ರಿತ್ವಿಕ್ ಹಾಕಿದ ಉಡುಗೆಯಲ್ಲಿ ಅಂಥದ್ದೇನಿತ್ತು ವಿಶೇಷ? ಹಾಡಿ ಹೊಗಳಿದ ಹುಡುಗಿಯರು

| Updated By: ರಾಜೇಶ್ ದುಗ್ಗುಮನೆ

Updated on: Aug 19, 2021 | 3:16 PM

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಗಿಣಿರಾಮ’ ಧಾರಾವಾಹಿ ಮೂಲಕ ಖ್ಯಾತಿ ಹೆಚ್ಚಿಸಿಕೊಂಡವರು ರಿತ್ವಿಕ್​ ಮಠದ್​. ಧಾರಾವಾಹಿಯಲ್ಲಿ ಅವರ ಪಾತ್ರ ಸ್ವಲ್ಪ ರಫ್​ ಆ್ಯಂಡ್ ಟಫ್​.

ರಿತ್ವಿಕ್ ಹಾಕಿದ ಉಡುಗೆಯಲ್ಲಿ ಅಂಥದ್ದೇನಿತ್ತು ವಿಶೇಷ? ಹಾಡಿ ಹೊಗಳಿದ ಹುಡುಗಿಯರು
ರಿತ್ವಿಕ್ ಹಾಕಿದ ಉಡುಗೆಯಲ್ಲಿ ಅಂಥದ್ದೇನಿತ್ತು ವಿಶೇಷ? ಹಾಡಿ ಹೊಗಳಿದ ಮನೆ ಮಂದಿ
Follow us on

ಕಿರುತೆರೆ ಮೂಲಕ ಹೆಸರು ಮಾಡಿದ ನಟ ರಿತ್ವಿಕ್​ ಅವರು ಬಿಗ್​ ಬಾಸ್​ ಮನೆಯಲ್ಲಿ ಮಿಂಚುತ್ತಿದ್ದಾರೆ. ಬಿಗ್​ ಬಾಸ್​ ಮಿನಿ ಸೀಸನ್​ನಲ್ಲಿ ತಮ್ಮ ಭಿನ್ನ ಮ್ಯಾನರಿಸಮ್​ ಮೂಲಕ ಎಲ್ಲರಿಗೂ ಇಷ್ಟವಾಗುತ್ತಿದ್ದಾರೆ. ಈಗ ರಿತ್ವಿಕ್​ ಅವರು ಮನೆಯಲ್ಲಿ ಒಂದು ಬಟ್ಟೆ ಧರಿಸಿದ್ದರು. ಅದು ಅನೇಕರಿಗೆ ಇಷ್ಟವಾಗಿದೆ. ಅಲ್ಲದೆ, ಈ ಬಗ್ಗೆ ಮನೆ ಮಂದಿ ಹಾಡಿ ಹೊಗಳಿದ್ದಾರೆ. 

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಗಿಣಿರಾಮ’ ಧಾರಾವಾಹಿ ಮೂಲಕ ಖ್ಯಾತಿ ಹೆಚ್ಚಿಸಿಕೊಂಡವರು ರಿತ್ವಿಕ್​ ಮಠದ್​. ಧಾರಾವಾಹಿಯಲ್ಲಿ ಅವರ ಪಾತ್ರ ಸ್ವಲ್ಪ ರಫ್​ ಆ್ಯಂಡ್ ಟಫ್​. ಹಾಗಂತ ಅವರ ಮನಸ್ಸು ಕಲ್ಲಲ್ಲ. ಧಾರಾವಾಹಿಯಲ್ಲಿ ಅವರು ನಿರ್ವಹಿಸುತ್ತಿರುವ ಪಾತ್ರಕ್ಕೆ ಒಂದು ಮುಗ್ದತೆ ಕೂಡ ಇದೆ. ಅಚ್ಚರಿ ಎಂದರೆ ಅವರಲ್ಲೂ ಅದೇ ಗುಣ ಇದೆ. ಬಿಗ್​ ಬಾಸ್​ ಮನೆಯಲ್ಲಿ ಇದು ಸ್ಪಷ್ಟವಾಗಿದೆ.

ಯಶಸ್ವಿನಿ ಮತ್ತು ವೈಷ್ಣವಿ ಬಿಗ್​ ಬಾಸ್​ ಮನೆಯ ಗಾರ್ಡನ್​ ಏರಿಯಾದಲ್ಲಿ ಕೂತಿದ್ದರು. ಈ ವೇಳೆ ಅಲ್ಲಿಗೆ ರಿತ್ವಿಕ್​ ಆಗಮಿಸಿದ್ದಾರೆ.  ಈ ವೇಳೆ ಅವರು ನೈಟ್​ ಡ್ರೆಸ್​ ತೊಟ್ಟಿದ್ದರು. ಯಶಸ್ವಿನಿ ಮತ್ತು ವೈಷ್ಣವಿ ಇಬ್ಬರಿಗೂ ನೈಟ್​ ಡ್ರೆಸ್​ ಇಷ್ಟವಾಗಿದೆ. ಅಲ್ಲದೆ, ಡ್ರೆಸ್​ ಎಲ್ಲಿ ತೆಗೆದುಕೊಂಡಿರಿ? ಅದು ತುಂಬಾನೇ ಸಖತ್​ ಆಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಿಮಗೆ ಸೂಟ್ ಆಗುತ್ತದೆ ಎಂಬಿತ್ಯಾದಿ ವಿಚಾರಗಳನ್ನು ಹೇಳಿದ್ದಾರೆ. ಆಗ ಮಾತನಾಡಿದ ರಿತ್ವಿಕ್​, ‘ಇದು ನೈಟ್​ ಡ್ರೆಸ್​. ಇದರಲ್ಲಿ ಅಂಥ ವಿಶೇಷತೆ ಏನಿದೆ’ ಎಂದು ಪ್ರಶ್ನೆ ಮಾಡಿದರು. ನಂತರ ಅಲ್ಲಿಂದ ನಡೆದರು.

ಈ ವೇಳೆ ರಿತ್ವಿಕ್​ ಬಗ್ಗೆ ಯಶಸ್ವಿನಿ ಮತ್ತು ವೈಷ್ಣವಿ ಮಾತುಕತೆ ನಡೆಸಿದರು. ‘ರಿತ್ವಿಕ್​ ತುಂಬಾನೇ ಸೈಲೆಂಟ್​. ತುಂಬಾನೇ ಹಂಬಲ್​. ಸೈಲೆಂಟ್​ ಇದ್ರೆ ಆ್ಯಟಿಟ್ಯೂಡ್​ ಅನಿಸುತ್ತದೆ. ಆದರೆ, ಇವರನ್ನು ನೋಡಿದರೆ ಆತರ ಫೀಲ್​ ಆಗಲ್ಲ’ ಎಂದು ಮೆಚ್ಚುಗೆಯ ಮಾತುಗಳನ್ನು ಆಡಿದರು.

ಬಿಗ್​ ಬಾಸ್​ ಮಿನಿ ಸೀಸನ್​ ಆರು ದಿನಗಳ ಕಾಲ ನಡೆಯಲಿದೆ. ಸಾಕಷ್ಟು ಸೆಲೆಬ್ರಿಟಿಗಳು ಬಿಗ್​ ಬಾಸ್​ ಮನೆ ಪ್ರವೇಶ ಮಾಡಿದ್ದಾರೆ. ಇಷ್ಟು ದಿನ ಕೇವಲ ಹೊರಗಿನಿಂದ ಬಿಗ್​ ಬಾಸ್​ ಮನೆ ನೋಡುತ್ತಿದ್ದ ಸೀರಿಯಲ್​ ಕಲಾವಿದರಿಗೆ ಬಿಗ್​ ಬಾಸ್​ ಮನೆ ಒಳಗೆ ಕಾಲಿಡುವ ಅವಕಾಶ ಸಿಕ್ಕಿದೆ.

ಇದನ್ನೂ ಓದಿ: ಬಿಗ್​ ಬಾಸ್​ ನಿರೂಪಣೆ ಬಗ್ಗೆ ಸುದೀಪ್​ ಫ್ಯಾನ್ಸ್​ಗೆ ಇದ್ದ ಅನುಮಾನಕ್ಕೆ ಪರಮ್ ಫುಲ್​ ಸ್ಟಾಪ್​

‘ಗಿಣಿರಾಮ’ ಸೀರಿಯಲ್​ ನಟ ರಿತ್ವಿಕ್​ಗೆ ಜಿಮ್​ನಲ್ಲಿ ಎದುರಾಗಿತ್ತು ವಿಚಿತ್ರ ಪ್ರಶ್ನೆ