
ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದ ಖ್ಯಾತ ಹಿರಿಯ ಕಲಾವಿದ ವಿಜಯಕುಮಾರ್ ಜಿತೂರಿ (Vijay Kumar) ನಿಧನ ಹೊಂದಿದ್ದಾರೆ. ಸೋಮವಾರ (ಆಗಸ್ಟ್ 10) ಸಂಜೆ ಹುಟ್ಟೂರಾದ ಗದಗದಲ್ಲಿ ಅವರು ನಿಧನ ಹೊಂದಿದ್ದಾರೆ. ಕಿರುತೆರೆ ಜೊತೆಗೆ ಹಿರಿತೆರೆ, ರಂಗಭೂಮಿಯಲ್ಲಿ ಅವರು ನಟಿಸಿ ಗಮನ ಸೆಳೆದಿದ್ದರು. ಅವರ ಸಾವಿಗೆ ಅನೇಕರು ಕಂಬನಿ ಮಿಡಿದಿದ್ದಾರೆ.
ವಿಜಯಕುಮಾರ್ ಜಿತೂರಿ ಅವರು ಕೇವಲ ನಟ ಮಾತ್ರ ಅಲ್ಲ ಗಾಯಕ ಕೂಡ ಹೌದು. ಅವರು ಕಲಾ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈಗ ಗದಗದ ಬೆಟಗೇರಿಯಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ. ಅವರಿಗೆ ಸೋಮವಾರ ಉಸಿರಾಟದ ತೊಂದರೆ ಕಾಣಸಿಕೊಂಡಿತ್ತು.
ವಿಜಯಕುಮಾರ್ ಜಿತೂರಿ ಅವರು ಹಲವು ವರ್ಷಗಳಿಂದ ಬಣ್ಣದ ಲೋಕದ ಜೊತೆ ಒಡನಾಟ ಹೊಂದಿದ್ದರು. ಅವರು ಗಗನ್ ಚಿನ್ನಪ್ಪ ಅಭಿನಯದ ‘ಮಂಗಳ ಗೌರಿ ಮದುವೆ’ ಧಾರಾವಾಹಿಯಲ್ಲಿ ಕಾನ್‌ಸ್ಟೇಬಲ್ ಪಾತ್ರ ಮಾಡಿದ್ದರು. ಗಗನ್ ಚಿನ್ನಪ್ಪ ಜೊತೆ ಅವರು ಆ ಧಾರಾವಾಹಿಯಲ್ಲಿ ಸಾಕಷ್ಟು ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ಕಲಾವಿದರಿಗೆ ಎಚ್ಚರಿಕೆ ನೀಡಿದ ಕಿರುತೆರೆ ನಿರ್ಮಾಪಕ ಸಂಘ, ಹೇಳಿರುವುದೇನು?
ಅವರು ಇಷ್ಟೆಲ್ಲ ಧಾರಾವಾಹಿಗಳಲ್ಲಿ ನಟಿಸಿದ ಹೊರತಾಗಿಯೂ ಆರ್ಥಿಕ ಸಂಕಷ್ಟ ಬಹುವಾಗಿ ಕಾಡುತ್ತಾ ಇತ್ತು. ಅವರಿಗೆ ಇತ್ತೀಚೆಗೆ ಹೆಚ್ಚಿನ ಅವಕಾಶಗಳು ಬಂದಿರಲಿಲ್ಲ. ಈ ಕಾರಣದಿಂದ ಮನೆ ಬಾಡಿಗೆ ಕಟ್ಟಲೂ ಸಾಧ್ಯವಾಗದೇ ಹುಟ್ಟೂರಿಗೆ ತೆರಳಿದ್ದರು. ಈಗ ಅವರು ಇಹಲೋಕ ತ್ಯಜಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:10 am, Tue, 11 August 26