರೂ ಮನೆ ತುಂಬ ಕೈ ಕೈ ಹಿಡಿದುಕೊಂಡು ಓಡಾಡಿದ್ದಾರೆ. ‘ಪ್ರೀತಿ ಹೇಳಿ ಕೇಳಿ ಹುಟ್ಟಲ್ಲ’ ಎಂದೆಲ್ಲ ಡೈಲಾಗ್ ಹೇಳಿದ್ದಾರೆ. ಆದರೆ, ಇವರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ.
ರಾಶಿಕಾ ಅವರು ನಾಮಿನೇಟ್ ಆಗಿದ್ದಾರೆ. ಅವರು ಕ್ಯಾಪ್ಟನ್ ರಘು ಬಳಿ ವಾದ ಮಾಡುತ್ತಾ ಕಣ್ಣೀರು ಹಾಕಿದ್ದಾರೆ. ಈ ವೇಳೆ ಅವರ ಬೆಂಬಲಕ್ಕೆ ಸೂರಜ್ ಬಂದಿಲ್ಲ. ‘ನಾನು ಅಳುತ್ತಿದ್ದಾಗ ನೀನು ಸಮಾಧಾನ ಮಾಡಿಲ್ಲ. ಸ್ಪಂದನಾ ಹಾಗೂ ಬೇರೆಯವರ ಜೊತೆ ಮಾತನಾಡುತ್ತಿದ್ದೆ. ನಾನು ಅಲ್ಲಿಯೇ ಇದ್ದೆ. ಏನಾಯ್ತು ಎಂದು ನನ್ನ ಬಳಿ ಕೇಳಿಲ್ಲ. ಆ ಜಾಗದಲ್ಲಿ ನೀನು ಇದ್ದಿದ್ದರೆ ನಾನು ಎಷ್ಟು ಬಾರಿ ಬರ್ತಿದ್ದೆ’ ಎಂದು ರಾಶಿಕಾ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಅರ್ಧಕ್ಕೆ ಹೊರ ನಡೆದ ಮಲ್ಲಮ್ಮ?
‘ನೀನು ಬೇರೆಯವರ ಜೊತೆ ಮಾತನಾಡೋದು ತಪ್ಪು ಎನ್ನುತ್ತಿಲ್ಲ. ನಿನಗೆ ಮುಂದಿನ ವಾರ ಬೇರೆಯವರು ಇಷ್ಟ ಆಗಬಹುದು. ಇವಳು ಸೆಟ್ ಆಗಲ್ಲ ಎನಿಸಬಹುದು’ ಎಂದು ರಾಶಿಕಾ ಹೇಳಲು ಹೋದರು. ರಾಶಿಕಾ ಮಾತಿನಿಂದ ಸೂರಜ್ ಸಿಂಗ್ ಅಸಮಾಧಾನಗೊಂಡರು.