‘ರೂಪೇಶ್​ ರಾಜಣ್ಣಗೆ ನಿಯತ್ತಿದೆ, ಮೌಲ್ಯಗಳಿವೆ’; ಕೊನೆಗೂ ಒಪ್ಪಿಕೊಂಡ ಪ್ರಶಾಂತ್ ಸಂಬರ್ಗಿ

ಸಾನ್ಯಾ ಐಯ್ಯರ್​ಗೆ ದಿವ್ಯಶಕ್ತಿ ಇದೆ ಎಂದು ಪ್ರಶಾಂತ್ ಸಂಬರ್ಗಿ ನಂಬಿಸುತ್ತಾ ಬಂದರು. ಇದಕ್ಕೆ ಪೂರಕವಾಗುವಂತಹ ಘಟನೆಗಳನ್ನು ಸಾನ್ಯಾ ಹಾಗೂ ಪ್ರಶಾಂತ್ ಸೃಷ್ಟಿ ಮಾಡಿದರು.

‘ರೂಪೇಶ್​ ರಾಜಣ್ಣಗೆ ನಿಯತ್ತಿದೆ, ಮೌಲ್ಯಗಳಿವೆ’; ಕೊನೆಗೂ ಒಪ್ಪಿಕೊಂಡ ಪ್ರಶಾಂತ್ ಸಂಬರ್ಗಿ
ರೂಪೇಶ್-ಪ್ರಶಾಂತ್​
Edited By:

Updated on: Oct 18, 2022 | 10:02 PM

ರೂಪೇಶ್ ರಾಜಣ್ಣ (Roopesh Rajanna) ಅವರು ಬಿಗ್ ಬಾಸ್​ ಮನೆಯಲ್ಲಿ ಸಖತ್ ಆಗಿ ಕುರಿ ಆಗುತ್ತಿದ್ದಾರೆ. ಅವರನ್ನು ಬಕ್ರಾ ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಪ್ರಶಾಂತ್ ಸಂಬರ್ಗಿ ಹಾಗೂ ಸಾನ್ಯಾ ಐಯ್ಯರ್ ಅವರ ಪ್ಲ್ಯಾನ್ ಸಖತ್ ಆಗಿ ವರ್ಕೌಟ್ ಆಗಿದೆ. ರೂಪೇಶ್ ರಾಜಣ್ಣ ನಡೆದುಕೊಳ್ಳುತ್ತಿರುವ ರೀತಿಗೆ ಸಾನ್ಯಾ ಐಯ್ಯರ್ (Sanya Iyer) ಹಾಗೂ ಪ್ರಶಾಂತ್ ಬಿದ್ದು ಬಿದ್ದು ನಗುತ್ತಿದ್ದಾರೆ. ಈ ಪ್ರ್ಯಾಂಕ್​ನಿಂದ ರೂಪೇಶ್ ರಾಜಣ್ಣಗೆ ನಿಯತ್ತು ಹಾಗೂ ಮೌಲ್ಯಗಳು ಇವೆ ಎಂಬುದು ಗೊತ್ತಾಗಿದೆ.

ಪ್ರಶಾಂತ್ ಹಾಗೂ ಸಾನ್ಯಾ ಇಬ್ಬರೂ ಸೇರಿ ಯಾರನ್ನಾದರೂ ಬಕ್ರಾ ಮಾಡಬೇಕು ಎಂದು ನಿರ್ಧರಿಸಿದರು. ರೂಪೇಶ್ ಶೆಟ್ಟಿ ಅವರನ್ನು ಮೊದಲು ಟಾರ್ಗೆಟ್ ಮಾಡುವ ನಿರ್ಧಾರಕ್ಕೆ ಸಾನ್ಯಾ ಬಂದಿದ್ದರು. ಆ ಬಳಿಕ ನೆನಪಾಗಿದ್ದು ರೂಪೇಶ್ ರಾಜಣ್ಣ. ಸಾನ್ಯಾ ಐಯ್ಯರ್​ಗೆ ದಿವ್ಯಶಕ್ತಿ ಇದೆ ಎಂದು ಪ್ರಶಾಂತ್ ಸಂಬರ್ಗಿ ನಂಬಿಸುತ್ತಾ ಬಂದರು. ಇದಕ್ಕೆ ಪೂರಕವಾಗುವಂತಹ ಘಟನೆಗಳನ್ನು ಸಾನ್ಯಾ ಹಾಗೂ ಪ್ರಶಾಂತ್ ಸೃಷ್ಟಿ ಮಾಡಿದರು.

ರೂಪೇಶ್ ರಾಜಣ್ಣ ಅವರ ನೀರು ಕುಡಿಯುವ ಬಾಟಲ್ 10 ದಿನಗಳ ಹಿಂದೆ ಕಳುವಾಗಿತ್ತು. ಇದನ್ನು ಕಳ್ಳತನ ಮಾಡಿದ್ದು ಪ್ರಶಾಂತ್ ಸಂಬರ್ಗಿ. ಇದನ್ನು ದಿವ್ಯಾ ಉರುಡುಗ ಬೆಡ್ ಪಕ್ಕ ಅಡಗಿಸಿ ಇಟ್ಟಿದ್ದರು ಪ್ರಶಾಂತ್. ಸಾನ್ಯಾ ಐಯ್ಯರ್ ಅವರ ಬಳಿ ಬಾಟಲ್ ಎಲ್ಲಿದೆ ಎಂಬುದನ್ನು ಪ್ರಶಾಂತ್​ ಹೇಳಿದ್ದರು. ನಂತರ ಸಾನ್ಯಾ ಅವರು ಬಂದು ರೂಪೇಶ್ ರಾಜಣ್ಣ ಬಳಿ ಬಾಟಲ್ ಎಲ್ಲಿದೆ ಎಂಬುದನ್ನು ಹೇಳಿದರು. ಹೋಗಿ ನೋಡಿದಾಗ ಬಾಟಲ್ ಸಿಕ್ಕಿತು. ಆ ಒಂದು ಕ್ಷಣ ರೂಪೇಶ್ ರಾಜಣ್ಣ ನಡುಗಿ ಹೋದರು.

ಇದನ್ನೂ ಓದಿ
ಸಾನ್ಯಾ ಐಯ್ಯರ್-ಪ್ರಶಾಂತ್ ಸಂಬರ್ಗಿ ಪ್ಲ್ಯಾನ್​ಗೆ ಬಕ್ರಾ ಆದ ರೂಪೇಶ್ ರಾಜಣ್ಣ
BBK9: ಮೊದಲ ವಾರವೇ ಬಿಗ್​ ಬಾಸ್​ ಮನೆಯಲ್ಲಿ 12 ಮಂದಿ ನಾಮಿನೇಟ್​; ಶುರುವಾಯ್ತು ಢವಢವ
BBK9: ಮೊದಲ ದಿನವೇ ಬಿಗ್​ ಬಾಸ್​ ಮನೆಯಲ್ಲಿ ದೊಡ್ಡ ಫೈಟ್​; ಕೂಗಾಡಿದ ಪ್ರಶಾಂತ್​ ಸಂಬರ್ಗಿ
Bigg Boss OTT: ‘ಬಿಗ್​ ಬಾಸ್​ ಒಟಿಟಿ’ ಲಾಭವೋ ನಷ್ಟವೋ? ಇನ್ನೊಂದು ಸೀಸನ್​ ಬರೋದು ಅನುಮಾನ

ನಂತರ ಬಾಳೆ ಹಣ್ಣಿನ ವಿಚಾರ ಬಂತು. ‘ದೇವರ ಪಕ್ಕದಲ್ಲಿ ಒಂದು ಬಾಳೆಹಣ್ಣಿದೆ. ಆ ಬಾಳೆ ಹಣ್ಣು ಒಳಗಿನಿಂದ ಐದು ಕಡೆಗಳಲ್ಲಿ ಕಟ್​ ಆಗಿರುತ್ತದೆ. ಅದನ್ನು ನಿಮಗಾಗದ ಐದು ಜನರಿಗೆ ನೀಡಿ. ಅವರು ಸೋಲುತ್ತಾರೆ’ ಎಂದರು ಸಾನ್ಯಾ ಐಯ್ಯರ್. ಪ್ಲ್ಯಾನ್ ಪ್ರಕಾರ ಈ ಬಾಳೆ ಹಣ್ಣನ್ನು ರೂಪೇಶ್ ಅವರು ಮೊದಲು ಪ್ರಶಾಂತ್ ಸಂಬರ್ಗಿಗೆ ನೀಡುತ್ತಾರೆ ಎಂದು ಊಹಿಸಲಾಗಿತ್ತು. ಆದರೆ, ಅದು ಸುಳ್ಳಾಗಿದೆ. ‘ನಾನು ಇದನ್ನು ಯಾರಿಗೂ ಕೊಡಲ್ಲ. ಆ ರೀತಿ ಮೋಸ ಮಾಡಿ ವಿನ್ ಆಗೋಕೆ ನನಗೆ ಇಷ್ಟ ಇಲ್ಲ’ ಎಂದಿದ್ದಾರೆ ರೂಪೇಶ್ ರಾಜಣ್ಣ. ಇದನ್ನು ಕೇಳಿ ಪ್ರಶಾಂತ್ ಸಂಬರ್ಗಿ ಸಖತ್ ಖುಷಿಯಾಗಿದ್ದಾರೆ.

ಇದನ್ನೂ ಓದಿ: ಸಾನ್ಯಾ ಐಯ್ಯರ್-ಪ್ರಶಾಂತ್ ಸಂಬರ್ಗಿ ಪ್ಲ್ಯಾನ್​ಗೆ ಬಕ್ರಾ ಆದ ರೂಪೇಶ್ ರಾಜಣ್ಣ

‘ರೂಪೇಶ್ ರಾಜಣ್ಣಗೆ ನಿಯತ್ತಿದೆ. ಆತನಿಗೆ ಮೌಲ್ಯಗಳಿವೆ’ ಎಂದು ಅರುಣ್ ಸಾಗರ್ ಬಳಿ ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ. ಇದಕ್ಕೆ ಅರುಣ್ ಸಾಗರ್ ಕೂಡ ಹೌದು ಎಂದಿದ್ದಾರೆ.