ಈ ಬಾರಿ ಯಾರಿಗೆ ಒಲಿಯಲಿದೆ ‘ಸರಿಗಮಪ ಲಿಟಲ್ ಚಾಂಪ್ಸ್’ ಕಿರೀಟ?

Sa ri Ga Ma Pa reality show: ಕರ್ನಾಟಕದ ವಿವಿಧ ಭಾಗಗಳಿಂದ ಬಂದಿರುವ ಪುಟ್ಟ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಈ ಶೋ, ಸ್ಪರ್ಧಿಗಳ ಅದ್ಭುತ ಧ್ವನಿ, ಮುಗ್ಧತೆ, ಆತ್ಮವಿಶ್ವಾಸ ಹಾಗೂ ಸಂಗೀತದ ಮೇಲಿನ ಆಸಕ್ತಿಯಿಂದ ಪ್ರೇಕ್ಷಕರ ಮನ ಗೆದ್ದಿದೆ. ಅದ್ಧೂರಿ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ‘ಸರಿಗಮಪ ಲಿಟಲ್ ಚಾಂಪ್ಸ್’ ಚಾಂಪಿಯನ್ ಪಟ್ಟಕ್ಕಾಗಿ ಸ್ಪರ್ಧಿಗಳು ಪರಸ್ಪರ ಪೈಪೋಟಿ ನಡೆಸಲಿದ್ದು, ಇದೇ ಆಗಸ್ಟ್ 22 ಮತ್ತು 23ರಂದು ಸಂಜೆ 7 ಗಂಟೆಗೆ ಎರಡು ದಿನಗಳ ಕಾಲ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.

ಈ ಬಾರಿ ಯಾರಿಗೆ ಒಲಿಯಲಿದೆ ‘ಸರಿಗಮಪ ಲಿಟಲ್ ಚಾಂಪ್ಸ್’ ಕಿರೀಟ?
Little Champs

Updated on: Aug 21, 2026 | 6:09 PM

‘ಸರಿಗಮಪ ಲಿಟಲ್ ಚಾಂಪ್ಸ್’ (Sa Ri Ga Ma Pa) ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು. ಸಂಗೀತ ಪ್ರಿಯರನ್ನು ರಂಜಿಸುತ್ತಲೇ ಬಂದಿರುವ ಜೀ ಕನ್ನಡದ ಈ ಜನಪ್ರಿಯ ಶೋನ ಹೊಸ ಸೀಸನ್ ಇದೀಗ ಅಂತಿಮ ಘಟ್ಟ ತಲುಪಿದೆ. ಕರ್ನಾಟಕದ ವಿವಿಧ ಭಾಗಗಳಿಂದ ಬಂದಿರುವ ಪುಟ್ಟ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಈ ಶೋ, ಸ್ಪರ್ಧಿಗಳ ಅದ್ಭುತ ಧ್ವನಿ, ಮುಗ್ಧತೆ, ಆತ್ಮವಿಶ್ವಾಸ ಹಾಗೂ ಸಂಗೀತದ ಮೇಲಿನ ಆಸಕ್ತಿಯಿಂದ ಪ್ರೇಕ್ಷಕರ ಮನ ಗೆದ್ದಿದೆ. ಅದ್ಧೂರಿ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ‘ಸರಿಗಮಪ ಲಿಟಲ್ ಚಾಂಪ್ಸ್’ ಚಾಂಪಿಯನ್ ಪಟ್ಟಕ್ಕಾಗಿ ಸ್ಪರ್ಧಿಗಳು ಪರಸ್ಪರ ಪೈಪೋಟಿ ನಡೆಸಲಿದ್ದು, ಇದೇ ಆಗಸ್ಟ್ 22 ಮತ್ತು 23ರಂದು ಸಂಜೆ 7 ಗಂಟೆಗೆ ಎರಡು ದಿನಗಳ ಕಾಲ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.

ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಮಾರ್ಗದರ್ಶನದಲ್ಲಿ ಪುಟ್ಟ ಪ್ರತಿಭೆಗಳು ಮೊದಲ ಆಡಿಷನ್‌ನಿಂದ ಹಿಡಿದು ಅಂತಿಮ ಘಟ್ಟದವರೆಗೆ ಸ್ಪರ್ಧಿಗಳು ತಮ್ಮ ಪ್ರತಿಭೆಯ ಮೂಲಕ ಪ್ರೇಕ್ಷಕರನ್ನು ನಿರಂತರವಾಗಿ ರಂಜಿಸುತ್ತಾ ಬಂದಿದ್ದಾರೆ. ಇದೀಗ ಶೋ ಗ್ರ್ಯಾಂಡ್ ಫಿನಾಲೆಗೆ ಬಂದು ನಿಂತಿದೆ.

ಪುಟ್ಟ ಗಾಯನ ಪ್ರತಿಭೆಗಳಾದ ಅಶ್ಮಿತ್, ಅಚಿಂತ್ಯ, ಮಹನ್ಯಾ, ಹರುಷ್, ಜಯಲಕ್ಷ್ಮಿ ಮತ್ತು ಅವ್ಯುಕ್ತ್ ಅವರು ಚಾಂಪಿಯನ್ ಪಟ್ಟಕ್ಕಾಗಿ ಅಂತಿಮ ಸುತ್ತಿನಲ್ಲಿ ಮುಖಾಮುಖಿಯಾಗಲಿದ್ದಾರೆ. ತಮ್ಮ ಗಾಯನದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಈ ಮಕ್ಕಳು, ಫಿನಾಲೆಯಲ್ಲಿ ಮತ್ತೊಮ್ಮೆ ವಿಶೇಷ ಪ್ರದರ್ಶನಗಳ ಮೂಲಕ ಮೋಡಿ ಮಾಡಲು ಸಜ್ಜಾಗಿದ್ದಾರೆ. ಈ ಆರು ಪ್ರತಿಭೆಗಳಲ್ಲಿ ‘ಸ ರಿ ಗ ಮ ಪ ಲಿಟಲ್ ಚಾಂಪ್ಸ್’ ಚಾಂಪಿಯನ್ ಪಟ್ಟವನ್ನು ಯಾರು ಮುಡಿಗೇರಿಸಿಕೊಳ್ಳಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ವೀಕ್ಷಿಸಿ ‘ಸ ರಿ ಗ ಮ ಪ ಲಿಟಲ್ ಚಾಂಪ್ಸ್’, ಇದೇ ಆಗಸ್ಟ್ 22 ಮತ್ತು 23ರಂದು ಸಂಜೆ 7 ಗಂಟೆಗೆ ನಿಮ್ಮ ಜೀ ಕನ್ನಡದಲ್ಲಿ.

ಇದನ್ನೂ ಓದಿ:ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ಟಿವಿ9 ವರದಿ ಬಳಿಕ ನಾಲ್ವರು ಅಧಿಕಾರಿಗಳ ಅಮಾನತು

ಸರಿಗಮಪ ಲಿಟಲ್ ಚಾಂಪ್ಸ್ ಕಳೆದ ಕೆಲ ವರ್ಷಗಳಿಂದಲೂ ಪ್ರಸಾರ ವಾಗುತ್ತಾ ಬರುತ್ತಿದೆ. ಪ್ರತಿ ವರ್ಷ ಹೊಸ ಪ್ರತಿಭೆಗಳು ವೇದಿಕೆಗೆ ಬರುತ್ತವೆ. ತಮ್ಮ ಗಾಯನದಿಂದ ಪ್ರೇಕ್ಷಕರ, ತೀರ್ಪುಗಾರರ ಮನಸ್ಸು ಗೆದ್ದು ಟ್ರೋಫಿ ತಮ್ಮದಾಗಿಸಿಕೊಳ್ಳುತ್ತಾರೆ. ಅನುಶ್ರೀ ನಿರೂಪಣೆ ಮಾಡುವ ಈ ಶೋಗೆ ತನ್ನದೇ ಆದ ದೊಡ್ಡ ಪ್ರೇಕ್ಷಕ ವರ್ಗವಿದೆ. ಈ ವರೆಗೆ ನೂರಾರು ಸ್ಪರ್ಧಿಗಳಿಗೆ, ಗಾಯಕ-ಗಾಯಕಿಯರಿಗೆ ಈ ವೇದಿಕೆ ಅವಕಾಶ ಮಾಡಿಕೊಟ್ಟಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:28 pm, Fri, 21 August 26

Loading...
Unable to load recommendations.
Follow Us