‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಮನೆ ಒಳಗೆ ಸೇರಿರುವ ಸಂಗೀತಾ ಶೃಂಗೇರಿ (Sangeetha Sringeri) ಹಾಗೂ ಕಾರ್ತಿಕ್ ಮಧ್ಯೆ ಸ್ನೇಹ ಬೆಳೆಯುತ್ತಿದೆ. ದಿನ ಕಳೆದಂತೆ ಇಬ್ಬರ ಮಧ್ಯೆ ಆಪ್ತತೆ ಹೆಚ್ಚುತ್ತಿದೆ. ತಮ್ಮ ಮಧ್ಯೆ ಇರೋದು ಫ್ರೆಂಡ್ಶಿಪ್ ಎಂದು ಇಬ್ಬರೂ ಸ್ಪಷ್ಟಪಡಿಸಿದ್ದಾರೆ. ಆದರೆ, ಈ ಜೋಡಿ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಈಗ ಮನೆಯಲ್ಲಿ ನಡೆದ ಟಾಸ್ಕ್ನಲ್ಲಿ ಕಾರ್ತಿಕ್ ಬೆನ್ನಿಗೆ ಗಾಯವಾಗಿದೆ. ಈ ಗಾಯಕ್ಕೆ ಎಣ್ಣೆ ಹಚ್ಚಿದ್ದಾರೆ ಸಂಗೀತಾ. ಈ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಾರ್ತಿಕ್ ಬಿಗ್ ಬಾಸ್ಗೆ ಬರುವ ಮೊದಲೇ ಲವ್ ವಿಚಾರ ಮಾತನಾಡಿದ್ದರು. ತಾವು ದೊಡ್ಮನೆಯಲ್ಲಿ ಒಬ್ಬರನ್ನು ಪ್ರೀತಿಸುವುದಾಗಿ ಹೇಳಿಕೊಂಡಿದ್ದರು. ಇದಕ್ಕೆ ಸಂಗೀತಾ ಶೃಂಗೇರಿ ಅವರನ್ನು ಆಯ್ಕೆ ಮಾಡಿಕೊಂಡಂತಿದೆ ಕಾರ್ತಿಕ್. ಇಬ್ಬರೂ ಅಸಮರ್ಥರ ಸಾಲಿನಲ್ಲಿದ್ದರು. ಈ ವೇಳೆ ಇಬ್ಬರ ಮಧ್ಯೆ ಫ್ರೆಂಡ್ಶಿಪ್ ಬೆಳೆದಿದೆ. ಈಗ ಇವರ ಮಧ್ಯೆ ಇರುವ ಆಪ್ತತೆ ಹೆಚ್ಚುತ್ತಿದೆ.
ಟಾಸ್ಕ್ ಆಡುವಾಗ ಕಾರ್ತಿಕ್ ಬೆನ್ನಿಗೆ ಗಾಯವಾಗಿದೆ. ಆಗ ಸಂಗೀತಾ ಅವರು ಎಣ್ಣೆ ಹಚ್ಚಿ ಮಸಾಜ್ ಮಾಡಿದ್ದಾರೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಇದು ಎಲ್ಲರ ಗಮನ ಸೆಳೆಯುತ್ತಿದೆ. ಇವರ ಜೋಡಿ ಚೆನ್ನಾಗಿದೆ ಎನ್ನುವ ಕಮೆಂಟ್ಗಳು ಅಭಿಮಾನಿಗಳಿಂದ ಬರುತ್ತಿದೆ.
ಸಂಗೀತಾ ಶೃಂಗೇರಿ ಅವರು ನಾಯಕಿ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ‘777 ಚಾರ್ಲಿ’ ಸಿನಿಮಾ ಮೂಲಕ ಅವರು ಫೇಮಸ್ ಆಗಿದ್ದಾರೆ. ಅವರು ಈಗ ಬಿಗ್ ಬಾಸ್ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ‘ಡೊಳ್ಳು’ದಲ್ಲಿ ಕಾರ್ತಿಕ್ ಅವರು ನಟಿಸಿದ್ದಾರೆ.
ಟಾಸ್ಕ್ ಸೋತರೂ ಸಂಗೀತಾಳ ಸ್ನೇಹ ಗೆದ್ದ ಕಾರ್ತಿಕ್!
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/QBC3SJ8cAk
— Colors Kannada (@ColorsKannada) October 17, 2023
ಇದನ್ನೂ ಓದಿ: ‘ಸುದೀಪ್ಗೆ ಒಂದು ಮಾತನ್ನು ಹೇಳೋಕೆ ಮರೆತೆ’; ಬಿಗ್ ಬಾಸ್ನಿಂದ ಹೊರಬಂದು ಮನಸ್ಸಿನ ಮಾತು ಹೇಳಿದ ಸ್ನೇಕ್ ಶ್ಯಾಮ್
‘ಬಿಗ್ ಬಾಸ್’ ಮನೆಯಲ್ಲಿ ಸದ್ಯ 16 ಮಂದಿ ಇದ್ದಾರೆ. ಮೊದಲ ವಾರದ ನಾಮಿನೇಷನ್ನಿಂದ ಸ್ನೇಕ್ ಶ್ಯಾಮ್ ಅವರು ಔಟ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಮನೆಯಲ್ಲಿ ಸ್ಪರ್ಧೆ ಹೆಚ್ಚಲಿದೆ. ಹೀಗಿರುವಾಗಲೇ ಸಂಗೀತಾ ಹಾಗೂ ಕಾರ್ತಿಕ್ ಮಧ್ಯೆ ಬಂಧ ಬೆಳೆಯುತ್ತಿದೆ. ಕಲರ್ಸ್ ಕನ್ನಡದಲ್ಲಿ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ನೋಡೋಕೆ ಅವಕಾಶ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:42 am, Tue, 17 October 23