Seetha Raama Serial: ಲಾಯರ್ ರುದ್ರ ಪ್ರತಾಪ ಮಾಡಿದ ಸಂಚಿನಿಂದ ಸೀತಾಳನ್ನು ಕಾಪಾಡುತ್ತಾನಾ ರಾಮ್?

| Updated By: ರಾಜೇಶ್ ದುಗ್ಗುಮನೆ

Updated on: Aug 15, 2023 | 7:18 AM

ಲಾಯರ್ ರುದ್ರ ಪ್ರತಾಪ ಮಾಡಿದ ಗಲಾಟೆಗೆ ಸೀತಾಳನ್ನು ರಾಮ್ ನೋಡುವಂತಾಗುತ್ತದೆ. ಆದರೆ ಸೀತಾ ಯಾಕೆ ಅಲ್ಲಿದ್ದಾಳೆ? ಅವಳು ಬಂದಿದ್ದೇಕೆ ಎನ್ನುವ ಪ್ರಶ್ನೆ ಮೂಡಿದೆ. ನಾನು ಯಾರು ಎಂಬುದು ಸೀತಾಳಿಗೆ ತಿಳಿದರೆ ಎಂಬುದು ರಾಮನ ಭಯ. ಒಂದು ಕಡೆ ಅಚ್ಚರಿ ಹಾಗೂ ಗೊಂದಲ ಎರಡೂ ರಾಮ್​ನ ಕಾಡುತ್ತದೆ.

Seetha Raama Serial: ಲಾಯರ್ ರುದ್ರ ಪ್ರತಾಪ ಮಾಡಿದ ಸಂಚಿನಿಂದ ಸೀತಾಳನ್ನು ಕಾಪಾಡುತ್ತಾನಾ ರಾಮ್?
ಸಿಹಿ-ಸೀತಾ-ರಾಮ್
Follow us on

‘ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 21: ಸೀತಾ, ರಾಮ್ ಇಬ್ಬರೂ ಒಂದೇ ಹೋಟೆಲ್​ಗೆ ಬಂದಿದ್ದಾರೆ. ಭಾರ್ಗವಿಯ ಮಾತಿಗೆ ಕಟ್ಟು ಬಿದ್ದ ರಾಮ್ ಫ್ಯಾಮಿಲಿಯವರ ಜೊತೆ ಊಟಕ್ಕೆ ಬಂದಿರುತ್ತಾನೆ. ಆದರೆ ಬಂದವನಿಗೆ, ಎಲ್ಲರೂ ಇದ್ದರೂ ಸತ್ಯ ಚಿಕ್ಕಪ್ಪ ಮಾತ್ರ ಇಲ್ಲ ಎಂಬ ಕೊರಗು ಕಾಡುತ್ತದೆ. ಅಲ್ಲೇ ಬಾರ್​​ನಲ್ಲಿ ಕುಳಿತಿದ್ದ ಅವರನ್ನು ರಾಮ್ ಕರೆಯುತ್ತಾನೆ ‘ನಾನು ಬರ್ತ್ತಿನಿ ನೀನು ಹೋಗು’ ಅಂತ ಹೇಳಿ ತನ್ನ ಕೆಲಸ ಮುಂದುವರಿಸುತ್ತಾರೆ. ‘ಅಣ್ಣ ಅತ್ತಿಗೆಗೆ ಆದ ಮೋಸ ನಿನಗಾಗಲು ನಾನು ಬಿಡುವುದಿಲ್ಲ’ ಎಂದು ಹೇಳುವಾಗ ಅವನ ಹೆಂಡತಿ ಕೇಳಿಸಿಕೊಳ್ಳುತ್ತಾಳೆ. ಆದರೆ ಅವಳನ್ನೂ ಗದರಿ ಅಲ್ಲಿಂದ ಕಳುಹಿಸುತ್ತಾನೆ. ಇನ್ನು ಸೀತಾಳಿಗೆ ಬ್ಯಾಂಕ್​ನವರು ಬರುತ್ತಾರೆ ಎಂದು ಕರೆಸಿದ ರುದ್ರ ಪ್ರತಾಪ ಅವಳನ್ನು ಸುಮ್ಮನೆ ಕೂರಿಸಿಕೊಂಡು ಕಾಲ ಹರಣ ಮಾಡುತ್ತಾನೆ.

ಭಾರ್ಗವಿ ಏನೇ ಮಾಡಿದರೂ ಅದರ ಹಿಂದೆ ಏನಾದರೂ ಕಾರಣ ಇದ್ದೇ ಇರುತ್ತೆ ಅನ್ನೋದು ಅವಳ ಗಂಡ ವಿಶ್ವಜಿತ್ ಯೋಚನೆ ಅದಕ್ಕೆ ಸರಿಯಾಗಿ ಅದೇ ಹೋಟೆಲ್​ಗೆ ಶರ್ಮಾ ಅವರ ಕುಟುಂಬದ ಆಗಮನವಾಗುತ್ತದೆ. ತಮ್ಮ ಜೊತೆಯೇ ಕುಳಿತು ಊಟ ಮಾಡಿ ಎಂದು ಭಾರ್ಗವಿ ಕರೆಯುತ್ತಾಳೆ. ಹಾಗಾಗಿ ಅವರು ದೇಸಾಯಿ ಕುಟುಂಬದವರ ಜೊತೆ ಊಟಕ್ಕೆ ಕುಳಿತುಕೊಳ್ಳುತ್ತಾರೆ. ಆಗ ಭಾರ್ಗವಿಯ ಗಂಡನಿಗೆ, ಅವರು ರಾಮನ ಮದುವೆ ವಿಚಾರ ಮಾತನಾಡಲು ಬಂದಿದ್ದಾರೆ ಎಂಬುದು ಅರಿವಿಗೆ ಬರುತ್ತದೆ. ಇನ್ನು ರಾಮ್ ಸೀತಾ ಮಗಳು ಸಿಹಿ ಕೊಟ್ಟ ಟಿಫನ್ ಬಿಸಿ ಮಾಡಲು ಕೊಡುತ್ತಾನೆ. ಅಷ್ಟು ದೊಡ್ಡ ಹೋಟೆಲ್​ಗೆ ಬಂದರೂ ಅದನ್ನು ತಿನ್ನುವುದು ಮನೆಯವರಿಗೆ ಇಷ್ಟವಾಗುವುದಿಲ್ಲವಾದರೂ ರಾಮ್ ಮಾತ್ರ ಅದನ್ನೇ ತಿನ್ನುತ್ತೀನಿ ಅನ್ನುತ್ತಾನೆ. ಆ ಊಟವನ್ನು ಬಿಸಿ ಮಾಡಿಕೊಂಡು ಬರುವಾಗ ಅದರ ಘಮ ಸೀತಾಳಿಗೆ, ತಮ್ಮ ಮನೆಯ ಅಡಿಗೆಯ ಪರಿಮಳ ಬಂದಂತಾಗಿ ಖುಷಿ ಪಡುತ್ತಾಳೆ. ಅದನ್ನು ನೋಡಿದ ರುದ್ರ ಪ್ರತಾಪ ನಮ್ಮ ಟೇಬಲ್​ಗೂ ಅದನ್ನೇ ತನ್ನಿ ಎಂದು ಹೇಳುತ್ತಾನೆ. ಆದರೆ ಅದಕ್ಕೆ ನಿರಾಕರಿಸಿದ ವೇಟರ್ ಅದು ಅವರು ತಂದಿದ್ದು, ಕೊಡಲು ಆಗುವುದಿಲ್ಲ ಎನ್ನುತ್ತಾನೆ. ಅದಕ್ಕೆ ಸಿಟ್ಟಾದ ಲಾಯರ್ ರುದ್ರ ಅಲ್ಲಿ ಗಲಾಟೆ ಮಾಡುತ್ತಾನೆ. ಆ ಗಲಾಟೆ ಕೇಳಿದ ರಾಮ್ ಹಿಂದೆ ತಿರುಗಿ ನೋಡುವಾಗ ಸೀತಾ ಕಾಣುತ್ತಾಳೆ. ರಾಮ್ ಯಾರೆಂಬುದು ಸೀತಾಳಿಗೆ ತಿಳಿಯುತ್ತಾ? ಸೀತಾಳನ್ನು ಲಾಯರ್ ನಿಂದ ಬಚಾವ್ ಮಾಡುತ್ತಾನಾರಾಮ್ ? ಕಾದು ನೋಡಬೇಕಾಗಿದೆ.

ಇದನ್ನೂ ಓದಿ: : ರಾಮನೇ ದೇಸಾಯಿ ಮನೆಯ ಮೊಮ್ಮಗ ಅನ್ನೋ ಸತ್ಯ ಸೀತಾಳಿಗೆ ತಿಳಿಯುತ್ತಾ? ಸೀತಾ ಲಾಯರ್ ಬಳಿಗೆ ಬಂದ ವಿಷಯ ರಾಮನಿಗೆ ತಿಳಿಯುತ್ತಾ?

ಸೀತಾಳ ದೇವತೆ ಸಿಹಿ

ಅಜ್ಜಿಗೆ ತಲೆ ನೋವು ಬಂದಿದ್ದನ್ನು ನೋಡಿ ಸಿಹಿ ಹತ್ತಿರದ್ದಲ್ಲಿದ್ದ ಅಂಗಡಿಗೆ ಹೋಗಿ ಜಂಡೂ ಬಾಮ್​ನ ತರುತ್ತಾಳೆ. ಸಿಹಿ ಮಾಡಿದ ಮಸಾಜ್​ನಿಂದ ಶಾಂತಜ್ಜಿಯ ತಲೆ ನೋವು ಮಾಯವಾಗುತ್ತದೆ. ಸೀತಾಳಿಗೆ ದೇವತೆಯಾಗಿ ಬಂದಿರೋ ಸಿಹಿಯನ್ನು ಅಜ್ಜಿ ಕೊಂಡಾಡುತ್ತಾಳೆ.

 

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ