‘ಯಾರ ಜತೆ ಇದ್ರೆ ಉಪಯೋಗ ಆಗತ್ತೆ ಅಂತ ಸಂಗೀತಾ ನೋಡ್ತಾರೆ’: ಕಾರ್ತಿಕ್​ ಆರೋಪ

ನಾಮಿನೇಷನ್​ ಮಾಡುವಾಗ ಕಾರ್ತಿಕ್​ ಮಹೇಶ್​ ಈ ರೀತಿ ಕಾರಣ ನೀಡಿದ್ದಾರೆ. ‘ಸಂಗೀತಾ ಮಾಡಿರುವ ತಪ್ಪಿನ ಬಗ್ಗೆ ಅವರಿಗೆ ಅರಿವಿಲ್ಲ’ ಎಂದು ಕಾರ್ತಿಕ್​ ಹೇಳಿದ್ದಾರೆ. ಸಂಗೀತಾ ಕೂಡ ಕಾರ್ತಿಕ್​ ಬಗ್ಗೆ ಆರೋಪಗಳ ಮಳೆ ಸುರಿಸಿದ್ದಾರೆ. ಬಿಗ್​ ಬಾಸ್​ ಆರಂಭ ಆದಾಗ ಇವರಿಬ್ಬರು ಜೊತೆಯಾಗಿದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ.

‘ಯಾರ ಜತೆ ಇದ್ರೆ ಉಪಯೋಗ ಆಗತ್ತೆ ಅಂತ ಸಂಗೀತಾ ನೋಡ್ತಾರೆ’: ಕಾರ್ತಿಕ್​ ಆರೋಪ
ಕಾರ್ತಿಕ್​ ಮಹೇಶ್​, ಸಂಗೀತಾ ಶೃಂಗೇರಿ

Updated on: Jan 01, 2024 | 4:09 PM

ಬಿಗ್​ ಬಾಸ್​ ಫಿನಾಲೆ (Bigg Boss Kannada Finale) ಹತ್ತಿರ ಆಗುತ್ತಿದೆ. ಈ ಸಮಯದಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿಯ ಕಾವು ಹೆಚ್ಚಾಗಿದೆ. ಇಷ್ಟು ದಿನ ಬಹಳ ಆಪ್ತವಾಗಿ ನಡೆದುಕೊಂಡಿದ್ದವರು ಈಗ ಪರಸ್ಪರ ಕಿತ್ತಾಡಿಕೊಳ್ಳುವ ಹಂತಕ್ಕೆ ಬಂದಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಕಾರ್ತಿಕ್​ ಮಹೇಶ್​ (Karthik Mahesh) ಮತ್ತು ಸಂಗೀತಾ ಶೃಂಗೇರಿ. ಆರಂಭದಲ್ಲಿ ಬಹಳ ಕ್ಲೋಸ್​ ಆಗಿದ್ದ ಇವರು ಈಗ ವಿರೋಧ ಕಟ್ಟಿಕೊಟ್ಟಿಕೊಂಡಿದ್ದಾರೆ. ಕಾರ್ತಿಕ್​ ಅವರನ್ನು ಸಂಗೀತಾ ನಾಮಿನೇಟ್​ ಮಾಡಿದ್ದಾರೆ. ಅದೇ ರೀತಿ, ಸಂಗೀತಾ (Sangeetha Sringeri) ಅವರನ್ನು ಕಾರ್ತಿಕ್​ ನಾಮಿನೇಟ್​ ಮಾಡಿದ್ದಾರೆ. ಈ ವೇಳೆ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋ ಆರಂಭ ಆದಾಗ ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್​ ಮಹೇಶ್​ ಜೊತೆಯಾಗಿ ಕಾಲ ಕಳೆಯುತ್ತಿದ್ದರು. ನಂತರ ಸಂಗೀತಾ ಅವರು ವಿನಯ್​ ಗೌಡ ಗುಂಪಿನ ಜೊತೆ ಸೇರಿಕೊಂಡರು. ಆ ಬಳಿಕ ಮತ್ತೆ ಕಾರ್ತಿಕ್​ ಜೊತೆ ಬಂದು ಸಂಗೀತಾ ಕೈ ಜೋಡಿಸಿದರು. ಆ ಬಳಿಕ ಡ್ರೋನ್​ ಪ್ರತಾಪ್​ ಜೊತೆ ಹೆಚ್ಚಾಗಿ ಇರಲು ಆರಂಭಿಸಿದರು. ಸಂಗೀತಾ ಅವರ ಈ ಗುಣವನ್ನು ಕಾರ್ತಿಕ್​ ಟೀಕಿಸಿದ್ದಾರೆ.

ಇದನ್ನೂ ಓದಿ: ‘ಕಾರ್ತಿಕ್​ ಬಿಗ್​ ಬಾಸ್​ ಗೆಲ್ಲಲ್ಲ’; ಸುದೀಪ್​ ಎದುರಲ್ಲಿ ಭವಿಷ್ಯ ನುಡಿದ ಸಂಗೀತಾ ಶೃಂಗೇರಿ

ನಾಮಿನೇಷನ್​ ಮಾಡುವಾಗ ಕಾರ್ತಿಕ್​ ಮಹೇಶ್​ ಅವರು ಈ ರೀತಿ ಕಾರಣ ನೀಡಿದ್ದಾರೆ. ‘ಅವರು ಮಾಡಿರುವ ತಪ್ಪಿನ ಬಗ್ಗೆ ಅವರಿಗೆ ಅರಿವಿಲ್ಲ. ತಾನು ಮಾಡಿದ್ದೇ ಸರಿ ಅಂತ ಯಾವಾಗಲೂ ವಾದಿಸುತ್ತಾರೆ. ಅಗತ್ಯಕ್ಕೆ ತಕ್ಕ ಹಾಗೆ ಈ ವಾರ ಇವರ ಜೊತೆ ಇದ್ದರೆ ತಮಗೆ ಏನಾದರೂ ಉಪಯೋಗ ಆಗತ್ತೆ ಎಂಬ ಅವಕಾಶವನ್ನು ಹುಡುಕುತ್ತಾ ಇರುತ್ತಾರೆ’ ಎಂದು ಕಾರ್ತಿಕ್​ ಆರೋಪಿಸಿದ್ದಾರೆ.

ಅದೇ ರೀತಿ, ಸಂಗೀತಾ ಕೂಡ ಕಾರ್ತಿಕ್​ ಬಗ್ಗೆ ಆರೋಪಗಳ ಮಳೆ ಸುರಿಸಿದ್ದಾರೆ. ‘ಕಾರ್ತಿಕ್​ ನನ್ನ ಬಗ್ಗೆ ಮಾತನಾಡಿದ ರೀತಿ ನನಗೆ ಇಷ್ಟ ಆಗಿಲ್ಲ. ಅವರ ಮತ್ತು ನನ್ನ ನಡುವೆ ಏನೇ ಸಮಸ್ಯೆ ಇದ್ದರೂ ಅದನ್ನು ಬೇರೆ ರೀತಿ ಬಿಂಬಿಸಿ, ಬೇರೆಯವರಿಗೆ ಇನ್ನೊಂದು ರೀತಿಯ ಮಾಹಿತಿ ಕೊಡೋಕೆ ಪ್ರಯತ್ನಿಸುತ್ತಿದ್ದಾರೆ. ಅವರು ತುಂಬ ಅಂಹಕಾರಿ ಅಂತ ನನಗೆ ಅನಿಸುತ್ತದೆ’ ಎಂದು ಸಂಗೀತಾ ಹೇಳಿದ್ದಾರೆ. ಈ ಸಂಚಿಕೆ ಜನವರಿ 1ರಂದು ರಾತ್ರಿ 9 ಗಂಟೆಗೆ ‘ಕಲರ್ಸ್​ ಕನ್ನಡ’ ಟಿವಿಯಲ್ಲಿ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಲೈವ್​ ನೋಡಲು ಅವಕಾಶ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us