Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗಿಣಿರಾಮ’ ಸೀರಿಯಲ್​ ನಟ ರಿತ್ವಿಕ್​ಗೆ ಜಿಮ್​ನಲ್ಲಿ ಎದುರಾಗಿತ್ತು ವಿಚಿತ್ರ ಪ್ರಶ್ನೆ

ರಿತ್ವಿಕ್ ನಿಜಜೀವನದಲ್ಲಿ ಆ ರೀತಿ ಅಲ್ಲ. ಅವರು ಮುಖವನ್ನು ಒಂದೇ ತೆರನಾಗಿ ಇಟ್ಟುಕೊಳ್ಳುತ್ತಾರೆ. ಭಾವನೆಗಳನ್ನು ಅವರು ಹೆಚ್ಚು ಹೊರ ಹಾಕುವುದಿಲ್ಲ.

‘ಗಿಣಿರಾಮ’ ಸೀರಿಯಲ್​ ನಟ ರಿತ್ವಿಕ್​ಗೆ ಜಿಮ್​ನಲ್ಲಿ ಎದುರಾಗಿತ್ತು ವಿಚಿತ್ರ ಪ್ರಶ್ನೆ
‘ಗಿಣಿರಾಮ’ ಸೀರಿಯಲ್​ ನಟ ರಿತ್ವಿಕ್​ಗೆ ಜಿಮ್​ನಲ್ಲಿ ಎದುರಾಗಿತ್ತು ವಿಚಿತ್ರ ಪ್ರಶ್ನೆ
Follow us
TV9 Web
| Updated By: ಮದನ್​ ಕುಮಾರ್​

Updated on: Aug 17, 2021 | 7:18 AM

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಗಿಣಿರಾಮ’ ಧಾರಾವಾಹಿ ಮೂಲಕ ಖ್ಯಾತಿ ಹೆಚ್ಚಿಸಿಕೊಂಡವರು ರಿತ್ವಿಕ್​ ಮಠದ್​. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಈಗ ಅವರು ಬಿಗ್​ ಬಾಸ್​ ಮಿನಿ ಸೀಸನ್​ಗೆ ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿ ಎಲ್ಲರ ಜತೆ ಹಾಯಾಗಿ ಸಮಯ ಕಳೆಯುತ್ತಿದ್ದಾರೆ ಅವರು. ಈ ಮಧ್ಯೆ ಅವರು ಅಚ್ಚರಿಯ ವಿಚಾರವೊಂದನ್ನು ಹೇಳಿಕೊಂಡಿದ್ದಾರೆ.

ಧಾರಾವಾಹಿಯಲ್ಲಿ ತಾವು ನಿರ್ವಹಿಸುತ್ತಿರುವ ಪಾತ್ರಕ್ಕೆ ರಿತ್ವಿಕ್​ ಅವರು ಸೂಕ್ತ ನ್ಯಾಯ ಒದಗಿಸುತ್ತಿದ್ದಾರೆ. ಖಡಕ್​ ಆಗಿ ಕಾಣಿಸಿಕೊಳ್ಳುವಲ್ಲಿ ಖಡಕ್​, ನಗುವ ಕಡೆಯಲ್ಲಿ ನಗು ಹೀಗೆ, ಎಲ್ಲೆಲ್ಲಿ ಯಾವ ಮುಖಭಾವನೆ ತೋರಬೇಕೋ ಅದನ್ನು ತೋರುತ್ತಿದ್ದಾರೆ. ಆದರೆ, ಅವರು ನಿಜಜೀವನದಲ್ಲಿ ಆ ರೀತಿ ಅಲ್ಲ. ಅವರು ಮುಖವನ್ನು ಒಂದೇ ತೆರನಾಗಿ ಇಟ್ಟುಕೊಳ್ಳುತ್ತಾರೆ. ಭಾವನೆಗಳನ್ನು ಅವರು ಹೆಚ್ಚು ಹೊರ ಹಾಕುವುದಿಲ್ಲ. ಇದನ್ನು ಅವರು ಬಿಗ್​ ಬಾಸ್​ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಈ ವಿಚಾರ ಮನೆ ಮಂದಿಗೆ ಹಾಗೂ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ಬಿಗ್​ ಬಾಸ್​ ಮನೆಯಲ್ಲಿ ಈ ಬಗ್ಗೆ ಉದಾಹರಣೆ ಸಮೇತವಾಗಿ ವಿವರಿಸಿದ್ದಾರೆ ರಿತ್ವಿಕ್. ನಿಮ್ಮ ಮುಖ ನೋಡಿದರೆ ಸ್ಯಾಡ್​ ಲೈಫ್​ ರೀತಿಯಲ್ಲಿ ಕಾಣುತ್ತದೆ ಎಂದು ರಿತ್ವಿಕ್​ಗೆ ಮನೆಯ ಸ್ಪರ್ಧಿಯೊಬ್ಬರು ಹೇಳಿದರು. ಇದಕ್ಕೆ ಉತ್ತರಿಸಿದ ರಿತ್ವಿಕ್​, ಒಂದು ಹಳೇ ಘಟನೆಯನ್ನು ಮೆಲುಕು ಹಾಕಿದ್ದಾರೆ.

‘ಇಬ್ಬರು ಹುಡುಗಿಯರು ಜಿಮ್​ನಲ್ಲಿ ಎರಡು ತಿಂಗಳು ನನ್ನನ್ನು ಗಮನಿಸಿದ್ದರು. ನಾನು ಆ ಬಗ್ಗೆ ಗಮನ ಹರಿಸಿರಲಿಲ್ಲ. ಹೋಗಿ ವರ್ಕೌಟ್​ ಮಾಡಿ ಬರುತ್ತಿದ್ದೆ. ನಾನು ಅಷ್ಟಾಗಿ ರಿಯಾಕ್ಟ್​ ಕೂಡ ಮಾಡಲ್ಲ. ಒಂದು ದಿನ ಆ ಹುಡುಗಿ ಬಂದು ಹಾಯ್​ ಸರ್​ ಅಂದ್ಲು. ನಾನೊಂದುಕೊಂಡೆ ಈಗ ಸೆಲ್ಫಿ ಕೇಳ್ತಾಳೆ ಅಂತ. ಆದ್ರೆ ಅಲ್ಲಾಗಿದ್ದೇ ಬೇರೆ. ನಿಮ್ಮನ್ನು ಏನೋ ಕೇಳಬೇಕು ಎಂದಳು. ಕೇಳಿ ಅಂದೆ. ನಿಮ್ಮ ಜೀವನದಲ್ಲಿ ಆಗಬಾರದ ಘಟನೆ ಏನಾದರೂ ನಡೆದಿದೆಯಾ? ಅದಕ್ಕೆ ಈ ರೀತಿ ಮುಖ ಮಾಡಿಕೊಂಡಿದೀರಾ? ಎಂದು ಪ್ರಶ್ನಿಸಿದಳು. ನನ್ನ ಮುಖ ಇರೋದೇ ಹೀಗೆ. ನಾನು ತುಂಬಾನೇ ಆರಾಮಾಗಿದೀನಿ ಅಂತ ಅವರಿಗೆ ಹೇಳಿದೆ’ ಎಂದಿದ್ದಾರೆ ರಿತ್ವಿಕ್​.

ಇದನ್ನೂ ಓದಿ:

ಬಿಗ್​ ಬಾಸ್​ ಬಗ್ಗೆ ಕಿರಣ್​ ರಾಜ್​ಗಿದೆ ಒಂದು ಭಯ; ದೊಡ್ಮನೆ ಆಫರ್​ ತಿರಸ್ಕರಿಸೋಕೆ ಕಾರಣವಾಯ್ತು ಈ ಅಂಶ

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !