Seetha Raama: ಭಾರ್ಗವಿಯ ಮೋಸದಾಟ ರಾಮ್ ಮತ್ತು ಸೂರ್ಯ ಪ್ರಕಾಶ್​ಗೆ ತಿಳಿಯುತ್ತಾ?

ಅಶೋಕ್ ಆಫೀಸ್​ನಿಂದ ಕೆಲವು ಮಾಹಿತಿಗಳನ್ನು ತಂದು ಸೂರ್ಯ ಪ್ರಕಾಶ್ ಮತ್ತು ಶ್ರೀರಾಮನ ಮುಂದೆ ಇಟ್ಟಿದ್ದಾನೆ. ಅದನ್ನೆಲ್ಲಾ ನೋಡಿ ಇಬ್ಬರಿಗೂ ಆತಂಕವಾಗುತ್ತದೆ. ಇದನ್ನೆಲ್ಲಾ ಭಾರ್ಗವಿ ಬಳಿ ಕೇಳೋಣ ಎಂದು ರಾಮ್ ಹೊರಡುತ್ತಾನೆ. ಆದರೆ ಅವನನ್ನು ಅಶೋಕ್ ತಡೆಯುತ್ತಾನೆ. ಭಾರ್ಗವಿಯ ಮೋಸದಾಟ ರಾಮ್ ಮತ್ತು ಸೂರ್ಯ ಪ್ರಕಾಶ್​ಗೆ ತಿಳಿಯುತ್ತಾ? ರಾಮನಿಗೆ ಮದ್ದರೆಯುತ್ತಿರುವ ಭಾರ್ಗವಿಗೆ ಅಶೋಕ್ ಶಾಕ್ ಕೊಡುತ್ತಾನಾ? ಕಾದು ನೋಡೋಣ.

Seetha Raama: ಭಾರ್ಗವಿಯ ಮೋಸದಾಟ ರಾಮ್ ಮತ್ತು ಸೂರ್ಯ ಪ್ರಕಾಶ್​ಗೆ ತಿಳಿಯುತ್ತಾ?
ಗಗನ್​ ಚಿನ್ನಪ್ಪ
Edited By:

Updated on: Sep 11, 2023 | 10:44 PM

‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 42: ಸೀತಾ ಮತ್ತು ಸಿಹಿ ತಮ್ಮ ವಠಾರದಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿಯಲ್ಲಿ ಕೃಷ್ಣ, ಯಶೋದೆಯಾಗಿ ಎಲ್ಲರ ಮನಗೆಲ್ಲುತ್ತಾರೆ. ಇನ್ನು ರಾಮನ ಜೊತೆಯಲ್ಲಿ ಬಂದ ಅಶೋಕ್, ಸೀತಾಳ ಗೆಳತಿ ಪ್ರಿಯಾಳ ಕೈಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಅವಳಿಗೆ ನೂರು ಸುಳ್ಳು ಹೇಳಿ ನಂಬಿಸುವುದರಲ್ಲಿ ಅಶೋಕ್ ಸುಸ್ತೋ ಸುಸ್ತು. ಇನ್ನು ಸಿಹಿ ಹುಡುಕಿಕೊಂಡು ಬಂದ ಶ್ರೀರಾಮ ಅವಳು ಮುದ್ದಾಗಿ ಮಲಗಿರುವುದನ್ನು ನೋಡಿ ಖುಷಿ ಪಡುತ್ತಾನೆ. ಆಗ ಸೀತಾ (Seetha) ನಿಮ್ಮ ಫ್ರೆಂಡ್​ನನ್ನು ಎಷ್ಟು ಬೇಕೋ ಅಷ್ಟು ನೋಡಿಕೊಳ್ಳಿ. ನಾಳೆ ಈ ಮನೆ ನಮ್ಮದೋ ಅಲ್ಲವೋ ಗೊತ್ತಿಲ್ಲ ಎನ್ನುತ್ತಾಳೆ. ಆ ಮಾತಿಗೆ ಶ್ರೀರಾಮ್ ಈ ಮನೆ ಸಿಹಿಯದ್ದೇ. ಇದನ್ನು ಬಿಟ್ಟು ನೀವೆಲ್ಲಿಗೂ ಹೋಗುವುದಿಲ್ಲ ಎನ್ನುತ್ತಾನೆ.

ರಾಮನನ್ನು ಬಿಟ್ಟು ಅಶೋಕ್ ಆ ರಾತ್ರಿಯಲ್ಲಿ ಆಫೀಸ್ ಗೆ ಬರುತ್ತಾನೆ. ಮ್ಯಾನೇಜರ್ ಚರಣ್ ಪಾತ್ರಧಾರಿ, ಅದಕ್ಕೆ ಸೂತ್ರಧಾರಿ ಭಾರ್ಗವಿ ಆಗಿರಬಹುದು ಎಂಬ ಅನುಮಾನವನ್ನು ಅವನಿಗೆ ಬಗೆಹರಿಸಿಕೊಳ್ಳಬೇಕಾಗಿರುತ್ತದೆ. ರಾಮನಿಗೆ ಈ ವಿಚಾರ ಹೇಳದೇ ಆಫೀಸ್​ನಲ್ಲಿ ಕೆಲಸ ಇದೆ ನೀನು ಮನೆಗೆ ಹೊರಡು ಎನ್ನುತ್ತಾನೆ. ಇನ್ನು ರಾಮನ ಚಿಕ್ಕಿ ಭಾರ್ಗವಿ ತನ್ನ ಮಾತನ್ನು ಮೀರಿ ಹೊರಗಡೆ ಹೋದ ರಾಮನ ಜೀವನವನ್ನೇ ಸರ್ವನಾಶ ಮಾಡಲು ಪಣ ತೊಡುತ್ತಾಳೆ.

ಇದನ್ನೂ ಓದಿ:  ‘ಸೀತಾ ರಾಮ’ ಧಾರಾವಾಹಿ ಮೂಲಕ ಗಮನ ಸೆಳೆದ ವೈಷ್ಣವಿ

ಸೀತಾ ಮನೆಯಲ್ಲಿ ಅವಳ ಅತ್ತಿಗೆ ಬೆನ್ನು ಬಿಡದ ಬೇತಾಳದಂತೆ ಅವಳ ಮನೆ ಮಾರಾಟ ಮಾಡಲು ಹಿಂದೆ ಬೀಳುತ್ತಾಳೆ. ಆದರೆ ಸೀತಾ ಮನೆ ಮಾರಾಟ ಮಾಡುವುದಿಲ್ಲ ಎನ್ನುವುದನ್ನು ಕೇಳಿ ಅವಳಿಗೆ ತಾನು ದುಡ್ಡು ಹೊಡೆಯಲು ಮಾಡಿದ್ದ ಪ್ಲಾನ್ ಹಾಳಾಯಿತಲ್ಲ ಎಂದು ಬೇಸರವಾಗುತ್ತದೆ. ಸಿಹಿಗೆ ಅವಳಮ್ಮನ ಮಾತು ಕೇಳಿ ಖುಷಿಯಾಗುತ್ತದೆ. ಆದರೆ ಸೀತಾಳಿಗೆ ಮಾತ್ರ ಹೇಗೆ ಮನೆ ಉಳಿಸಿಕೊಳ್ಳುವುದು, ಆಫೀಸ್ ಹಣ ಬರುತ್ತಾ? ಎಂದೆಲ್ಲಾ ಚಿಂತೆಯಾಗುತ್ತದೆ.

ಇದನ್ನೂ ಓದಿ: ಟಿಆರ್​ಪಿ ವಿವರ: ಎರಡನೇ ಸ್ಥಾನದಲ್ಲೇ ಮುಂದುವರಿದ ‘ಸೀತಾ ರಾಮ’; ಟಾಪ್ 5 ಧಾರಾವಾಹಿಗಳಿವು..

ಇನ್ನು ಅಶೋಕ್ ಆಫೀಸ್​ನಿಂದ ಕೆಲವು ಮಾಹಿತಿಗಳನ್ನು ತಂದು ಸೂರ್ಯ ಪ್ರಕಾಶ್ ಮತ್ತು ಶ್ರೀರಾಮನ ಮುಂದೆ ಇಟ್ಟಿದ್ದಾನೆ. ಅದನ್ನೆಲ್ಲಾ ನೋಡಿ ಇಬ್ಬರಿಗೂ ಆತಂಕವಾಗುತ್ತದೆ. ಇದನ್ನೆಲ್ಲಾ ಭಾರ್ಗವಿ ಬಳಿ ಕೇಳೋಣ ಎಂದು ರಾಮ್ ಹೊರಡುತ್ತಾನೆ. ಆದರೆ ಅವನನ್ನು ಅಶೋಕ್ ತಡೆಯುತ್ತಾನೆ. ಭಾರ್ಗವಿಯ ಮೋಸದಾಟ ರಾಮ್ ಮತ್ತು ಸೂರ್ಯ ಪ್ರಕಾಶ್​ಗೆ ತಿಳಿಯುತ್ತಾ? ರಾಮನಿಗೆ ಮದ್ದರೆಯುತ್ತಿರುವ ಭಾರ್ಗವಿಗೆ ಅಶೋಕ್ ಶಾಕ್ ಕೊಡುತ್ತಾನಾ? ಕಾದು ನೋಡೋಣ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us