
‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ರಿಯಾಲಿಟಿ ಶೋನಲ್ಲಿ ಮೊದಲ ದಿನವೇ ಎಲಿಮಿನೇಷನ್ (Elimination) ನಡೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ತುಳುನಾಡಿನಿಂದ ಬಂದ ಯೂಟ್ಯೂಬರ್ ರಕ್ಷಿತಾ ಶೆಟ್ಟಿ (Rakshitha Shetty) ಅವರನ್ನು ಆರಂಭದಲ್ಲೇ ಎಲಿಮಿನೇಟ್ ಮಾಡಲಾಗಿದೆ. ಇದು ಸರಿಯಲ್ಲ ಎಂದು ವೀಕ್ಷಕರು ಕಮೆಂಟ್ ಮಾಡುತ್ತಿದ್ದಾರೆ. ಯಾರು ಎಲಿಮಿನೇಟ್ ಆಗಬೇಕು ಎಂಬುದನ್ನು ಬಿಗ್ ಬಾಸ್ ಮನೆಯ 6 ಜನ ಒಂಟಿಗಳು ತೀರ್ಮಾನ ಮಾಡಿದರು. ಅವರ ತೀರ್ಮಾನಕ್ಕೆ ಒಂದಷ್ಟು ಕಾರಣಗಳು ಇದ್ದವು.
ಮಲ್ಲಮ್ಮ, ಧ್ರುವಂತ್, ಧನುಶ್, ಅಶ್ವಿನಿ ಗೌಡ, ಜಾಹ್ನವಿ, ಕಾಕ್ರೋಚ್ ಸುಧಿ ಅವರು ಬಿಗ್ ಬಾಸ್ ಮನೆಯಲ್ಲಿ ಒಂಟಿಗಳಾಗಿ ಆಟ ಆರಂಭಿಸಿದ್ದಾರೆ. ಅವರು ಚರ್ಚೆ ನಡೆಸಿ ಎಲಿಮಿನೇಷನ್ಗೆ ರಕ್ಷಿತಾ ಶೆಟ್ಟಿಯ ಹೆಸರನ್ನು ಆಯ್ಕೆ ಮಾಡಿದರು. ಅದಕ್ಕೆ ಅವರು ನೀಡಿದ ಕಾರಣಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
‘ಅಷ್ಟಿಲ್ಲದೇ ರಕ್ಷಿತಾ ಶೆಟ್ಟಿ ಅವರು ಮುಂಬೈನಿಂದ ಮಂಗಳೂರಿಗೆ ಬಂದು ವಿಡಿಯೋಗಳನ್ನು ಮಾಡಲ್ಲ. ದುಡಿಮೆ ಇರುವುದಕ್ಕಾಗಿಯೇ ಅವರು ಈ ರೀತಿ ಮಾಡಿ ಸ್ವಲ್ಪ ಫೇಮಸ್ ಆಗಿದ್ದಾರೆ. ಅವರಿಗೆ ಕೆಲಸ ಇದೆ. ಆದರೆ ಮಾಳು ನಿಪನಾಳ ಮತ್ತು ಸ್ಪಂದನಾಗೆ ಬೇರೆ ಕೆಲಸ ಇಲ್ಲ’ ಎಂದು ಧನುಶ್ ಅವರು ಕಾರಣ ನೀಡಿ ರಕ್ಷಿತಾನೇ ಎಲಿಮಿನೇಟ್ ಆಗಬೇಕು ಎಂದರು.
‘ಮಾಳು ಮತ್ತು ಸ್ಪಂದನಾ ಅವರ ಕೆಲಸದಲ್ಲಿ ಫ್ಲೂಕ್ ಇರುವುದಿಲ್ಲ. ಕಷ್ಟಪಟ್ಟು ಬಂದಿರುತ್ತಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ತಪ್ಪು ಮಾತನಾಡಿ ಫ್ಲೂಕ್ ಇಂದಲೂ ಫೇಮಸ್ ಆಗುವ ಸಾಧ್ಯತೆ ಇರುತ್ತದೆ. ಹಾಗಿರುವಾಗ ಫ್ಲೂಕ್ನವರನ್ನೆಲ್ಲ ಕರೆದುಕೊಂಡು ಬಂದಿದ್ದಾರೆ ಅಂತ ನೋಡುವ ಜನರಿಗೆ ಅನಿಸುತ್ತದೆ. ಹಾಗಂತ ನಾನು ಯಾರನ್ನೂ ಅಲ್ಲಗಳೆಯುತ್ತಿಲ್ಲ. ಕನ್ನಡ ಕಲಿಯಬೇಕು ಎಂಬ ತುಡಿತ ಎಲ್ಲರಿಗೂ ಇರುತ್ತದೆ. ಆದರೆ ರಕ್ಷಿತಾಗಿಂತ ರಿಯಲ್ ಟ್ಯಾಲೆಂಟ್ ಸ್ಪಂದನಾ’ ಎಂದು ಹೇಳುವ ಮೂಲಕ ಜಾಹ್ನವಿ ಕೂಡ ರಕ್ಷಿತಾ ಶೆಟ್ಟಿಯ ಹೆಸರನ್ನೇ ಆಯ್ಕೆ ಮಾಡಿದರು.
ಮಲ್ಲಮ್ಮ ಮತ್ತು ಅಶ್ವಿನಿ ಗೌಡ ಅವರು ರಕ್ಷಿತಾ ಶೆಟ್ಟಿ ಪರವಾಗಿ ವಾದ ಮಾಡಿದರು. ‘ಎಲ್ಲ ವಯೋಮಾನದವರೂ ಇದ್ದೇವೆ. ನಮ್ಮೆಲ್ಲರಿಗಿಂತ ಚಿಕ್ಕವಳು ರಕ್ಷಿತಾ ಶೆಟ್ಟಿ. ಅವಳಲ್ಲಿ ನನಗೆ ಮುಗ್ಧತೆ ಕಾಣಿಸಿತು. ನಮ್ಮ ನಡುವೆ ಆ ಮುಗ್ಧತೆ ಇರುವ ಮಗು ಇರಬೇಕು ಎನಿಸುತ್ತದೆ. ಅದರಿಂದ ಬಿಗ್ ಬಾಸ್ ಮನೆ ಚೆಂದವಾಗಿ ಇರುತ್ತದೆ’ ಅಶ್ವಿನಿ ಗೌಡ ಹೇಳಿದ್ದರು.
ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಮತ್ತೆ ಬರಲ್ಲ ರಕ್ಷಿತಾ ಶೆಟ್ಟಿ? ಇಲ್ಲಿದೆ ಸಾಕ್ಷಿ
ಇಷ್ಟೆಲ್ಲ ಚರ್ಚೆ ಮಾಡಿದ ಬಳಿಕ ರಕ್ಷಿತಾ ಶೆಟ್ಟಿ ಅವರನ್ನು ಎಲಿಮಿನೇಟ್ ಮಾಡಲಾಯಿತು. ಅದೇನೇ ಇರಲಿ, ರಕ್ಷಿತಾ ಶೆಟ್ಟಿಯನ್ನು ಮೊದಲ ದಿನವೇ ಮನೆಯಿಂದ ಹೊರಗೆ ಕಳಿಸಿದ್ದು ಸರಿಯಲ್ಲ ಎಂದು ವೀಕ್ಷಕರು ಕಮೆಂಟ್ ಮಾಡುತ್ತಿದ್ದಾರೆ. ಬಂದ ದಿನವೇ ವಾಪಸ್ ಕಳಿಸುವುದಾಗಿದ್ದರೆ ಕರೆಯಲೇಬಾರದಿತ್ತು ಎಂಬ ಅಭಿಪ್ರಾಯ ಜನರಿಂದ ಬಂದಿದೆ. ಮುಂದಿನ ದಿನಗಳಲ್ಲಿ ರಕ್ಷಿತಾ ಅವರು ವೈಲ್ಡ್ ಕಾರ್ಡ್ ಮೂಲಕ ಮತ್ತೆ ಎಂಟ್ರಿ ನೀಡುತ್ತಾರಾ ಎಂಬುದನ್ನು ಕಾದುನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.