ಟಿಆರ್​ಪಿಯಲ್ಲಿ ಬಿಗ್ ಬಾಸ್​ನೂ ಹಿಂದಿಕ್ಕಿದ ‘ಸರಿಗಮಪ’; ಹೊಸ ದಾಖಲೆ ಸೃಷ್ಟಿ

|

Updated on: Jan 03, 2025 | 2:32 PM

ಇತ್ತೀಚಿನ ಟಿಆರ್​ಪಿ ವರದಿಯ ಪ್ರಕಾರ, ಜೀ ಕನ್ನಡದ ‘ಸರಿಗಮಪ’ ಸಂಗೀತ ಕಾರ್ಯಕ್ರಮವು ಬಿಗ್ ಬಾಸ್ ಟಿಆರ್​ಪಿ ಅನ್ನು ಹಿಂದಿಕ್ಕಿದೆ. ಬಿಗ್ ಬಾಸ್ ವಾರಾಂತ್ಯದ ಎಪಿಸೋಡ್‌ಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದರೂ, ಸರಿಗಮಪ ಒಟ್ಟಾರೆ ಟಿಆರ್​ಪಿಯಲ್ಲಿ ಮುಂಚೂಣಿಯಲ್ಲಿದೆ. ಯಾವ ಶೋನ ಟಿಆರ್​ಪಿ ಎಷ್ಟು ಎಂಬ ಬಗ್ಗೆ ಇಲ್ಲಿದೆ ವಿವರ.

ಟಿಆರ್​ಪಿಯಲ್ಲಿ ಬಿಗ್ ಬಾಸ್​ನೂ ಹಿಂದಿಕ್ಕಿದ ‘ಸರಿಗಮಪ’; ಹೊಸ ದಾಖಲೆ ಸೃಷ್ಟಿ
ಬಿಗ್ ಬಾಸ್
Follow us on

ಇಷ್ಟು ದಿನಗಳ ಕಾಲ ಟಿಆರ್​ಪಿಯಲ್ಲಿ ಬಿಗ್ ಬಾಸ್ ಪಾರುಪತ್ಯ ಸಾಧಿಸುತ್ತಾ ಬರುತ್ತಿತ್ತು. ಎಲ್ಲಾ ಧಾರಾವಾಹಿಗಳ ಟಿಆರ್​ಪಿಯನ್ನು ಬೀಟ್ ಮಾಡಿ ಬಿಗ್ ಬಾಸ್ ಮೊದಲ ಸ್ಥಾನದಲ್ಲಿ ಇರುತ್ತಿತ್ತು. ಆದರೆ, ಬೇಟೆಗಾರನನ್ನು ಬೇಟೆ ಆಡುವ ರಣ ಬೇಟೆಗಾರ ಬಂದ ಎಂಬ ಡೈಲಾಗ್​​ಬಂತೆ ‘ಬಿಗ್ ಬಾಸ್’ ದಾಖಲೆಯನ್ನು ‘ಸರಿಗಮಪ’ ಹಿಂದಿಕ್ಕಿದೆ. ಭರ್ಜರಿ ಟಿಆರ್​ಪಿ ಪಡೆಯುವ ಮೂಲಕ ಈ ಶೋ ಮೊದಲ ಸ್ಥಾನ ಪಡೆದಿದೆ.

52ನೇ ವಾರದ ಟಿಆರ್​ಪಿ ಪ್ರಕಾರ, ಬಿಗ್ ಬಾಸ್​ಗೆ ಗ್ರಾಮಾಂತರ ಹಾಗೂ ನಗರ ಭಾಗದಲ್ಲಿ ವಾರದ ದಿನ 8 ಟಿವಿಆರ್, ಶನಿವಾರ 9.1 ಟಿವಿಆರ್ ಹಾಗೂ ಭಾನುವಾರ 10 ಟಿವಿಆರ್​ ಸ್ಕಿದೆ. ವಾರಾಂತ್ಯದಲ್ಲಿ ಸುದೀಪ್ ಅವರು ಇರುವ ಕಾರಣ ಶೋಗೆ ಭರ್ಜರಿ ಟಿಆರ್​ಪಿ ದೊರೆಯುತ್ತಿದೆ. ಅಚ್ಚರಿ ಎಂಬಂತೆ ಬಿಗ್ ಬಾಸ್ ಟಿಆರ್​ಪಿಯನ್ನು ಸರಿಗಮಪ ಹಿಂದಿಕ್ಕಿದೆ.

ಇದನ್ನೂ ಓದಿ: ಸರಿಗಮಪ ಶೋನಿಂದ ರಾಜೇಶ್ ಕೃಷ್ಣನ್ ಹೊರಹೋಗಲು ಅನುಶ್ರೀ ಕಾರಣ’; ಅಚ್ಚರಿ ವಿಚಾರ ಹೇಳಿದ ವಿಜಯ್ ಪ್ರಕಾಶ್

‘ಸರಿಗಮಪ’ ಆಡಿಷನ್ ಇತ್ತೀಚೆಗೆ ಪೂರ್ಣಗೊಂಡಿದೆ. ಶನಿವಾರ ಹಾಗೂ ಭಾನುವಾರ ಸಂಜೆ 7.30ರಿಂದ 9 ಗಂಟೆವರೆಗೆ ಈ ಶೋ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಆಡಿಷನ್ ಎಪಿಸೋಡ್ ಉತ್ತಮ ಟಿಆರ್​ಪಿ ಪಡೆದುಕೊಂಡಿದೆ. ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ 11.1 ಟಿವಿಆರ್ ಹಾಗೂ ಗ್ರಾಮೀಣ ಭಾಗದಲ್ಲಿ 13.1 ಟಿವಿಆರ್ ಈ ಶೋಗೆ ಸಿಕ್ಕಿದೆ. ಈ ಮೂಲಕ ಬಿಗ್ ಬಾಸ್​ನ ಶೋ ಹಿಂದಿಕ್ಕಿದೆ. ‘ಸರಿಗಮಪ’ ಶೋನಲ್ಲಿ ಅನುಶ್ರೀ ಅವರು ಆ್ಯಂಕರಿಂಗ್ ಮಾಡುತ್ತಿದ್ದಾರೆ. ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯ ಜಡ್ಜ್ ಸ್ಥಾನದಲ್ಲಿ ಇದ್ದಾರೆ.

ಧಾರಾವಾಹಿಗಳ ಟಿಆರ್​ಪಿ

ಧಾರಾವಾಹಿಗಳ ಟಿಆರ್​ಪಿ ವಿಚಾರಕ್ಕೆ ಬರೋದಾದರೆ, ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ಎರಡನೇ ಸ್ಥಾನದಲ್ಲಿ ‘ಅಮೃತಧಾರೆ’ ಹಾಗೂ ‘ಅಣ್ಣಯ್ಯ’ ಧಾರಾವಾಹಿಗಳು ಇವೆ. ಮೂರನೇ ಸ್ಥಾನದಲ್ಲಿ ‘ಪುಟ್ಟಕ್ಕನ ಮಕ್ಕಳು’, ನಾಲ್ಕನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಹಾಗೂ ಐದನೇ ಸ್ಥಾನದಲ್ಲಿ ‘ಭಾಗ್ಯ ಲಕ್ಷ್ಮೀ’ ಧಾರಾವಾಹಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:30 pm, Fri, 3 January 25