
ಸಲ್ಮಾನ್ ಖಾನ್ ಅವರು ‘ಬಿಗ್ ಬಾಸ್ ಹಿಂದಿ ಸೀಸನ್ 19’ ಅನ್ನು ಹೋಸ್ಟ್ ಮಾಡಲು ರೆಡಿ ಆಗಿದ್ದಾರೆ. ಆಗಸ್ಟ್ 30ರಂದು ಶೋ ಪ್ರಸಾರ ಆರಂಭಿಸಲಿದೆ. ಈ ಬಾರಿ ಒಟಿಟಿಯಲ್ಲಿ ಮೊದಲು ಶೋ ಪ್ರಸಾರ ಆಗಲಿದ್ದು, ಆ ಬಳಿಕ ಟಿವಿಯಲ್ಲಿ ಪ್ರಸಾರ ಆಗಲಿದೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ಸಲ್ಮಾನ್ ಖಾನ್ ಸಂಭಾವನೆಗೆ ವಾಹಿನಿಯವರು ಕತ್ತರಿ ಹಾಕಲು ನಿರ್ಧರಿಸಿದ್ದಾರೆ. ಹಾಗಂತ ಕಾಸ್ಟ್ ಕಟಿಂಗ್ ವಿಚಾರಕ್ಕಾಗಿ ಅಲ್ಲ. ಇದಕ್ಕೆ ವಿವಿಧ ಕಾರಣಗಳು ಇವೆ. ಹಾಗಾದರೆ ಸುದೀಪ್ (Sudeep) ಸಂಭಾವನೆಯ ಕಥೆ ಏನು? ಆ ಬಗ್ಗೆ ಇಲ್ಲಿದೆ ವಿವರ.
ಬಿಗ್ ಬಾಸ್ ನಡೆಸಿಕೊಡಲು ಪ್ರತಿ ಸೀಸನ್ಗೆ ಸಲ್ಮಾನ್ ಖಾನ್ ದೊಡ್ಡ ಸಂಭಾವನೆ ಪಡೆಯುತ್ತಾರೆ. 17ನೇ ಸೀಸನ್ಗಾಗಿ 200 ಕೋಟಿ ರೂಪಾಯಿ ಹಾಗೂ ಸೀಸನ್ 18ಕ್ಕಾಗಿ 250 ಕೋಟಿ ರೂಪಾಯಿ ಸಂಭಾವನೆಯನ್ನು ಅವರು ಪಡೆದಿದ್ದರು. ಆದರೆ, ಈ ಬಾರಿ ಅವರ ಸಂಭಾವನೆ 150 ಕೋಟಿ ರೂಪಾಯಿಗೆ ಇಳಿಸಲಾಗಿದೆ ಎಂದು ವರದಿ ಆಗಿದೆ. ಅಲ್ಲದೆ, ಈ ಬಾರಿಯ ಶೋನ ಬಜೆಟ್ ಕೂಡ ಕಡಿಮೆ ಇದೆ.
‘ಬಿಗ್ ಬಾಸ್ ಹಿಂದಿ ಸೀಸನ್ 19’ ಬರೋಬ್ಬರಿ 5 ತಿಂಗಳುಗಳ ಕಾಲ ಇರಲಿದೆ ಎನ್ನಲಾಗುತ್ತಿದೆ. ಈಗಾಗಲೇ ಸಲ್ಮಾನ್ ಖಾನ್ ಅವರು ವಿವಿಧ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ. ಈ ಶೋಗಾಗಿ 5 ತಿಂಗಳು ಸಮಯ ಮುಡಿಪಿಡೋದು ಎಂದರೆ ಅವರಿಗೆ ಚಾಲೆಂಜಿಂಗ್ ಆಗಿ ಇರಲಿದೆ. ಈ ಕಾರಣದಿಂದ ವಿವಿಧ ಹೋಸ್ಟ್ಗಳನ್ನು ಕರೆಸಲಾಗುತ್ತಿದೆ.
ಮೊದಲ ಮೂರು ತಿಂಗಳು ಸಲ್ಮಾನ್ ಖಾನ್ ಅವರೇ ಬಿಗ್ ಬಾಸ್ ನಡೆಸುಕೊಡಲಿದ್ದಾರೆ. ಆ ಬಳಿಕ ಫರಾ ಖಾನ್, ಕರಣ್ ಜೋಹರ್, ಅನಿಲ್ ಕಪೂರ್ ಮೊದಲಾದವರು ಶೋನ ಹೋಸ್ಟ್ ಮಾಡಲಿದ್ದಾರೆ. ಫಿನಾಲೆಗೆ ಸಲ್ಮಾನ್ ಖಾನ್ ನೇತೃತ್ವ ಇರಲಿದೆ. ಮೊದಲು ಶೋ ಜಿಯೋ ಹಾಟ್ಸ್ಟಾರ್ನಲ್ಲಿ ಪ್ರಸಾರ ಕಾಣಲಿದೆ. ಆ ಬಳಿಕ ಶೋ ಕಲರ್ಸ್ ಟಿವಿಯಲ್ಲಿ ಪ್ರಸಾರ ಆಗಲಿದೆ.
ಇದನ್ನೂ ಓದಿ: ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಜಾಗ ಖರೀದಿ: ಸುದೀಪ್ರ ಕೊಂಡಾಡಿದ ಅಭಿಮಾನಿಗಳು
ಇನ್ನು, ಸುದೀಪ್ ಸಂಭಾವನೆಗೆ ಯಾವುದೇ ಕತ್ತರಿ ಬೀಳುವ ಸಾಧ್ಯತೆ ಇಲ್ಲ. ಏಕೆಂದರೆ, ಆರಂಭದಿಂದ ಕೊನೆಯವರೆಗೆ ಅವರೇ ಶೋ ನಡೆಸಿಕೊಡಲಿದ್ದಾರೆ. ಹೀಗಾಗಿ, ವರ್ಷದಿಂದ ವರ್ಷಕ್ಕೆ ಅವರ ಸಂಭಾವನೆ ಹೆಚ್ಚುತ್ತಿದೆ. ಕಳೆದ ಸೀಸನ್ಗಿಂತ ಈ ಸೀಸನ್ನಲ್ಲಿ ಅವರ ಸಂಭಾವನೆ ಹೆಚ್ಚುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.