ಲಾಯರ್​ ರುದ್ರ ಪ್ರತಾಪನಿಗೆ ಏಟು ಕೊಟ್ಟ ಸೀತಾ; ಸಿಹಿ ಸುದ್ದಿಗೆ ಬಂದವರಿಗೆಲ್ಲ ಇದೇ ಗತಿ

‘ಸೀತಾ ರಾಮ’ ಧಾರಾವಾಹಿಯಲ್ಲಿ ಹಲವು ಭಾವನಾತ್ಮಕ ತಿರುವುಗಳು ನಡೆಯುತ್ತಿವೆ. ರುದ್ರಪ್ರತಾಪ್ ಸಿಹಿಯನ್ನು ಅಪಹರಿಸಿದ್ದಾನೆ ಮತ್ತು ಸೀತಾ ತನ್ನ ಮಗಳನ್ನು ರಕ್ಷಿಸಲು ಹೋರಾಡುತ್ತಿದ್ದಾಳೆ. ಭಾರ್ಗವಿ ಮತ್ತು ಜಗದೀಶ್ ಸಿಹಿಯನ್ನು ದೂರ ಮಾಡಲು ಯೋಜಿಸುತ್ತಿದ್ದಾರೆ. ಆದರೆ ಸೀತಾ ಅವರ ವಿರುದ್ಧ ಸಿಡಿದುಬಿಟ್ಟಿದ್ದಾಳೆ.

ಲಾಯರ್​ ರುದ್ರ ಪ್ರತಾಪನಿಗೆ ಏಟು ಕೊಟ್ಟ ಸೀತಾ; ಸಿಹಿ ಸುದ್ದಿಗೆ ಬಂದವರಿಗೆಲ್ಲ ಇದೇ ಗತಿ
ಸೀತಾ ರಾಮ
Edited By:

Updated on: Oct 29, 2024 | 11:54 AM

‘ಸೀತಾ ರಾಮ’ ಧಾರಾವಾಹಿಯಲ್ಲಿ ಹಲವು ಟ್ವಿಸ್ಟ್​ಗಳು ಬರುತ್ತಿವೆ. ಮಗಳಿಗಾಗಿ ತಾಯಿಯ ಹೃದಯ ಮಿಡಿಯುತ್ತಿದೆ. ಸಿಹಿ ತನ್ನಿಂದ ದೂರ ಆಗುವ ಭಯ ಸೀತಾಳಿಗೆ ಕಾಡಿದೆ. ತನ್ನ ಮಗಳನ್ನು ದೂರ ಮಾಡಲು ಬಂದವರ ವಿರುದ್ಧ ಸೀತಾ ಸಿಡಿದೇಳುತ್ತಿದ್ದಾಳೆ. ಈಗ ರುದ್ರ ಪ್ರತಾಪನಿಗೆ ಸೀತಾ ಸರಿಯಾದ ಪಾಠ ಕಲಿಸಿದ್ದಾಳೆ. ಅವಳ ನಿಜವಾದ ಮುಖ ಕಂಡು ಅವನು ಹೆದರಿ ಹೋಗಿದ್ದಾನೆ.

ಸೀತಾಳ ಹಿನ್ನೆಲೆ ಏನು ಎಂಬುದನ್ನು ತಿಳಿದುಕೊಳ್ಳಲು ಎಲ್ಲರೂ ತುದಿಗಾಲಿನಲ್ಲಿ ಇದ್ದರು. ಸಿಹಿಯು ಸೀತಾ ಮಗಳಲ್ಲ ಅನ್ನುವುದು ಕೂಡ ಗೊತ್ತಾಗಿ ಹೋಗಿದೆ. ಹೀಗಿರುವಾಗಲೇ ಲಾಯರ್ ರುದ್ರ ಪ್ರತಾಪ್ ಸಿಹಿಯನ್ನು ಕಿಡ್ನಾಪ್ ಮಾಡಿದ್ದಾನೆ. ಸಿಹಿಯನ್ನು ಮುಂದಿಟ್ಟುಕೊಂಡು ಸೀತೆಗೆ ಬ್ಲ್ಯಾಕ್​ಮೇಲ್ ಮಾಡುವ ಆಲೋಚನೆ ಜಗದೀಶ್​ನದ್ದಾಗಿತ್ತು. ಈ ಬಗ್ಗೆ ಭಾರ್ಗವಿ ದೇಸಾಯಿಗೆ ಕರೆ ಮಾಡಿ ಕೂಡ ಜಗದೀಶ್ ಹೇಳಿದ್ದ.

ಸೀತಾಳ ಕೈಯಲ್ಲಿ ಏನಾಗುತ್ತದೆ ಅನ್ನೋದು ಜಗದೀಶ್​ನ ಆಲೋಚನೆ ಆಗಿತ್ತು. ಆದರೆ, ಸೀತಾ ಅಂದುಕೊಂಡಂತಿಲ್ಲ. ಮಗಳ ಸುದ್ದಿಗೆ ಬಂದವರ ವಿರುದ್ಧ ಸಿಡಿದೆದ್ದಿದ್ದಾಳೆ. ಅವಳು ಲಾಯರ್​ ರುದ್ರ ಪ್ರತಾಪ್​ಗೆ ಕೋಲಿನಿಂದ ಹೊಡೆದಿದ್ದಾಳೆ. ಸದ್ಯ ಈ ಎಪಿಸೋಡ್ ಹೈಲೈಟ್ ಆಗುತ್ತಿದೆ.

ಸೀತಾಳಿಂದ ಮಗಳನ್ನು ದೂರ ಮಾಡಬೇಕು ಎನ್ನುವ ಪ್ಲ್ಯಾನ್​ನಲ್ಲಿ ಭಾರ್ಗವಿ ಇದ್ದಾಳೆ. ಆದರೆ, ಈ ಪ್ಲ್ಯಾನ್ ಕೆಲಸ ಮಾಡುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಸಿಹಿಯ ನಿಜವಾದ ತಂದೆ-ತಾಯಿ ಬಂದು ಮಗಳನ್ನು ನನಗೆ ನೀಡಿ ಎಂದು ಹಠ ಹಿಡಿದ್ದಾರೆ. ಇದಕ್ಕೆ ಸೀತಾ ಒಪ್ಪುತ್ತಿಲ್ಲ.

ಇದನ್ನೂ ಓದಿ: ‘ಸೀತಾ ರಾಮ’ ಧಾರಾವಾಹಿಯಲ್ಲಿ ಇದೆಂಥಾ ಟ್ವಿಸ್ಟ್: ಸಿಹಿಯ ಪಾತ್ರವೇ ಕೊನೆ ಆಯ್ತಲ್ಲ..

‘ಸೀತಾ ರಾಮ’ ಧಾರಾವಾಹಿ ಪ್ರಸಾರ ಆರಂಭಿಸಿ ಎರಡು ವರ್ಷಗಳು ಕಳೆಯುತ್ತಾ ಬಂದಿದೆ. ಈ ವೇಳೆ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಈಗ ಸೀತಾಳಿಂದ ಮಗಳು ಸಿಹಿ ದೂರವಾಗುತ್ತಾಳಾ ಎನ್ನುವ ಪ್ರಶ್ನೆ ಮೂಡಿದೆ. ಸಿಹಿಯ ಸುದ್ದಿಗೆ ಬಂದ ಎಲ್ಲರಿಗೂ ಇದೇ ಗತಿ ಉಂಟಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:53 am, Tue, 29 October 24