Seetha Raama Serial: ರಾಮ್ ಮತ್ತು ಅಶೋಕ್ ಹುಡುಕಿಕೊಂಡು ಬಂದ ಸತ್ಯ ನಾಶವಾಗುತ್ತಾ? ಭಾರ್ಗವಿಯ ಆಟದಲ್ಲಿ ಜಯ ಯಾರಿಗೆ?

ಕೋರಮಂಗಲ ಆಫೀಸ್ನಲ್ಲಿ ಫೈಲ್ ಹುಡುಕಿಕೊಂಡು ಹೊರಟ ರಾಮ್, ಅಶೋಕ್ ಗೆ ದಾರಿಯಲ್ಲಿ ದೊಡ್ಡ ಶಾಕ್ ಆಗುತ್ತದೆ. ಅವರು ಹೋಗಬೇಕಾದ ಆಫೀಸ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಉಗುಳುತ್ತಿರುತ್ತದೆ. ಹಾಗಾದರೆ ಮುಂದೇನಾಗಬಹುದು? ಭಾರ್ಗವಿಯ ಈ ಉಪಾಯದಲ್ಲಿ ಸತ್ಯ ಬೆಂಕಿಯಲ್ಲಿ ನಾಶವಾಗುತ್ತಾ?

Seetha Raama Serial: ರಾಮ್ ಮತ್ತು ಅಶೋಕ್ ಹುಡುಕಿಕೊಂಡು ಬಂದ ಸತ್ಯ ನಾಶವಾಗುತ್ತಾ? ಭಾರ್ಗವಿಯ ಆಟದಲ್ಲಿ ಜಯ ಯಾರಿಗೆ?
ಸೀತಾ ರಾಮ
Updated By: ಮಂಜುನಾಥ ಸಿ.

Updated on: Aug 10, 2023 | 10:20 PM

ಸೀತಾ ರಾಮ(Seetha Raama Serial) ಧಾರಾವಾಹಿ ಸಂಚಿಕೆ 19: ಸಿಹಿಯ ಆತಂಕಕ್ಕೆ ರಾಮ್ ಸಮಾಧಾನ ಮಾಡುತ್ತಾನೆ. ಅಮ್ಮ ಜೈಲಿಗೆ ಹೋಗಿಬಿಟ್ಟರೇ ಗತಿ ಏನು ಎಂಬುದು ಅವಳ ಚಿಂತೆ, ಅದಕ್ಕಾಗಿಯೇ ರಾಮ್, ಅಮ್ಮ ಆಫೀಸ್ ನಲ್ಲಿಯೇ ಇದ್ದಾಳೆ ಎಂದು ಸುಳ್ಳು ಹೇಳುವ ಮೂಲಕ ತನ್ನ ಪುಟ್ಟ ಫ್ರೆಂಡ್ ಗಿದ್ದ ಅನುಮಾನವನ್ನು ಬಗೆಹರಿಸುತ್ತಾನೆ. ಇನ್ನು ರುದ್ರ ಪ್ರತಾಪನ ಆಫೀಸ್ನಿಂದ ಹೊರಟ ಸೀತಾ, ಮನೆ ತಲುಪುತ್ತಾಳೆ. ಅವಳನ್ನು ನೋಡಿದ ಸಿಹಿಗೆ ತನ್ನ ಫ್ರೆಂಡ್ ಹೇಳಿದ ಮಾತು ಸತ್ಯ ಎನಿಸಿ, ಖುಷಿಯಾಗುತ್ತದೆ.

ಕೇಳ್ದೆ ಇದ್ದರೂ ಕೊಡೋದರಲ್ಲಿ ಖುಷಿ ಇದೆ

ಮನೆಯಲ್ಲಿ ಸಿಹಿ, ಸೀತಾಳಿಗೆ ಪ್ಯಾಲೇಸ್ ಯಾವಾಗ ಬರುತ್ತದೆ ಎಂದು ಕೇಳುತ್ತಾಳೆ. ಅದಕ್ಕೆ ಸೀತಾ, “ಮನಸ್ಸಿನಲ್ಲಿಯೇ ಮಗಳ ಕನಸನ್ನು ನನಸು ಮಾಡಲು ಸಾಧ್ಯವಿಲ್ಲ. ಆದರೆ ಇರುವ ಮನೆಯೂ ಉಳಿಸಿಕೊಳ್ಳಲು ಸಾಧ್ಯವಾಗುತ್ತೋ ಇಲ್ಲವೋ ಎಂಬುದನ್ನು ಹೇಗೆ ಹೇಳುವುದುಎಂದು ಚಿಂತೆಯಾಗುತ್ತದೆ. ಅಷ್ಟೇ ಹೊತ್ತಿಗೆ ಸೀತಾಳನ್ನು ಹುಡುಕಿಕೊಂಡು ಶ್ರೀರಾಮನೇ ಮನೆಗೆ ಬರುತ್ತಾನೆ. ಯಾರಿಗೂ ಹೇಳದೇ ಹೋಗಿರುವ ಸೀತಾಳ ಮೇಲೆ ಕೋಪ ಇದ್ದರೂ ಅವಳ ಸ್ವಾಭಿಮಾನ ಶ್ರೀರಾಮನಿಗೆ ಅಚ್ಚರಿ ಮೂಡಿಸುತ್ತದೆ. ಕೇಳ್ದೆ ಇದ್ದರೂ ಕೊಡೋದರಲ್ಲಿ ಖುಷಿ ಇದೆ ಎಂಬುದನ್ನು ನಂಬಿರುವ ರಾಮನಿಗೆ ಸಿಹಿಯ ಅಜ್ಜಿ ತಾತನೂ ಕೈ ಜೋಡಿಸುತ್ತಾರೆ. ತಮ್ಮ ಮನೆ ಪತ್ರ ಕೊಟ್ಟು ಇದನ್ನು ಅಡವಿಟ್ಟು ನಿಮ್ಮ ಮನೆ ಉಳಿಸಿಕೊಳ್ಳು ಎಂದು ಸೀತಾಳಿಗೆ ಹೇಳುತ್ತಾರೆ. ಇನ್ನು ರಾಮ್ ಕೂಡ, ಕಷ್ಟವನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ, ಎಲ್ಲದಕ್ಕೂ ಪರಿಹಾರ ಇದ್ದೇ ಇರುತ್ತದೆ ಎನ್ನುತ್ತಾನೆ.

ಇನ್ನು ರಾಮ ನನ್ನು ಕರೆದುಕೊಂಡು ಹೋಗಲು ಅಶೋಕ್ ಬರುತ್ತಾನೆ. ಜೊತೆಯಲ್ಲಿ ಆಫೀಸ್ ನಲ್ಲಿ ಇಲ್ಲದ ಫೈಲ್ ಗಳೆಲ್ಲವೂ ಕೋರಮಂಗಲ ಆಫೀಸ್ನಲ್ಲಿ ಇರುವುದನ್ನು ತಿಳಿದು ಅದನ್ನು ಶ್ರೀರಾಮನಿಗೆ ತಿಳಿಸುತ್ತಾನೆ. ಆದರೆ ತಾತ ಫೋನ್ ಮಾಡಿದಾಗ ಅವರಿಬ್ಬರೂ ಕೋರಮಂಗಲಕ್ಕೆ ಹೋಗುತ್ತಿರುವ ವಿಷಯ ಭಾರ್ಗವಿ ಕಿವಿಗೂ ಬೀಳುತ್ತದೆ. ಇನ್ನೇನು ರಾಮ್, ಅಶೋಕ್ ಆ ಆಫೀಸ್ ಗೆ ತಲುಪುವಷ್ಟರಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಆಫೀಸ್ ಸುಟ್ಟು ಉರಿಯುತ್ತದೆ. ಹಾಗಾದರೆ ರಾಮ್, ಅಶೋಕ್ ಹುಡುಕಿಕೊಂಡು ಬಂದ ಸತ್ಯ ನಾಶವಾಗುತ್ತಾ? ಭಾರ್ಗವಿಯ ಕಳ್ಳತನ ಮನೆಯವರಿಗೆ ತಿಳಿಯುತ್ತಾ? ಕಾದು ನೋಡಬೇಕಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ